ಮದನಬಾವಿ ಗ್ರಾಮದೇವಿ ಜಾತ್ರೆ ಅರ್ಥಪೂರ್ಣ, ಅದ್ದೂರಿಯಾಗಿ ಜರುಗಲಿ : ಶಿವಾನಂದ ಭಾರತಿ ಶ್ರೀಗಳು

ಮದನಬಾವಿ ಗ್ರಾಮದೇವಿ ಜಾತ್ರೆ ಅರ್ಥಪೂರ್ಣ, ಅದ್ದೂರಿಯಾಗಿ ಜರುಗಲಿ : ಶಿವಾನಂದ ಭಾರತಿ ಶ್ರೀಗಳು  May the Madanabavi Grama Devi Fair be meaningful and grand: Shivananda Bharathi Shri

ನೇಸರಗಿ 06 : ಇಲ್ಲಿಗೆ ಸಮೀಪದ ಮದನಬಾವಿ ಗ್ರಾಮದ  ಗ್ರಾಮದೇವತೆಯ ಜಾತ್ರಾ ಮಹೋತ್ಸವವು ಬರುವ ತಿಂಗಳು ಏಪ್ರಿಲ್ 1 ರಿಂದ 9 ರ ವರೆಗೆ ಅದ್ದೂರಿಯಾಗಿ ನೆರವೇರಲಿದ್ದು, ಮಾಜಿ ಶಾಸಕರು ಹಾಗೂ ಬಿ ದಿ ಸಿ ಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹಾಗೂ ಗ್ರಾಮದ ಹಿರಿಯರ ನೇತೃತ್ವದಲ್ಲಿ ನೆರವೇರಲಿದ್ದು, ಈ ಜಾತ್ರೆಯು ಈ ಭಾಗದ ಜನರ ಕಷ್ಟ ಕಾರ​‍್ಪನಯಗಳಿಗೆ  ಗ್ರಾಮದೇವಿ ಜಾತ್ರೆ ಒಳ್ಳೆಯದು ಮಾಡಲಿ ಮತ್ತು ಅದ್ದೂರಿಯಾಗಿ ನೆರವೇರಲಿ ಎಂದು ಇಂಚಲ ಸಾಧು ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು.  ಅವರು ಸಮೀಪದ ಮದನಬಾವಿ ಗ್ರಾಮದ  ಚನ್ನವೃಷಬೇಂದ್ರ ಶ್ರೀಗಳ ಜಾತ್ರಾ ಮಹೋತ್ಸವದಲ್ಲಿ  ಏಪ್ರಿಲ್ 1 ರಿಂದ 9 ರವರೆಗೆ ಜರಗುವ ಆಮಂತ್ರಣ ಪತ್ರಿಕೆ ಬಿಡುಗಡೆ ನೆರವೇರಿಸಿ ಮಾತನಾಡಿದರು.     

ಮಾಜಿ ಶಾಸಕ ಹಾಗೂ ಬಿ ದಿ ಸಿ ಸಿ ಬ್ಯಾಂಕ ನಿರ್ದೇಶರಾದ ಮಹಾಂತೇಶ ದೊಡ್ಡಗೌಡರ ಮಾತನಾಡಿ 11  ವರ್ಷಗಳ ಹಿಂದೆ   ಗ್ರಾಮದೇವಿಯ ಜಾತ್ರೆ ನೆರವೇರಿತ್ತು. ಮುಂದಿನ ತಿಂಗಳು 9 ದಿನಗಳ ಕಾಲ ಅದ್ದೂರಿಯಾಗಿ ಆಚರಿಸಲು ಊರ ಹಿರಿಯರು ನಿರ್ಣಯಿಸಿದ್ದು, ಈ ಜಾತ್ರೆಗೆ ಊರಿನ ಹಿರಿಯರು, ಯುವಕರು, ಮಹಿಳೆಯರು ಅರ್ಥ ಪೂರ್ಣವಾಗಿ ಎಲ್ಲರೂ ಸೇರಿಕೊಂಡು ಸೌಹಾರ್ದಯುತವಾಗಿ ಭಕ್ತಿ ಭಾವದಿಂದ, ತನು, ಮನ, ಧನದಿಂದ ಅದ್ದೂರಿಯಾಗಿ ಗ್ರಾಮದೇವಿಯ ಜಾತ್ರೆ ಆಚರಿಸೋಣ ಎಂದರು.    ಚನ್ನವೃಷಬೇಂದ್ರ ಅಜ್ಜನವರ ಜಾತ್ರಾ ಮಹೋತ್ಸವ ಅಂಗವಾಗಿ ಜ್ಞಾನದಾಸೋಹದಲ್ಲಿ ಮಹಾತ್ಮರಾದ ಬೈಲಹೊಂಗಲ ಶಿವಾನಂದ ಮಠದ  ಮಹಾದೇವ ಸರಸ್ವತಿ ಮಹಾಸ್ವಾಮಿಗಳು, ಹುಣಶ್ಯಾಳ ಕೈವಲ್ಯಾಶ್ರಮದ  ನಿಜಗುಣ ದೇವರು, ಮಲ್ಲಾಪೂರ ನೇಸರಗಿ ಗಾಳೇಶ್ವರ  ಮಠದ ಚಿದಾನಂದ ಮಹಾಸ್ವಾಮಿಗಳು,

ಇಂಚಲದ ಪೂರ್ಣನಂದ ಭಾರತಿ ಶ್ರೀಗಳು, ತೊಂಡಿಕಟ್ಟಿ ಅಭಿನವ ವೆಂಕಟೇಶ್ವರ ಶ್ರೀಗಳು, ದತ್ತವಾಡದ ಹೃಷಕೇಷಾನಂದ ಬಾಬಾ ಮಹಾರಾಜರು, ಸವಟಗಿ ಲಿಂಗಯ್ಯ ಸ್ವಾಮಿಗಳು, ಹಡಗಿನಹಾಳದ  ಮಲ್ಲೇಶ್ವರ ಶರಣರು, ಹಾರುಗೋಪ್ಪದ ಮಾತೋಶ್ರೀ ಶಿವಯೋಗಿಣಿ ತಾಯಿ, ಮುರಕಿಬಾವಿಯ ಮಾತೋಶ್ರೀ ಸುಜ್ಞಾನ ಭಾರತಿ, ಮದನಬಾವಿಯ ಚನ್ನವೃಷಬೇಂದ್ರ ದೇವರಕೊಂಡ ಮಠದ ಮಾತೋಶ್ರೀ ಶಿವದೇವಿ ತಾಯಿ ಸಾನಿಧ್ಯದಲ್ಲಿ  ಮಹಾತ್ಮರು  ಆದ್ಯಾತ್ಮಿಕ ಪ್ರವಚನ ನೀಡಿದರು.    ಈ ಸಂದರ್ಭದಲ್ಲಿ  ಮುಖಂಡರಾದ  ಬಸವಣ್ಣೆಪ್ಪ ಹಮ್ಮಿನಿ, ಶಿವಪ್ಪ ಗುಜನಾಳ, ನಿಂಗನಗೌಡ ದೊಡ್ಡಗೌಡರ, ಈರನಗೌಡ ದೊಡ್ಡಗೌಡರ, ಯಲ್ಲನಗೌಡ ದೊಡ್ಡಗೌಡರ,ಬಾಬುಗೌಡ ದೊಡ್ಡಗೌಡರ, ಯಲ್ಲನಗೌಡ ದೊಡ್ಡಗೌಡರ, ಅಜ್ಜಪ್ಪ ಹಮ್ಮಿನಿ, ಅಣ್ಣಯ್ಯ ನಂಜರಗಿ, ಶ್ರೀಕಾಂತ ಉಡಿಕೇರಿ,  ಸೇರಿದಂತೆ ಗ್ರಾಮದ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆವನ್ನು ಶಿವನಗೌಡ ದೊಡ್ಡಗೌಡರ ನೆರವೇರಿಸಿದರು.