ಶ್ರೀಶೈಲ ಪಾದ ಯಾತ್ರೆಗಳಿಗೆ ಪ್ರಸಾದ ಸೇವೆ

Prasadam service for Srisailam foot pilgrims

ಮಹಾಲಿಂಗಪುರ 13: ನಗರದ ಬೆಳಗಲಿ ಮಾರ್ಗದಲ್ಲಿ ಎರಡನೇ ಬಾರಿಗೆ ಶ್ರೀ ಬಸವೇಶ್ವರ ಮಾಲಕರು ಮತ್ತು ಚಾಲಕರ ಸಂಘದ ನೇತೃತ್ವದಲ್ಲಿ ಎರಡು ದಿನ ನಿರಂತರವಾಗಿ ತಮ್ಮ ಸ್ವಯಂ ಪ್ರೇರಣೆಯಿಂದ ಶ್ರೀಶೈಲ್ ಮಲ್ಲಿಕಾರ್ಜುನ ದರ್ಶನ ತೆರಳುವ ಪಾದಯಾತ್ರೆಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ತಮ್ಮ ದೈವ ಭಕ್ತಿಯನ್ನು ಮೆರೆದಿದ್ದಾರೆ. 

ಇದೇ ಸಂದರ್ಭದಲ್ಲಿ ಮಾಲಕರು ಮತ್ತು ಚಾಲಕರ ಸಂಘದ ಮುಖಂಡರಾದ ಮಹಾದೇವ ಉತ್ನಾಳ,ರಾಘು ಅನೆಪ್ಪಗೊಳ, ಸಂಗು ಮಾದರ, ಮಲ್ಲಪ್ಪಾ ಕೊಣ್ಣೂರ,ಮಹಾಲಿಂಗ ಕಬ್ಬೂರ, ಚೆನ್ನಗಿರಿ ಚೌಗಲಾ, ಮಲ್ಲಿಕಾರ್ಜುನ ಸೈದಾಪುರ, ಶಂಕರ ಚಂಡೊಲ, ಗೋಪಾಲ ಯಾದವಾಡ,ಸಾಗರ ಮಾದರ, ಮಲ್ಲಿಕ ನದಾಫ,ಲಾಲಸಾಬ್ ಹವಾಲ್ದಾರ,ಲಕ್ಷಣ ದೊಡಮನಿ ಮಹಾಲಿಂಗ ಚೌಗಲಾ,ಮಹಾಲಿಂಗ ದೊಡಮನಿ, ಪ್ರದೀಪ ತಡಸಲ,ರಾಜು ಕೊಗಟನೂರ,ಸಂತೋಷ ಬಂಡಿವಡ್ಡರ, ಶಿವಪ್ಪ ಬನ್ನುರ,ಸುದೀಪ ಮೇಟಿ, ಬುಡ್ಡಾ ಮುಲ್ಲಾ, ಮಲ್ಲಪ್ಪಾ ನ್ಯಾಮಗೌಡ, ಮಹಾಲಿಂಗ ಗಾಡೆಕರ,ಸೇರಿದಂತೆ ಇನ್ನೂ ಹಲವಾರು ಚಾಲಕರು ಮಾಲಕರು ಭಾಗಿಯಾಗಿದ್ದರು.