ಬ್ರಿಟಿಷ್‌ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

British woman gang-raped

ಹೊಸದಿಲ್ಲಿ 13: ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ದೆಹಲಿಯ ಸ್ನೇಹಿತನ ಭೇಟಿಗೆಂದು ಬಂದಿದ್ದ ಬ್ರಿಟಿಷ್‌ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ವರದಿಯಾಗಿದೆ. 

ಅತ್ಯಾಚಾರ ಆರೋಪಿ ಕೈಲಾಶ್ ಪೂರ್ವ ದೆಹಲಿಯ ಮಯೂರ್ ವಿಹಾರ್‌ನ ವಸುಂಧರ ನಿವಾಸಿಯಾಗಿದ್ದು, ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿದ್ದ. ಕೆಲವು ತಿಂಗಳ ಹಿಂದೆ ಲಂಡನ್‌ ನ ಮಹಿಳೆಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕ ಹೊಂದಿದ್ದ.

ದೆಹಲಿಯ ಮಹಿಪಾಲ್ಪುರ ದ ಹೋಟೆಲೊಂದರಲ್ಲಿ ಮಹಿಳೆಯ ಸಾಮಾಜಿಕ ಜಾಲತಾಣ ಸ್ನೇಹಿತ ಮತ್ತು ಆತನ ಸಹಚರ ಕೃತ್ಯವೆಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ದೂರಿನಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ .

ಬ್ರಿಟಿಷ್ ಪ್ರವಾಸಿಯು ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾಗ ಕೈಲಾಶ್ ನನ್ನು ಭೇಟಿಯಾಗಲು ಆಹ್ವಾನಿಸಿದ್ದರು. ಕೈಲಾಶ್ ಪ್ರತಿಯಾಗಿ ಆಕೆಯನ್ನು ದೆಹಲಿಗೆ ಬರಲು ಕೇಳಿಕೊಂಡಿದ್ದ. ಹೀಗಾಗಿ ಮಹಿಳೆ ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಿ ಹೋಟೆಲ್‌ನಲ್ಲಿ ತಂಗಿದರು. ಕೈಲಾಶ್ ಮತ್ತು ಅವರ ಸ್ನೇಹಿತ ವಾಸಿಮ್ ಹೋಟೆಲ್‌ನಲ್ಲಿ ಮಹಿಳೆಯನ್ನು ಭೇಟಿ ಮಾಡಿದ ನಂತರ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.‌

ಓರ್ವ ಆರೋಪಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿದ್ದರೆ, ಮತ್ತೋರ್ವನ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. 

ಘಟನೆಯ ಕುರಿತು ಬ್ರಿಟಿಷ್‌ ಹೈ ಕಮಿಷನ್‌ ಗೆ ಮಾಹಿತಿ ನೀಡಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.