ಮಹಿಳೆಗೆ ಬೆದರಿಸಿ 10 ಲಕ್ಷ ರೂ. ವಸೂಲಿ: ಪ್ರಕರಣ ದಾಖಲು

Woman threatened and extorted Rs. 10 lakh: Case registered

ಸಂಬರಗಿ 13: ಮದಭಾವಿ (ಜಾಧವವಾಡಿ) ಗ್ರಾಮದ ಮಾರುತಿ ರಾಮಚಂದ್ರ ಜಾಧವ, ವಯಸ್ಸು:35, ಇವರು ಮಹಾರಾಷ್ಟ್ರದ ಕವಟೇಮಹಾಂಕಾಳ ತಾಲೂಕಿನ ಒಬ್ಬ ಮಹಿಳೆಗೆ ಬೆದರಿಕೆಯ ಕರೆ ನೀಡಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ ಎಂದು ಆ ಮಹಿಳೆ ಕವಟೆಮಹಾಂಕಾಳ ಪೋಲಿಸ್ ಠಾಣೆಗೆ ದೂರು ದಾಖಲಿಸಿದ ನಂತರ ಅಲ್ಲಿನ ಪೋಲಿಸರು ಬಂದು ಮದಭಾವಿ ಗ್ರಾಮದಲ್ಲಿ ಜಾಲ ಬೀಸಿ ಅವನನ್ನು ವಶಕ್ಕೆ ಪಡೆದಿದ್ದಾರೆ.  

ಘಟನೆಯ ವಿವರ: ಮಹಿಳೆ ಕವಟೆಮಹಾಂಕಾಳ ತಾಲೂಕಿನಲ್ಲಿ ಇದ್ದು, ಅವಳು ರೇಲ್ವೆ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ತಮ್ಮ ಮನೆಯಲ್ಲಿ ಸ್ನಾನ ಮಾಡುವ ವೇಳೆ ಈ ವ್ಯಕ್ತಿ ಕಳ್ಳ ದಾರಿಯಿಂದ ಫೋಟೋ ಸಂಗ್ರಹಿಸಿದ್ದಾನೆ. ಆ ಫೋಟೋವನ್ನು ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆಂದು ಬೆದರಿಕೆ ನೀಡಿ 10 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ.  

ಆ ಮಹಿಳೆಗೆ ಮೀರಜದಲ್ಲಿ ಬಂದು ನನ್ನನ್ನು ಸಂಪರ್ಕಿಸಬೇಕು. ಇಲ್ಲವಾದರೆ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ. ಈ ಮಹಿಳೆ ಹೆದರಿ ಕವಟೆಮಹಾಂಕಾಳ ಪೋಲಿಸ್ ಠಾಣೆಯಲ್ಲಿ ಅವನ ವಿರುದ್ಧ ದೂರು ದಾಖಲಿಸಿದ್ದಾಳೆ. ಅವನನ್ನು ಕವಟೆಮಹಾಂಕಾಳ ಪೋಲಿಸರು ಮದಭಾವಿ ಗ್ರಾಮಕ್ಕೆ ಬಂದು ಸೆರೆಹಿಡಿದಿದ್ದಾರೆ. ಕವಟೆಮಹಾಂಕಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಪಿ.ಎಸ್‌.ಐ ದತ್ತಾತ್ರೇಯ ಕೋಳೆಕರ ಮುಂದಿನ ತನಿಖೆ ನಡೆಸಿದ್ದಾರೆ. 

ಈ ಘಟನೆಯಿಂದ ಗಡಿಭಾಗದ ಗ್ರಾಮಗಳಲ್ಲಿ ಭಯವಯ ವಾತಾವರಣ ನಿರ್ಮಾಣವಾಗಿದೆ.