ಲೋಕದರ್ಶನ ವರದಿ
ಚಿಕ್ಕೋಡಿ 02: ಗಿಡ ನೆಡುವದರಿಂದ ಮಳೆ ಪ್ರಮಾಣ ಹೆಚ್ಚಾಗುವುದು ಮತ್ತು ಜನರಿಗೆ ಆಮ್ಲ ಜನಕ ದೂರಿಯುತ್ತದೆ ವಿವಿದ ಜಾತಿಯ ಸಸಿಗಳನ್ನು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಶಾಲಾ ಆವರಣದಲ್ಲಿ ನಾವು ಗಿಡಿ ನೆಡೆವದ್ದರಿಂದ ಗ್ರಾಮದ ಅಂದ ಹೆಚ್ಚಾಗುವುದು ಮತ್ತು ಶುದ್ದಾದ ವಾತವರಣ ದೊರೆಯುತ್ತದು ಎಂದು ಚಿಕ್ಕೋಡಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್ ಪಿ ಅಭಯಂಕರ ಅವರು ಮಾತನಾಡಿದರು. ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಗುರುವಾರ ವಡ್ರಾಳ ಗ್ರಾಮ ಪಂಚಾಯತಿಂ ವ್ಯಾಪ್ತಿಯ ಮಜಲಟ್ಟಿ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಮಹಾವಿಧ್ಯಾಯ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಪ್ರಸಕ್ತ ದಿನಗಳಲ್ಲಿ ಭೊಮಿಯ ತಾಪಮಾನವನ್ನು ತಡೆಗಟ್ಟಲು ಹೆಚ್ಚುನ ಸಂಖ್ಯೆಯಲ್ಲಿ ಸಸಿಗಳನ್ನು ಬೆಳೆಸಬೇಕೆಂದು ಹೇಳಿದರು.
ವಲಯ ಅರಣ್ಯ ಅಧಿಕಾರಿಗಳಾದ ಸಂತೋಷ ಸುಂಬಳಿ ಮಾತನಾಡಿ ಪ್ರತಿ ಮಳೆಗಾಲದ ವಿಶೇಷವಾಗಿ ಗ್ರಾಮಗಳಲ್ಲಿ ಎಲ್ಲ ಬೀದಿ ಬಡಾವಣೆಗಳಲ್ಲಿ ಹೆಚ್ಚು ಸಸಿ ನೆಡುವದರಿಂದ ಭವಿಷ್ಯನಲ್ಲಿ ನೀರು ಮತ್ತು ಆಹಾರದ ಕೊರತೆಯನ್ನು ತಡೆಗಟ್ಟಬಹುದು ಮತ್ತು ಇವತ್ತು ನಾವು ಚಿಕ್ಕೋಡಿ ತಾಲೂಕಿನ ಡೊಣವಾಡ, ಮಜಲಟ್ಟಿ ಗೋದಲಮುಖ ಗಳತಗಾ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿ ನಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಂದರು. ಪ್ರಾಚಾರ್ಯರು ಸರ್ಕಾರಿ ಪ ಪೂ ಮಹಾವಿದ್ಯಾಲಯ ಮಜಲಟ್ಟಿ ಎ ಎಸ್ ಕೋಳಿ ಮಾತನಾಡಿ ಭಾಷೆಯನ್ನು ಉಳಿಸಿ ಬೆಳೆಸಬೇಕಾದ್ದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದ್ದು ರಾಜ್ಯವು ಆಗಾದವಾದ ಸಾಂಸ್ಕ್ರೃತಿಕ ಪರಂಪರೆಯೊಂದಿಗೆ ಸಂಪನ್ಮೂಲಗಳ ಲಭ್ಯತೆಯಿಂದಾಗಿ ಅನ್ಯಭಾಷಿಕರ ಆಶ್ರಯ ತಾಣವಾಗುತ್ತಿದೆ ಇಂತಹ ಪರಿಸ್ಥಿಯಲ್ಲಿ ಭಾಷಾಭಿಮಾಣ ಮೂಡಿಸಿದಲ್ಲಿ ಮಾತ್ರ ಸಾರ್ಥಕವಾಗಲಿದೆ ಎಂದರು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರೇಮಿಗಳಾದ ಬಿ ಆರ್ ಸಂಗಪ್ಪಗೋಳ ಉಪಪ್ರಾಚಾರ್ಯರು ಜಿ ಪಿ ತಂಗಡಿ ಉಪವಲಯ ಅರಣ್ಯ ಅಧಿಕಾರಿಗಳಾದ ಎಸ್ ಎಸ್ ಕುಂಬಾರ ಅರಣ್ಯ ಇಲಾಖೆ ಎಲ್ಲ ಸಿಬ್ಬಂದಿಗಳು ಹಾಗೂ ಎಲ್ಲ ಉಪನ್ಯಾಸಕರು ಶಿಕ್ಷಕ ವರ್ಗದವರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು