ನವದೆಹಲಿ, ಏ 16 ಪೆಟ್ರೋಲ್ ಬೆಲೆ ಸತತ ಎರಡು ದಿನ ಹೆಚ್ಚಳಗೊಂಡ ನಂತರ ಇಂದು ದೇಶದ ಪ್ರಮುಖ ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ಮತ್ತು ಡೀಸೆಲ್ ಬೆಲೆಯಲ್ಲಿ 5 ಪೈಸೆ ಇಳಿಕೆಯಾಗಿದೆ. ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 72.93 ರೂ. ಇದ್ದು, ನಿನ್ನೆ ಇದು 72.98ರಲ್ಲಿತ್ತು. ಸೋಮವಾರ 66.31 ರೂಪಾಯಿಯಾಗಿದ್ದ ಡೀಸೆಲ್ ಬೆಲೆ ಇಂದು 66.26 ರೂ.ಗೆ ಇಳಿದಿದೆ. ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 78.50, ರೂ.ಮಾರಾಟ ಮಾಡಲಾಗುತ್ತಿದೆ. ಸೋಮವಾರ ಇಲ್ಲಿ ಐದು ಪೈಸೆ ಏರಿಕೆಯಾಗಿತ್ತು. ಡೀಸೆಲ್ ಬೆಲೆ 69.40 ರೂ.ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ 74.95 ರೂ., ಡೀಸೆಲ್ 68.05 ರೂ. ಆಗಿದೆ ಎಂದು ಭಾರತೀಯ ತೈಲ ನಿಗಮದ ವೆಬ್ಸೈಟ್ ತಿಳಿಸಿದೆ. ನಿನ್ನೆ ದೇಶದ ಪೂರ್ವ ಭಾಗಗಳಲ್ಲಿ ಪೆಟ್ರೋಲ್ 75, ಡೀಸೆಲ್ 68 ರೂ.ಗೆ ಮಾರಾಟವಾಗಿತ್ತು. ಇದೇ ರೀತಿ ಚೆನ್ನೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 75.69, ಡೀಸೆಲ್ 70.01 ರೂ.ತಲುಪಿದೆ.ನೋಯ್ಡಾದಲ್ಲಿ ಪೆಟ್ರೋಲ್ 72.79, ಡೀಸೆಲ್ 65.51 ರೂ., ಗುರ್ ಗಾಂವ್ನಲ್ಲಿ ಪೆಟ್ರೋಲ್ 72.25, ಡೀಸೆಲ್ 65.40 ರೂ.ಆಗಿದೆ ಎಂದು ನಿಗಮ ತಿಳಿಸಿದೆ.