ಜವಾನಿ ಜಾನೆಮನ್ ಚಿತ್ರದಲ್ಲಿ ಪೂಜಾ ಬೇದಿ ಸುಪುತ್ರಿ

ಮುಂಬೈ, ನ 22 :   ಚಿರಪರಿಚಿತ ನಟಿ ಪೂಜಾ ಬೇದಿ ಅವರ ಸುಪುತ್ರಿ ಆಲಿಯಾ ಬೇದಿ ಫನರ್ಿಚರ್ ವಾಲಾ ಬಾಲಿವುಡ್ ನ   'ಜವಾನಿ ಜಾನೆ ಮನ್' ಚಿತ್ರದ ಮೂಲಕ ಬಣ್ಣಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.   

ನಟ ಸೈಫ್ ಅಲಿ ಖಾನ್ ಅಭಿನಯದ ಈ ಚಿತ್ರವು ಇದೇ ತಿಂಗಳ 29 ರಂದು ಬಿಡುಗಡೆಯಾಗಬೇಕಿತ್ತು. ಆದರೀಗ  2020 ರ ಫೆಬ್ರವರಿ 7 ರಂದು ಈ ಚಿತ್ರ ತೆರೆಗೆ ಬರಲಿದೆ.  

ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಹೊರತಾಗಿ ನಟಿ ಟಬು ಕೂಡ ಕಾಣಿಸಿಕೊಳ್ಳಲಿದ್ದಾರೆ.   ಈ ಚಿತ್ರವನ್ನು ನಿತಿನ್ ಕಕ್ಕಡ್ ನಿದರ್ೆಶಿಸಲಿದ್ದು,  

 ಸೈಫ್ ಅಲಿ ಖಾನ್ ಸಹಾಯಕ ನಿದರ್ೆಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರಂತೆ.   

ಕಳೆದ ಕೆಲ ಸಮಯದ ಹಿಂದಷ್ಟೇ ಆಲಿಯಾ, ಜವಾನಿ ಜಾನೆ ಮನ್ ಚಿತ್ರದ ಕಲಾವಿದರೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋ ಒಂದನ್ನು ಇನ್ಸ್ ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿ, ಚಿತ್ರೀಕರಣದ ವೇಳೆ ಹಲವು ವಿಷಯಗಳನ್ನು ಕಲಿತುಕೊಂಡಿದ್ದು, ದೊಡ್ಡ ಕಲಾವಿದರೊಂದಿಗೆ ನಟಿಸಿದ್ದು, ವಿಶೇಷವಾಗಿತ್ತು ಎಂದು ಬರೆದುಕೊಂಡಿದ್ದರು.