ಲೋಕದರ್ಶನ ವರದಿ
ಕುಮಟಾ: ಬಿಸಿಲ ಬೇಗೆಯಿಂದ ತತ್ತರಿಸಿರುವ ಕುಮಟಾದ ಜನತೆಗೆ ಬುಧವಾರ ತಡ ರಾತ್ರಿ ಸುರಿದ ಭಾರಿ ಗಾಳಿ ಸಮೇತದ ಮಳೆಯಿಂದ ಗುರುವಾರದಂದ ತಣ್ಣನೆ ಅನುಭೂತಿ ನೀಡುವಂತಾಗಿದೆ.
ಬುಧವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದು, ಗುಡುಗು-ಸಿಡಿಲ ಅಬ್ಬರಕ್ಕೆ ಕುಮಟಾ ತಾಲೂಕಿನ ವಿವಿಧೆಡೆ ಹಾನಿಯಾಗಿದೆ. ಬೆಳಗ್ಗೆಯಿದಂಲೆ ಬಿಸಿಲು ಮತ್ತು ಮೋಡ ಕವಿದ ವಾತಾವರಣ ಕಂಡುಬಂದಿತ್ತು. ತಡ ರಾತ್ರಿ ಸುಮಾರು 3 ಗಂಟೆ ಸುಮಾರು ಭಾರಿ ಗಾಳಿ ಸಮೇತ ಮಳೆಯಾಗಿದೆ.
ಧಾರಕಾರವಾಗಿ ಮಳೆ ಸುರಿದಿರುವುದರಿಂದ ಬಿಸಿಲ ಬೇಗೆಯಿಂದ ತತ್ತರಿಸಿರುವ ಕುಮಟಾದ ಜನತೆಗೆ ಗುರುವಾರ ತಂಪಾದ ವಾತವರಣ ಸವಿಯುವಂತಾಗಿದೆ. ಅಲ್ಲದೇ ರಾತ್ರಿ ಸುರಿದ ಭಾರಿ ಗಾಳಿ ಸಮೇತದ ಮಳೆಯಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಕೆಲವೆಡೆ ಗಿಡಮರಗಳು ಉರುಳಿಬಿದ್ದು, ಸಂಚಾರಕ್ಕೆ ತೊಂದರೆಯಾಯಿತು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗಳ ಮೇಲೆ ಮರಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ಒಟ್ಟಾರೆ ಬುಧವಾರ ತಡ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿರುವುದರಿಂದ ಬಿಸಿಲ ಬೇಗೆಯಿಂದ ತತ್ತರಿಸಿರುವ ಕುಮಟಾದ ಜನತೆಗೆ ತಣ್ಣನೆ ಅನುಭೂತಿ ನೀಡುವಂತಾಗಿದೆ.
ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಕೆಡಿಸಿಸಿ ಬ್ಯಾಂಕ್ನ ನಿವೃತ್ತ ವ್ಯವಸ್ಥಾಪಕ ಹಾಗೂ ವಿಶ್ವಹಿಂದೂ ಪರಿಷತ್ನ ಜಿಲ್ಲಾ ಕೋಶಾಧ್ಯಕ್ಷ ಎಂ ಆರ್ ಭಟ್ ಅವರು, ತಾಲೂಕಿನ ಜನರು ಬಿಸಿಲ ಬೇಗೆಯಿಂದ ತತ್ತರಿಸಿಹೋಗಿದ್ದು, ಪಟ್ಟಣಕ್ಕೂ ಬರಲು ಹಿಂದೆಟು ಹಾಕುತ್ತಿದ್ದರು. ನಿನ್ನೆ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿರುವುದರಿಂದ ತಂಪಾದ ವಾತಾವರಣ ಉಂಟಾಗಿರುವುದರಿಂದ ಜನರು ಪಟ್ಟಣಕ್ಕೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ತಾಲೂಕಿನ್ಯಾದ್ಯಂತ ನೀರಿನ ಸಮಸ್ಯೆ ಇದೆ. ಇದೇ ರೀತಿ ಪ್ರತಿದಿನ ಮಳೆಯಾದರೆ ನೀರಿನ ಸಮಸ್ಯೆ ದೂರವಾಗಲಿದೆ ಎಂದು ತಿಳಿಸಿದರು.