ಲೋಕದರ್ಶನ ವರದಿ
ಕಂಪ್ಲಿ03:ತಾಲೂಕಿನ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ 14ನೇ ವಾಷರ್ಿಕೋತ್ಸವ ಅಂಗವಾಗಿ ಕಳೆದ ಎರಡು ದಿನಗಳಿಂದ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.
ಸಾಯಿಬಾಬಾ ದೇವಸ್ಥಾನದಲ್ಲಿ ಭಾನುವಾರದಂದು ವೇದ ವಿದ್ವಾನ್ ಮಲ್ಲಿಕಾಜರ್ುನ ಶರ್ಮ ಅವರ ಪೌರೋಹಿತ್ಯದಲ್ಲಿ ಕಾಕಡ ಆರತಿ, ಪಂಚಾಮೃತ ಅಭಿಷೇಕ, ಹಾಗೂ 21 ದ್ರವ್ಯಗಳ ಅಭಿಷೇಕ, ರುದ್ರಾಭಿಷೇಕ, ಸರ್ವಕಷ್ಟಗಳ ನಿವಾರಣೆಗಾಗಿ ಸಾಯಿ ಸತ್ಯವ್ರತ ಸೇರಿ ಧಾಮರ್ಿಕ ಕಾರ್ಯಕ್ರಮಗಳು ನೆರವೇರಿದವು. ಶಿರಡಿ ಸಾಯಿಬಾಬಾಗೆ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು. ಅನ್ನ ದಾಸೋಹ ಜರುಗಿತು. ಸಂಜೆ ಸಂಧ್ಯಾ ಆರತಿ, ವಿಶೇಷ ಪಲ್ಲಕ್ಕಿ ಸೇವೆ ಹಾಗೂ ಶೇಜಾರಾತಿ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು. ಹಿಂದಿನ ದಿನದಂದು ಸಾಯಿಬಾಬಾ ದೇವಸ್ಥಾನದಲ್ಲಿ "ಓಂ ಸಾಯಿ ಶ್ರೀ ಸಾಯಿ ಜಯ ಜಯ" ಏಕನಾಮ ನೆರವೇರಿಸಲಾಗಿತ್ತು.
ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಅವರು ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದು, ದೇವರ ಕೃಪೆಗೆ ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ಶಿರಿಡಿ ಸಾಯಿಬಾಬಾ ದೇವಸ್ಥಾನ ಸೇವಾ ಟ್ರಸ್ಟ್ನ ಅಧ್ಯಕ್ಷ ಡಿ.ವಿ.ಸತ್ಯನಾರಾಯಣ, ಕಾರ್ಯಕಾರಣಿ ಸಮಿತಿಯ ಸದಸ್ಯರಾದ ಕೊಡಿದಲ್ ವೆಂಕಟೇಶ್, ಭಟ್ಟ ಪ್ರಸಾದ್, ವೆಂಕಟೇಶ್ವರರಾವ್, ರಾಮ್ಗೋಪಾಲರೆಡ್ಡಿ, ಪವನ್ಕುಮಾರ್ರೆಡ್ಡಿ, ದೇವೇಂದ್ರಪ್ಪ, ಶಂಕರನಾರಾಯಣ, ಎಂ.ಅಶೋಕ್, ಎಲ್ಐಸಿ ಶ್ರೀನಿವಾಸ್, ಗಿರಿಯಪ್ಪ ಸೇರಿದಂತೆ ಅನೇಕರಿದ್ದರು.