ಲೋಕದರ್ಶನ ವರದಿ
ಹಳಿಯಾಳ 4: ಪಟ್ಟಣದಲ್ಲಿರುವ ಮರಾಠಾ ಭವನ ಹಾಗೂ ಛತ್ರಪತಿ ಶಿವಾಜಿ ಹೆಸರಿನ ಸಮುದಾಯ ಭವನ ಮೊದಲಾದ ಹೆಸರುಗಳಿಂದ ಮಂಜೂರಾದ ಅನುದಾನವನ್ನು ದುರ್ಬಳಕೆಯಾಗಿದ್ದು ಸಾಬೀತಾದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯರಾದ ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್ ಅಧ್ಯಕ್ಷ ಹುದ್ದೆಯಲ್ಲಿರುವ ಶ್ರೀಕಾಂತ ಘೋಟ್ನೇಕರ ಘೋಷಿಸಿದ್ದಾರೆ.
ತಮ್ಮ ಅಧ್ಯಕ್ಷತೆಯಲ್ಲಿರುವ ಛತ್ರಪತಿ ಶಿವಾಜಿ ವಿವಿಧೋದ್ದೇಶಗಳ ಸಹಕಾರಿ ಸಂಘದ ಸಭಾಭವನದಲ್ಲಿ ಗುರುವಾರ ತಾಲೂಕಾ ಮರಾಠಾ ಪರಿಷತ್ ಪದಾಧಿಕಾರಿಗಳ ಜೊತೆಗೂಡಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಘೋಟ್ನೇಕರ ಮಾತನಾಡುತ್ತಾ ತನ್ನ ಮೇಲೆ ಮಾಡಲಾಗಿರುವ ಗಂಭೀರ ಆಪಾದನೆಗಳನ್ನು ಅಲ್ಲಗಳೆಯುವುದಾಗಿ ಹೇಳಿದರು.
ಕನರ್ಾಟಕ ಕ್ಷತ್ರೀಯ ಮರಾಠಾ ಪರಿಷತ್ ಜಿಲ್ಲಾಧ್ಯಕ್ಷ ನಾಗೇಂದ್ರ ಜಿವೋಜಿ ನೇತೃತ್ವದಲ್ಲಿ ನಿಯೋಗವೊಂದು ಬುಧವಾರ ಕಾರವಾರಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ಹಳಿಯಾಳ ಪಟ್ಟಣದಲ್ಲಿರುವ ಮರಾಠಾ ಭವನ ಹಾಗೂ ಛತ್ರಪತಿ ಶಿವಾಜಿ ಹೆಸರಿನ ಸಮುದಾಯ ಭವನ ಮೊದಲಾದ ಹೆಸರುಗಳಿಂದ ಮಂಜೂರಾದ ಅನುದಾನ ದುರ್ಬಳಕೆಯಾಗುತ್ತಿದೆ. ಒಂದು ಮೊತ್ತವನ್ನು ನನ್ನ ಹೆಸರಿನಲ್ಲಿರುವ (ಎಸ್.ಎಲ್. ಘೋಟ್ನೇಕರ ಆಂಗ್ಲ ಮಾಧ್ಯಮ ಶಾಲೆ) ಇದರ ಕಟ್ಟಡ ಕಾರ್ಯಕ್ಕೆ ಉಪಯೋಗಿಸಲಾಗಿದೆ. ಮಾತ್ರವಲ್ಲದೇ ಅಸ್ತಿತ್ವದಲ್ಲಿರದ ಹಲವು ಸಂಘಟನೆಗಳ ಹೆಸರು ಸೃಷ್ಟಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 95 ಲಕ್ಷ ರೂ. ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಗಂಭೀರ ಆಪಾದನೆ ಮಾಡಿ ಈ ಬಗ್ಗೆ ತನಿಖೆಗೆ ಆಗ್ರಹಿಸಿದೆ.
ಛತ್ರಪತಿ ಸಮುದಾಯ ಭವನ ಹೆಸರಿನಿಂದ ಮಂಜೂರಾಗಿರುವ 20 ಲಕ್ಷ ರೂ.ಗಳನ್ನು ಅದರ ನಿಮರ್ಾಣಕ್ಕೆ ಜಾಗೆ ದೊರೆಯದ ಕಾರಣ ಅದನ್ನು ನಮ್ಮ ಸ್ಕೂಲ್ (ಎಸ್.ಎಲ್. ಘೋಟ್ನೇಕರ ಆಂಗ್ಲ ಮಾಧ್ಯಮ ಶಾಲೆ) ಕಟ್ಟಡದ ಮೇಲಂತಸ್ತಿನ ಮೇಲೆ ನಿಮರ್ಿಸಲಾಗುತ್ತಿದೆ ಎಂದು ಒಪ್ಪಿಕೊಂಡ ಶ್ರೀಕಾಂತ ಘೋಟ್ನೇಕರ ಈ ಭವನವನ್ನು ಸಾರ್ವಜನಿಕರಿಗೆ ವಿವಿಧ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುವ ಉದ್ದೇಶವಿದೆ. ಈ ಕೆಲಸಕ್ಕೆ ಪರವಾನಿಗೆ ಸಹ ಪಡೆಯಲಾಗಿದ್ದು, ಪಿಡಬ್ಲ್ಯೂಡಿ ಇಲಾಖೆಯಿಂದ ಎಸ್ಟಿಮೇಟ್ ಸಹ ಆಗಿದೆ. ಠರಾವು, ದಾಖಲೆ ಪತ್ರಗಳು, ಲೆಕ್ಕಪತ್ರ ಎಲ್ಲಾ ಸರಿಯಾಗಿ ಇರಿಸಲಾಗಿದೆ ಎಂದು ಹೇಳಿದರು. ಈಗಾಗಲೇ ಹಲವು ವರ್ಷಗಳ ಹಿಂದೆ ನಿಮರ್ಾಣಗೊಂಡಿರುವ ಮರಾಠಾ ಭವನ ಇದರ ಮುಂದುವರಿದ ಕಾಮಗಾರಿಗೆ 20 ಲಕ್ಷ ರೂ. ಮಂಜೂರಿಯಾಗಿದ್ದು ಈ ಪೈಕಿ 10 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿದೆ. ಉಳಿದ 10 ಲಕ್ಷ ರೂ. ಬಳಕೆಯಾಗಿಲ್ಲ.
ಇನ್ನೊಂದು 20 ಲಕ್ಷ ರೂ. ಅನುದಾನದಡಿ ಈ ಹಿಂದೆ ಮರಾಠಾ ಜಗದ್ಗುರುಗಳಾಗಿದ್ದ ದಿವಂಗತ ಸುರೇಶ ಭಾರತಿ ಸ್ವಾಮೀಜಿ ಇವರ ಹೆಸರಿಗೆ ಹವಗಿ ಗ್ರಾಮ ವ್ಯಾಪ್ತಿಯಲ್ಲಿ ಸವರ್ೆ ನಂ. 74 ರಲ್ಲಿ 2 ಎಕರೆ 37 ಗುಂಟೆ ಜಮೀನು ಇದ್ದು ಅಲ್ಲಿ ಶಹಾಜಿ ಭೋಸ್ಲೆ ಹೆಸರಿನಲ್ಲಿ ಸಮುದಾಯ ಭವನ ನಿಮರ್ಿಸುವ ಉದ್ದೇಶವಿದೆ. ಆದರೆ ಆ ಮೊತ್ತವನ್ನು ಜಿಲ್ಲಾಧಿಕಾರಿಗಳಿಂದ ಇನ್ನೂ ಪಡೆಯಲಾಗಿಲ್ಲ. ಒಟ್ಟಾರೆ ಹಿಂದುಳಿದ ವರ್ಗಗಳ ಇಲಾಖೆಯಿಂದ ಮಂಜೂರಾದ ಯಾವುದೇ ಅನುದಾನದ ದುರುಪಯೋಗವಾಗಿರುವ ಆರೋಪವನ್ನು ಅಲ್ಲಗಳೆದು ಆ ರೀತಿಯ ಆರೋಪ ಮಾಡುವುದನ್ನು ಖಂಡಿಸುವುದಾಗಿ ಪುನರುಚ್ಛರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಮಂಗಲಾ ಕಶೀಲಕರ, ಎಲ್.ಎಸ್. ಅರಸಿನಗೇರಿ, ಅನಿಲ ಚವ್ಹಾಣ, ಗೋವಿಂದ ದಲಾಲ, ಬಾಲಕೃಷ್ಣ ಶಹಾಪುರಕರ, ಆರ್.ಎಸ್. ಅರಸಿನಗೇರಿ, ಮಂಜುನಾಥ ಅಳ್ನಾವರಕರ, ರವಿದಾಸ ಸುಂಟಕಾರ, ಮಾರುತಿ ಕಾಮ್ರೇಕರ, ಮಾರುತಿ ನರಗುಂದ, ಗಣಪತಿ ಸೂರ್ಯವಂಶಿ, ರಾಮಚಂದ್ರ ತಾಂಬೀಟ್ಕರ್, ಮೇಘರಾಜ ಪಾಟೀಲ, ಸಂಜಯ ಪಾಟೀಲ, ಮಹಾದೇವ ನೀಲಜಕರ ಮೊದಲಾದವರು ಉಪಸ್ಥಿತರಿದ್ದರು.
ರಾಜಕೀಯ ನಿವೃತ್ತಿ ಖಂಡಿತ
ಮರಾಠಾ ಸಮುದಾಯ ಹಾಗೂ ಛತ್ರಪತಿ ಶಿವಾಜಿ ಮಹಾರಾಜರು, ಶಹಾಜಿ ಭೋಸ್ಲೆ ಮೊದಲಾದವರ ಹೆಸರಿನಿಂದ ಸಮುದಾಯ ಭವನ ಮೊತ್ತ ಲಪಾಟಿಯಿಸಿರುವುದು ಅವ್ಯವಹಾರದ ಶಂಕೆ ಮಾಡಿರುವುದು ವೈಯಕ್ತಿಕವಾಗಿ ನನಗೆ ಹಾಗೂ ತಾಲೂಕಾ ಮರಾಠಾ ಪರಿಷತ್ಗೆ ಕಪ್ಪುಚುಕ್ಕೆ ಹಚ್ಚಲು ಪ್ರಯತ್ನಿಸುತ್ತಿರುವುದು ನೋವಿನ ಸಂಗತಿಯಾಗಿದ್ದು ಇದನ್ನು ನಾನು ಖಂಡಿಸುತ್ತೇನೆ. ಸತ್ಯಾಸತ್ಯತೆಯನ್ನು ಹೊರಬೀಳಿಸುವ ಯಾವುದೇ ತನಿಖೆಗೆ ನಾನು ಸಿದ್ಧನಾಗಿದ್ದು ಒಂದಾನುವೇಳೆ ಆರೋಪಗಳು ಸಾಬೀತಾದರೆ ರಾಜಕೀಯದಿಂದ ನಿವೃತ್ತನಾಗುವುದು ಖಂಡಿತ ಎಂದು ತಿಳಿಸಿದರು.