ಕುಮದ್ವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ. ಬ್ಯಾರೇಜ್ಗಳಲ್ಲಿ ದಶಕಗಳಿಂದ ಜಮಾ ಆಗಿರುವ ಹೂಳನ್ನೆತ್ತಿ ನೀರು ನಿಲ್ಲಿಸಲು ಕ್ಯಾಬಿನೇಟ್ನಲ್ಲಿ ವಿಶೇಷ ಕಾನೂನು, ಅನುದಾನಕ್ಕೆ ಒತ್ತಾಯಿಸಿ ಸರಕಾರಕ್ಕೆ ಮನವಿ
Bridge Co., a company built across the Kumadwati and Varada rivers, has appealed to the government
ರಾಣೇಬೆನ್ನೂರು 7: ಹಾವೇರಿ ಜಿಲ್ಲೆಯಲ್ಲಿ ಹಾದು ಹೋಗಿರುವ ಕುಮದ್ವತಿ ಮತ್ತು ವರದಾ ನದಿಗಳಿಗೆ ಬೇಸಿಗೆಯಲ್ಲಿ ನೀರು ನಿಲ್ಲಿಸಲು ಅನುಕೂಲವಾಗಲೆಂದೇ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ. ಬ್ಯಾರೇಜ್ (ಬಾಂದಾರ ವ ಸೇತುವೆ) ಗಳಲ್ಲಿ ದಶಕಗಳಿಂದ ಜಮಾ ಆಗಿರುವ ಹೂಳನೆತ್ತಿ ನೀರು ನಿಲ್ಲಿಸುವ ವ್ಯವಸ್ಥೆಯನ್ನು ಮಾಡಲು ಈಗ ನಡೆದಿರುವ ಬಜೆಟ್ನಲ್ಲಿ ಸರಕಾರ ವಿಶೇಷ ಕಾನೂನು ಜಾರಿ ಮಾಡಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಎರಡೂ ನದಿ ಪಾತ್ರದ ರೈತರು ಇಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ನೇತೃತ್ವದಲ್ಲಿ ತಾಲೂಕಿನ ಲಿಂಗದಹಳ್ಳಿ ಹತ್ತಿರ ಹೂಳು ತುಂಬಿರುವ ಬಿಡ್ಜ್ ಹತ್ತಿರ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜೀನೀಯರ್ ಶ್ರೀ ಎಂ.ಜಿ. ರವಿಶಾರಾಧ್ಯವರ ಮೂಲಕ ಮುಖ್ಯಮಂತ್ರಿ ಮತ್ತು ಸಣ್ಣ ನೀರವಾರಿ ಸಚಿವ ಹಾಗೂ ಸ್ಥಳೀಯ ಶಾಸಕರಿಗೆ ಸಿದ್ದರಾಮಯ್ಯನವರಿಗೆ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಮತ್ತು ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನೇತೃತ್ವ ವಹಿಸಿ ಮಾತನಾಡಿದ ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಪಾಟೀಲ ಕುಮದ್ವತಿ ಮತ್ತು ವರದಾ ನದಿಗಳಿಗೆ ತಲಾ 12 ರಿಂದ 13 ಬ್ರಿಡ್ಜ್ ಕಂ. ಬ್ಯಾರೇಜ್ ನಿರ್ಮಿಸಿ ದಶಕಗಳೇ ಕಳೆದಿವೆ. ಈ ಬ್ರಿಡ್ಜ್ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರಿಗೆ ಜನ ಜಾನುವಾರುಗಳಿಗೆ, ಕಾಡುಪ್ರಾಣಿಗಳಿಗೆ, ಪಶುಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿ ನೀರು ನಿಂತು ಅನುಕೂಲವಾಗಲೇಂದೆ ಸರಕಾರ ಈ ಹಿಂದೆ ನೂರಾರು ಕೋಟಿ ಖರ್ಚು ಮಾಡಿ ಬ್ರಿಡ್ಜ್ ಕಂ. ಬ್ಯಾರೇಜ್ (ಬಾಂದಾರ ವ ಸೇತುವೆ) ನಿರ್ಮಿಸಿದೆ. ಸಣ್ಣ ನೀರಾವರಿ ಇಲಾಖೆಗಳಿಗೆ ಅವುಗಳ ನಿರ್ವಹಣೆಯ ಹೊರೆ ಹೊರೆಸಿವೆ. ಆದರೆ ದಶಕಗಳ ಹಿಂದೆಯೇ ಕಟ್ಟಿಸಿದ ಬ್ರಿಡ್ಜ್ ಕಂ. ಬ್ಯಾರೇಜ್ ಗಳ ಹತ್ತಿರ ದಶಕಗಳಿಂದ ಮಣ್ಣು, ಮರಳು, ಸಣ್ಣ ಸಣ್ಣ ಕಲ್ಲುಗಳಿಂದ ಹೂಳು ತುಂಬಿ ಎರಡು ಗೇಟುಗಳು ಸಂಪೂರ್ಣ ಮುಚ್ಚಿ ಹೋಗಿವೆ. ಒದೊಂದು ಗೇಟುಗಳು ಮಾತ್ರ ಉಳಿದಿವೆ. ಮಳೆಗಾಲದಲ್ಲಿ ಈ ಬ್ರಿಡ್ಜ್ಗಳಲ್ಲಿ ನೀರು ತುಂಬಿ ಹರಿಯುತ್ತಿರುತ್ತದೆ. ಆಳೆತ್ತರದ ಹೂಳು ತುಂಬಿರುವುದರಿಂದ ಬೇಸಿಗೆಯಲ್ಲಿ ನೀರು ಸಂಗ್ರಹಣೆ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ. ಸರಕಾರ ಈ ಕೂಡಲೇ ಈ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ವಿಶೇಷ ಕಾನೂನು ರಚಿಸಿ ವಿಶೇಷ ಅನುದಾನ ಬಿಡುಗಡೆ ಮಾಡಿ ಕೂಡಲೇ ಹೂಳೆತ್ತಿಸುವ ಕಾರ್ಯ ಮಾಡಬೇಕು, ಸರಕಾರ ನಿರ್ಲಕ್ಷ್ಯ ಮಾಡಿ ರೈತರ ಬೇಡಿಕೆಗೆ ಸ್ಪಂದಿಸದಿದ್ದರೆ ರೈತರೆಲ್ಲರೂ ಸೇರಿ ಆಯಾ ಬ್ರಿಡ್ಜ್ಗಳ ಹತ್ತಿರ ಅವರೇ ಹೂಳೆತ್ತುವ ಕಾರ್ಯಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಮುಂದುವರೆದು ಮಾತನಾಡಿದ ಪಾಟೀಲರು, ಬೇಸಿಗೆ ಕಾಲದಲ್ಲಿ ನೀರು ನಿಲ್ಲಿಸಬೇಕೆಂಬ ಸದುದ್ದೇಶ ಹೊಂದಿ ಕಟ್ಟಿಸಿದ ಈ ಬ್ರಿಡ್ಜ್ ಕಂ ಬ್ಯಾರೇಜ್ಗಳಲ್ಲಿ ಆಳೆತ್ತರದ ಹೂಳು ತುಂಬಿದ್ದರಿಂದ ಈ ಬ್ರಿಡ್ಜ್ಗಳು ಈಗ ಕೇವಲ ಓಡಾಡಲಿಕ್ಕೆ ಮಾತ್ರ ಸೀಮಿತವಾಗಿವೆ. ಇದ್ದ ಮೂರು ಗೇಟುಗಳಲ್ಲಿ ಎರಡು ಗೇಟುಗಳು ಸಂಪೂರ್ಣ ಹೂಳಿನಿಂದ ಮುಚ್ಚಿ ಹೋಗಿವೆ. ಪ್ರತಿವರ್ಷ ಮಾರ್ಚ ತಿಂಗಳ ವರೆಗೆ ನೀರನ್ನು ಹಿಡಿದಿಟ್ಟುಕೊಳ್ಳುತ್ತಿದ್ದ ಬ್ರಿಡ್ಜ್ಗಳು ಅಕ್ಟೋಬರ್ ತಿಂಗಳಿನಲ್ಲಿಯೇ ಖಾಲಿಯಾಗುತ್ತಿವೆ. ಈ ಬ್ರಿಡ್ಜ್ಗಳ ಅನುಷ್ಠಾನ ಮತ್ತು ಮೆಂಟೆನೆನ್ಸ್ ಹೊಣೆ ಹೊತ್ತ ಸಣ್ಣ ನೀರಾವರಿ ಇಲಾಖೆಗೆ ಹತ್ತಾರು ಅಧಿಕಾರಿಗಳು ಸುಮಾರು ನೌಕರರಿಗೆ ಸರಕಾರ ವಿನಾಃಕಾರಣ ಸಂಬಳ ಮತ್ತು ಇತರೆ ಸೌಲಭ್ಯಕೊಟ್ಟು ಸಾಕುತ್ತಿದೆ ಎಂದರು. ಕೂಡಲೇ ಸರಕಾರ ಈ ಬಜೆಟ್ನಲ್ಲಿ ಈ ಹೂಳೆತ್ತುವ ಕಾರ್ಯಕ್ಕೆ ವಿಶೇಷ ಅನುದಾನ ಮೀಸಲಿಟ್ಟು ಆಳೆತ್ತರದ ಹೂಳೆನ್ನೆತ್ತಿ ನೀರು ನಿಲ್ಲುವಂತೆ ಮಾಡಿ ಈ ಭಾಗದ ತರಕಾರಿ ಬೆಳೆಗಾರರಿಗೆ, ಹೂವು, ಹಣ್ಣು ಬೆಳೆಗಾರರಿಗೆ, ಬೆಳ್ಳೊಳ್ಳಿ ಬೆಳೆಗಾರರಿಗೆ, ಸಾರ್ವಜನಿಕರಿಗೆ, ದನಕರುಗಳಿಗೆ, ಪಶುಪಕ್ಷಿಗಳಿಗೆ, ಕಾಡುಪ್ರಾಣಿಗಳಿಗೆ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕೆಂದು ರೈತರು ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.
ಮನವಿ ಸ್ವೀಕರಿಸಿ ಸರಕಾರಕ್ಕೆ ಕಳುಹಿಸಿಕೊಡಲು ಸಣ್ಣ ನೀರಿವಾರಿ ಇಲಾಖೆಯ ರಾಣೇಬೆನ್ನೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಜೆ. ರವಿಶಾರಾಧ್ಯ, ಸಿಬ್ಬಂದಿಗಳಾದ ಎಂ. ಮಣಿಕಂಠ ನಾಯಕ ಮತ್ತು ಟಿ.ಆರ್. ರೇವಣಪ್ಪ ಸ್ಥಳಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ರಾಯಪ್ಪ ಡಿ. ಮಾಗನೂರ, ಸತೀಶ ಎಸ್. ಲಿಂಗರಡ್ಡಿ, ಮಂಜಪ್ಪ ಎಫ್. ಬಾರ್ಕಿ, ಸಿದ್ಲಿಂಗಪ್ಪ ಎಸ್. ಕೋಳೇರ, ದಾಸರಾಜ ಬೈರಣ್ಣನವರ, ನಿಂಗಪ್ಪ ಟಿ. ಬೈರಣ್ಣನವರ, ಹರಿಹರಗೌಡ ಎಸ್. ಪಾಟೀಲ, ಬಸವರಾಜ ಟಿ. ಯಲ್ಲಕ್ಕನವರ, ರಮೇಶ ಎ. ತಿವಾರ, ಶಿವಪುತ್ರ್ಪ ತಳವಾರ, ಮಲ್ಲಿಕಾರ್ಜುನ ಖಂಡೇರಾಯನಹಳ್ಳಿ, ಹಾಲೇಶ ಎಚ್. ತಳವಾರ, ಬಸಪ್ಪ ಟಿ. ಯಲ್ಲಕ್ಕನವರ, ನಾಗರಾಜ ಬುಳ್ಳಾಪುರ, ಆಂಜಿನೇಯ ಅಜ್ಜೇರ, ನಿಂಗರೆಡ್ಡಿ ಅಂತರವಳ್ಳಿ, ಲೋಕೇಶ ಜಾಡರ, ಈರಣ್ಣ ಕಿರಿಗೇರಿ, ಜಗದೀಶ ದೊಡ್ಮನಿ, ಮೈಲಾರ್ಪ ಬೈರಣ್ಣನವರ ಮುಂತಾದ ನೂರಾರು ರೈತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 