ಮುಂಡಗೋಡ 27: ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದ ಪ್ರತಿಭಾವಂತ ದೇಹದಾರ್ಢ್ಯ ಪಟು ಫಕ್ತಿರೇಶ ರಾಮಣ್ಣ. ಹಿಕೆಯಯನವರ ದಿ. 25ರಂದು ಅಕೋಲಾದಲ್ಲಿ ಶ್ರೀ ಬಾರ್ಡೋಲಿ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ನ ವತಿಯಿಂದ ನಡೆದ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 55 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಮುಂಡಗೋಡ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದು ತಾಲೂಕಿನ ಎಲ್ಲಾ ಗುರು ಹಿರಿಯರು ಶುಭ ಹಾರೈಸಿದ್ದಾರೆ. ಪ್ರತಿಭಾವಂತ ಫಕ್ತಿರೇಶ ರಾಮಣ್ಣ ಹಿಕೆಯಯನವರ ಛಲ ಬಿಡದೆ ಬಾಡಿ ಬಿಲ್ಡಿಂಗ್ ನಲ್ಲಿ ತನ್ನ ಛಾಪು ಮೂಡಿಸುತ್ತಿರುವ ಈಗಿನ ಯುವಕರಿಗೆ ಮಾದರಿ ಆಗಿ ಗುಟ್ಕಾ, ಎಣ್ಣೆ , ಮೊಬೈಲ್ ದಾಸರಾಗಿ ಜೀವನದ ಅಮೂಲ್ಯ ಸಮಯವನ್ನು ಹಾಳು ಮಾಡುವ ಎಷ್ಟೋ ಜನಕ್ಕೆ ಸ್ಫೂರ್ತಿಯಾಗಲಿ. ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸೋಣ.