ತಾಂಬಾ 13: ಗ್ರಾಮದ ಕನಕನಗರ ಸೇರಿದಂತೆ ಪ್ರತಿ ಬಡಾವಣೆಯಲ್ಲಿ ರಾತ್ರಿ ಕಾಮದಹನ ಮಾಡಲಾಯಿತು. ಶಿವರಾತ್ರಿಯ ನಂತರ ಬರುವ ಅದ್ಯಾತ್ಮಿಕ ಹಿನ್ನಲೆ ಹಬ್ಬಗಳಲ್ಲಿ ಹೋಳಿಹುಣ್ಣಿಮೆಯು ಒಂದು, ಉತ್ತರ ಕರ್ನಾಟಕದಲ್ಲಿ ಈ ಹಬ್ಬದ ಸಡಗರವೆ ಬೇರೆ.
ಪ್ರತಿ ಓಣಿಗಳಲ್ಲಿ ಹುಣ್ಣಿಮೆಗೂ ಮುಂಚೆ, ಐದು ದಿನ ಕಾಮಣ್ಣನ ಹುಂಡಿ ತೊಡಿ ಪುಟ್ಟ ದಿಪ ಹಚ್ಚಿಟ್ಟು, ಸುತ್ತಲ ಪ್ರದೇಶ ಸ್ವಚ್ಚ ಗೊಳಿಸಿ, ಅಲ್ಲೋಂದು ಚಂದಂದ ರಂಗೋಲಿ ಬಿಡಿಸಿ, ಪ್ರೀತಿಯಿಂದ ಅಲಂಕರಿಸಿದ ಕಾಮಣ್ಣನಿಗೆ ವಿದಾಯ ಹೆಳಲು ಸಜ್ಜಾಗಿದ್ದ ಹುಡಗರು, ಓಣಿಯ ಪ್ರತಿಯೊಂದು ಮನೆಯಿಂದ ಚಂದಾ ಸಂಗ್ರಹಿಸಿ ಮಾರುಕಟ್ಟೆಯಿಂದ ತಳಿರು ತೊರಣ ಪರಪರಿ ಕಬ್ಬು ಬಾಳೆಗಿಡ ತೆಂಗಿನ ಗರಿ ತಂದು ಓಣಿಯನ್ನು ಸಿಂಗರಿಸಿದರು. ರಾತ್ರಿ ಹೊತ್ತು ಕಷ್ಟ ಪಟ್ಟು ಕಳವು ಮಾಡಿದ ಕುಳ್ಳು ಕಟ್ಡಿಗೆ ಯನ್ನು ಅಚ್ಚುಕಟ್ಟಾಗಿ ಒಟ್ಟಿ ಹೋಳಿಗೆ ನೆವೈದ್ಯ ಅರ್ಿಸಿ, ಭಕ್ತಿಯಿಂದ ಕಾಯಿ ಕರ್ೂರ ಅರ್ಿಸಿ ಹಿಂದಿನಿಂದಲೂ ಬಂದ ಸಂಪ್ರದಾಯದಂತೆ ಹಾಲಮತ ಸಮಾಜದ ಮುಖಂಡರು ಹಾಗೂ ಗ್ರಾಮದ ಗೌಡರೆನಿಸಿಕೊಂಡ ಮನೆತನದವರು ಅಂಬೇಡ್ಕರನಗರದಲ್ಲಿ ಎಸ್ ಸಿ ಜನಾಂಗದವರು ಒಟ್ಟಿಟ್ಟ ಕಟ್ಟಿಗೆಗಳಿಗೆ ಬೆಂಕಿ ಇಡಲು ಬಾಜಿ ಬಜಂತ್ರಿ ಮೂಲಕ ಗೌಡರನ್ನು ಕರೆದುಕೊಂಡು ಹೊಗಿ ಕೊಳ್ಳಿ ಇಡಿಸಿದರು. ಅದನ್ನು ಹಾಲಮತ ಸಮಾಜದವರು ಅಲ್ಲಿಂದ ಕೊಳ್ಳಿಯನ್ನು ತಂದು ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಮುಂದೆ ಒಟ್ಟಿರುವ ಕಟ್ಟಿಗೆಗಳಿಗೆ ಕೊಳ್ಳಿಯಿಟ್ಟು, ಕಾಮಣ್ಣನ ಸೂತ್ತಲೂ ಐದು ಸೂತ್ತು ತಿರುಗಿ ಬೊಬ್ಬೆ ಇಟ್ಟು ಕಾಮಣ್ಣನಿಗೆ ವಿದಾಯ ಹೇಳಿದರು.
ಸಕ್ಕರೆ ಸರಕ್ಕೆ ಬೇಡಿಕೆ:ಕಾಮದಹನ ಕಾಲದಲ್ಲಿ ಮನೆಯ ಪುಟಾಣಿ ಮಕ್ಕಳಿಗೆ ಸಕ್ಕರೆ ಸರ ಹಾಕುವದು ವಾಡಿಕೆ. ಹಿಗಾಗಿ ಮಾರುಕಟ್ಟೆಯಲ್ಲಿ ಸಕ್ಕರೆ ಸರಕ್ಕೆ ಡಿಮ್ಯಾಂಡು ಹೆಚ್ಚಿತು.
ಜಾನಪದ ಜುಗಲ ಬಂದಿ: ಜಾನಪದ ಕಲೆ ನಸಿಸಿ ಹೊಗುತ್ತಿರುವ ಇಂದಿನ ದಿನಮಾನಗಳಲ್ಲೂ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಿಯ ಹಾಲಮತ ಸಮಾಜದ ಓಣಿಯಲ್ಲಿ ಹಿರಿಯರು ಕಾಮದಹನದ ವೇಳೆ ಹಿರಿಯಜ್ಜರು ಹಾಡಿನ ಮೂಲಕ ಕಾಮಣ್ಣನ ಚರಿತ್ರೆಯನ್ನು ಬಿಡಿಸಿ ಹೇಳುವ ಜುಗಲ ಬಂದಿ ನಡೆಸುವ ಮೂಲಕ ಸಾಂಸ್ಕ್ರತಿ ಬಿಂಬಿಸಿದರು.