ರಾಯಬಾಗ 18: ಖಾಸಗಿ ಜಿವೊ ಕಂಪನಿಯವರು ಅಳವಡಿಸುತ್ತಿರುವ ಕೇಬಲ್ದಿಂದ ನೀರಿನ ಪೈಪ ಒಡೆದು ತಾವು ನೀರಿಗಾಗಿ ಪರದಾಡುವಂತಾಗಿದ್ದು, ಕೂಡಲೇ ಗ್ರಾಮ ಪಂಚಾಯತಿಯವರು ಕೇಬಲ್ ಅಳವಡಿಸುವುದನ್ನು ಬಂದ್ ಮಾಡಿಸಿ, ತಮಗೆ ನೀರಿನ ಸೌಕರ್ಯ ಮಾಡಿಕೊಡಬೇಕೆಂದು ಒತ್ತಾಯಿಸಿ ತಾಲೂಕಿನ ಭಿರಡಿ ಗ್ರಾಮದ ಅಂಬೇಡ್ಕರ್ ನಗರದ ನಿವಾಸಿಗಳು ಗ್ರಾ.ಪಂ.ನಲ್ಲಿ ನೀರಿನ ಕೊಡಗಳನ್ನು ಇಟ್ಟು ಪ್ರತಿಭಟಿಸಿ, ನಂತರ ಗ್ರಾ.ಪಂ.ಅಧ್ಯಕ್ಷ ಮುರಗೇಶ ನಿಶಾನದಾರ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಖಾಸಗಿ ಜಿವೊ ಕಂಪನಿಯವರು ಅಳವಡಿಸುತ್ತಿರುವ ಕೇಬಲ್ದಿಂದ ಗ್ರಾಮದಲ್ಲಿ ಚರಂಡಿ, ಕುಡಿಯುವ ನೀರಿನ ಪೈಪಲೈನ್ಗಳು ಒಡೆದು ಗ್ರಾಮದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದ ನಿವಾಸಿಗಳು, ಅಂಬೇಡ್ಕರ್ ಗಲ್ಲಿಯ ರಸ್ತೆ ಪಕ್ಕದಲ್ಲಿ ಕೇಬಲ್ ಅಳವಡಿಸುವ ಸಲುವಾಗಿ ಭೂಮಿ ಅಗೆಯುವ ಸಮಯದಲ್ಲಿ ಕುಡಿಯುವ ನೀರಿಗಾಗಿ ಅಳವಡಿಸಿರುವ ಪೈಪಲೈನ್ಗಳು ಒಡೆದು ಹೋಗಿರುವುದರಿಂದ ಬೇಸಿಗೆ ಸಮಯದಲ್ಲಿ ನೀರು ಇಲ್ಲದೇ ಸಂಕಷ್ಟ ಪಡುವಂತಾಗಿದೆ ಎಂದು ದೂರಿದರು.
ಗ್ರಾಮ ಪಂಚಾಯತಿ ಪಿಡಿಒ ಅವರು ನಮ್ಮ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇವರನ್ನು ಬೇರೆಡೆಗೆ ವಗರ್ಾಯಿಸಬೇಕೆಂದು ಒತ್ತಾಯಿಸಿದರು. ಕೂಡಲೇ ಜಿವೊ ಕಂಪನಿಯವರಿಗೆ ನೀಡಿರುವ ಅನುಮತಿ ರದ್ದುಗೊಳಿಸಿ, ತಮಗೆ ನೀರಿನ ವ್ಯವಸ್ಥೆ ಮಾಡಿ ಕೊಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಗ್ರಾ.ಪಂ.ಅಧ್ಯಕ್ಷರು ಭರವಸೆ ನೀಡಿದ ನಂತರ ಅಂಬೇಡ್ಕರ್ ನಗರದ ನಿವಾಸಿಗಳು ಪ್ರತಿಭಟನೆ ಹಿಂಪಡೆದರು.
ತಾಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ತೀರ ಕುಸಿದು ನೀರಿಗಾಗಿ ಜನರು ಪರದಾಡುತ್ತಿದ್ದರೆ, ಇತ್ತ ಖಾಸಗಿ ಜಿವೊ ಕಂಪನಿಯವರು ನಿಯಮಗಳನ್ನು ಗಾಳಿಗೆ ತೂರಿ ಕೇಬಲ್ ಅಳವಡಿಸುತ್ತಿದ್ದು, ನೀರಿನ ಪೈಪ್ಗಳು ಒಡೆದು ನೀರು ಸಂಕಷ್ಟ ತಂದಿದೆ. ಆದಷ್ಟು ಶೀಘ್ರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು.