ಪೋಕ್ಸೊ ಕಾಯ್ದೆ ಕಾನೂನು ಅರಿವು ಕಾರ್ಯಾಗಾರ

ಲೋಕದರ್ಶನ ವರದಿ

ಚಿಕ್ಕೋಡಿ 28: ದೇಶದಲ್ಲಿನ ಮಕ್ಕಳ ರಕ್ಷಣೆಗಾಗಿ ಸಂವಿಧಾನದಲ್ಲಿ ಸಾಕಷ್ಟು ಕಠಿಣವಾದ ಕಾನೂನುಗಳಿದ್ದರು ಸಹ ಕೆಲವು ಅವೇಕಿಗಳು ಮಕ್ಕಳ ಮೇಲೆ ಪಿಸಾಚಿಕ ಹಾಗೂ ದೌರ್ಜನ್ಯ ನಡೆಸುತ್ತಿರುವದು ವಿಷಾಧನೀಯ ಎಂದು ವಿಮುಕ್ತಿ ಸಂಸ್ಥೆ ನಿರ್ದೇಶಕ ಫಾದರ ವಿಜಯ ಹೇಳಿದರು.

ಅವರು ತಾಲೂಕಿನ ಮಾಂಜರಿ ಗ್ರಾಮದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ  ವಿಮುಕ್ತಿ ಸಮಾಜ ಸಂಸ್ಥೆ ಮತ್ತು ತಾಲೂಕಾ ಕಾನೂನು ಸೇವಾ ಸಂಸ್ಥೆ ಇವರ ಸಹಯೋಗದಲ್ಲಿ ನಡೆದ ಪೋಕ್ಸೊ ಕಾಯ್ದೆ ಕಾನೂನು ಅರಿವು  ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ತಡೆಬೇಕಾದರೆ ಬಾಲ್ಯದಲ್ಲೇ ಮಕ್ಕಳಿಗೆ ಕಾನೂನು ಕುರಿತು ಅರಿವು ನೀಡಿದರೆ ಸಾಕಷ್ಟು ಸಹಕಾರಿಯಾಗುತ್ತದೆ ಎಂದರು.

ಹಿರಿಯ ನ್ಯಾಯವಾದಿ ಎಂ.ಬಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಮೇಲೆ ಅನ್ಯಾಯ, ದೌರ್ಜನ್ಯ ನಡೆದಾಗ ಶಿಕ್ಷಕರು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುವಂತೆ ಅವರು ಕರೆ ನೀಡಿದರು. ಪೋಕ್ಸೊ ಕಾಯ್ದೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯವನ್ನು ಶಿಕ್ಷಕರು ತರಗತಿಯಲಲಿ ಮಾಡಬೇಕಾಗಿದೆ. ಪ್ರತಿವೊಬ್ಬರು ತಮ್ಮ  ತಮ್ಮ ವೃತ್ತಿಯಲ್ಲಿ ಆತ್ಮ ಸಾಕ್ಷಿಯಾಗಿ  ಕಾರ್ಯ ನಿರ್ವಹಣೆ ಮಾಡುವ ಮೂಲಕ ಮಕ್ಕಳಿಗೆ ಮಾದರಿಯಾಗುವಂತೆ ತಿಳಿಸಿದರು.

ಮಕ್ಕಳನ್ನು ಅಮಾನುಷವಾಗಿ ನಡೆಸುವ ಕೊಳ್ಳುವ ಘಟನೆ ಕಂಡು ಬಂದಲ್ಲಿ ಸಾರ್ವಜನಿಕರು ಸುಮ್ಮನಾಗದೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುವ ಕಾರ್ಯ ಮಾಡುವಂತೆ ಅವರು ಸಲಹೆ ಜನರಲ್ಲಿ ಮನವಿ ಮಾಡಿದರು. 

ಸರ್ವೋದಯ ಶಿಕ್ಷಣ ಸಂಸ್ಥೆ ಮುಖ್ಯೋಪಾದ್ಯಾಯರಾದ ಕಿರಣ ಸಾಳುಂಕೆ, ಸಾವುಬಾಯಿ ನರವಡೆ, ಆರ್.ಎಸ್.ಉಮರಾಣಿ ಹಾಗೂ ವಿಮುಕ್ತಿ ಸಂಸ್ಥೆ ಸದಸ್ಯರು ಶಾಂತಿಸಾಗರ ಶಾಲೆಯ ಶಿಕ್ಷಕರು ಭಾಗವಹಿಸಿದ್ದರು.