ಪೊಲೀಸರ ದುರ್ವರ್ತನೆ: ಸಿಎಂಗೆ ಮನವಿ

ಲೋಕದರ್ಶನ ವರದಿ

ಬೆಳಗಾವಿ 9, ಕಟ್ಟಡ ಕಾಮರ್ಿಕರು ತಮ್ಮ ಹಲವಾರು ಸಮಸ್ಯೆಗಳು ಹಾಗೂ ಬೇಡಿಕೆಗಳ ಕುರಿತು ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸಿದ್ದರು. ಆಗ ಬೆಳಗಾವಿ ತಾಲೂಕಿನ 48 ಜನರ ವಿರುದ್ಧ ಹಿರೇ ಬಾಗೆವಾಡಿ ಪೊಲೀಸರು ಸುಳ್ಳು ಆಪಾದನೆ ಹೊರಿಸಿ ಸಾರ್ವಜನಿಕರ ಸಮಸ್ಯೆ ಕುರಿತಾದ ಹೋರಾಟಕ್ಕೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಸುಳ್ಳು ಆಪಾದನೆ ಹೊತ್ತ ಎಲ್ಲರೂ ಕಳೆದ ಮೂರು ವರ್ಷಗಳಿಂದ ಬೆಳಗಾವಿಯ ಗಿನೇ ಮುನ್ಸಿಫ್ ಜೆಎಮ್ಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ಕುರಿತಾಗೆ ಹಾಜರಾಗುತ್ತಿದ್ದಾರೆ.  ಇದರಿಂದ ಅವರೆಲ್ಲರ ನೆಮ್ಮದಿ 

ಹಾಳಾಗಿದೆ.

ಎಲ್ಲ 48 ಜನರ ವಿರುದ್ಧ ನ್ಯಾಯಾಲಯದಲ್ಲಿ ನಡೆಯುತ್ತಿರುವ ಸುಳ್ಳು ಪ್ರಕರಣ ಹಿಂಪಡೆದು ಅವರು ನೆಮ್ಮದಿಯ ಬದುಕನ್ನು ಬದುಕುವಂತೆ ಸಹಾಯ ಹಸ್ತ ತೋರಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದಾರೆ.