ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಲೋಕದರ್ಶನ ವರದಿ

ಯಲ್ಲಾಪುರ: ನ.11:     ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಚರಣೆ ಕುರಿತು ಪೂರ್ವಭಾವಿ ಸಭೆ ಪಟ್ಟಣದ ತಾ.ಪಂ ಸಭಾಭವನದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕಕರ್ಿಕೋಡಿ ಅಧ್ಯಕ್ಷತೆಯಲ್ಲಿ ನಡೆಯಿತು. ಪಟ್ಟಣದ ವೈಟಿಎಸ್ಎಸ್ ಮೈದಾನದಲ್ಲಿ ಡಿ.22 ಹಾಗೂ 23 ರಂದು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಯಿತು.ನಾಲ್ಕನೇ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಕಾರ್ಯನಿರ್ವಹಿಸಿದವರಿಗೆ ಕೃತಜ್ಞತಾ ಪತ್ರ ವಿತರಿಸಲಾಯಿತು.

   ಸ್ವಾಗತ ಸಮಿತಿಗೆ ಗೌರವಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ, ಅಧ್ಯಕ್ಷರಾಗಿ ಶಾಸಕ ಶಿವರಾಮ ಹೆಬ್ಬಾರ, ಕಾಯರ್ಾಧ್ಯಕ್ಷರಾಗಿ ತಹಸೀಲ್ದಾರ ಡಿ. ಜಿ. ಹೆಗಡೆ ಅವರನ್ನು ಆಯ್ಕೆಗೊಳಿಸಲಾಯಿತು. ಜಿಲ್ಲಾ ಕಸಾಪ ಕಾರ್ಯದಶರ್ಿ ಗಂಗಾಧರ ಕೊಳಗಿ, ಖಜಾಂಚಿ ಉಮೇಶ ಮಂಡೊಳ್ಳಿ, ತಾಲೂಕು ಕಸಾಪ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ, ಕಾರ್ಯದಶರ್ಿಗಳಾದ ಸುಬ್ರಹ್ಮಣ್ಯ ಭಟ್ಟ, ಎಸ್.ಎಲ್.ಜಾಲಿಸತ್ಗಿ, ಖಜಾಂಚಿ ಜಿ.ಆರ್.ಹೆಗಡೆ, ತಾ.ಪಂ ಅಧ್ಯಕ್ಷ ಭವ್ಯಾ ಶೆಟ್ಟಿ, ಉಪಾಧ್ಯಕ್ಷ ಸುಜಾತಾ ಸಿದ್ದಿ ಉಪಸ್ಥಿತರಿದ್ದರು.