ಧಾರವಾಡ
23: ಸಾಂಸ್ಕೃತಿಕ
ರಾಜಧಾನಿ, ಸಂಗೀತದ ತವರೂರು ಎಂದು ಭಾರತದ ಇತಿಹಾಸದ
ಪುಟಗಳಲ್ಲಿ ತನ್ನ ಹೆಸರು ಸ್ಥಾಯಿಕರಿಸಿದ
ಊರು ಧಾರವಾಡ. ಇಂಥ ಎಲ್ಲ ಕಾರ್ಯಕ್ರಮಗಳಿಗೆ
ವೇದಿಕೆ ಒದಗಿಸಿಕೊಡುತ್ತಾ ಕಲೆ, ಕಲಾವಿದರಿಗೆ ಸದಾ
ಪ್ರೋತ್ಸಾಹ ನೀಡುತ್ತಿರುವುದು ಕನರ್ಾಟಕ ವಿದ್ಯಾವರ್ಧಕ ಸಂಘ ಎಂದು ಕ.ವಿ.ವ. ಸಂಘದ
ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿಯವರು ಹೇಳಿದರು.
ಅವರು
ರವಿವಾರ ಇಲ್ಲಿಯ ಕ.ವಿ.ವ.ಸಂಘದ ಡಾ. ಪಾಪು
ಸಭಾಭವನದಲ್ಲಿ ಸುದಿಶಾ ಇವೇಂಟ್ಸ್ ಏರ್ಪಡಿಸಿದ್ದ ಪಂಡಿತ್ ಶೇಷಗಿರಿದಾಸ ರಾಯಚೂರ ಅವರ ಸಂಗೀತ ಸಂಜೆ
``ದೀಪ ಸ್ವರಾಮೃತ'' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಗೀತ,
ನಾಟಕಗಳು ಮನಸ್ಸಿಗೆ ಆತ್ಮತೃಪ್ತಿ ನೀಡುವಂತವುಗಳು. ಇವುಗಳಲ್ಲಿ ಆಸಕ್ತಿ ಹೊಂದಿರುವವರು ಯಾವುದೆ ಲೌಕಿಕ ಲಾಭ-ನಷ್ಟಗಳ ಲೆಕ್ಕಹಾಕದೇ
ಇಂಥ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸುದಿಶಾ
ಇವೇಂಟ್ಸ್ನ ರಾಘವೇಂದ್ರ ಕುಂದಗೋಳ ತಮ್ಮ ಅನೇಕ ಇತಿಮಿತಿ
ಹಾಗೂ ದೈಹಿಕ ತೊಂದರೆಯ ಮಧ್ಯದಲ್ಲಿಯೂ
ಇಂಥ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಸಂಗೀತಾರಾಧನೆ ಮಾಡುವಲ್ಲಿ ತೋರುತ್ತಿರುವ ಅದಮ್ಯ ಬಯಕೆ, ಉತ್ಸಾಹ, ಶ್ರಮ ಶ್ಲಾಘನೀಯ ಎಂದರು.
ಮುಖ್ಯ
ಅತಿಥಿಯಾಗಿ ಆಗಮಿಸಿದ್ದ ಹುಡಾ ಮಾಜಿ ಅಧ್ಯಕ್ಷ
ರಾಜಾ ದೇಸಾಯಿ ಅವರು ಮಾತನಾಡಿ, ಒಬ್ಬ
ವ್ಯಕ್ತಿ ಏನನ್ನಾದರೂ ಸಾಧಿಸಬೇಕೆಂಬ ಛಲ ತೊಟ್ಟರೆ ಎಂತಹ
ನ್ಯೂನ್ಯತೆ ಇದ್ದರೂ ಸಾಧಿಸಬಹುದೆಂಬುವುದಕ್ಕೆ ರಾಘವೇಂದ್ರ ಕುಂದಗೋಳ ಅವರೇ ಸಾಕ್ಷಿ, ಇಂತವರಿಗೆ
ಎಲ್ಲರೂ ಸಹಾಯ, ಸಹಕಾರ ಹಾಗೂ ಪ್ರೋತ್ಸಾಹ ನೀಡುವುದು
ಅವಶ್ಯ ಎಂದ ಅವರು, ಧಾರವಾಡ
ಸಂಗೀತದ ತೊಟ್ಟಿಲು, ಸಾಂಸ್ಕೃತಿಕ ಕೇಂದ್ರ ಬಿಂದು. ಸದಾ ಸಂಗೀತ, ಸಂಸ್ಕೃತಿ,
ಪರಂಪರೆಗೆ ಪ್ರೋತ್ಸಾಹ ನೀಡುತ್ತಾ, ಗಂಗೂಬಾಯಿ ಹಾನಗಲ್, ಭಿಮಸೇನ ಜೋಶಿ, ಮಲ್ಲಿಕಾಜರ್ುನ ಮನ್ಸೂರ, ಬಸವರಾಜ ರಾಜಗುರು ಮುಂತಾದ ದಿಗ್ಗಜರನ್ನು ಸಂಗೀತ ಕ್ಷೇತ್ರಕ್ಕೆ ನೀಡಿದ ಹಿರಿಮೆ ಹೊಂದಿದೆ. ಪ್ರಸ್ತುತ ನಾವು ಪಾಶ್ಚಿಮಾತ್ಯ ಸಂಗೀತ,
ಸಂಸ್ಕೃತಿಗೆ ಮಾರುಹೋಗುತ್ತಿದ್ದು, ಕಲಾವಿದರಿಗೆ ಸಮಾಜ, ಸಂಘ, ಸಂಸ್ಥೆಗಳು, ಆಥರ್ಿಕ
ನೆರವು ನೀಡುವುದು ವಿರಳವಾಗಿದೆ. ಅದನ್ನು ಬಿಟ್ಟು ನಮ್ಮ ಸಂಸ್ಕೃತಿ, ಪರಂಪರೆ
ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು, ಸಮಾಜ
ತಮ್ಮದೇ ಆದ ಕಾಣಿಕೆ ನೀಡಬೇಕು.
ಈ ನಿಟ್ಟಿನಲ್ಲಿ ನಾಡಿನ ಹಿರಿಯ ಸಂಸ್ಥೆಯಾದ ಕನರ್ಾಟಕ ವಿದ್ಯಾವರ್ಧಕ ಸಂಘವು ನೂರಾರು ವರ್ಷಗಳಿಂದ ಕಲಾವಿದರಿಗೆ, ಸಾಹಿತಿಗಳಿಗೆ ಸಹಕಾರ, ಪ್ರೋತ್ಸಾಹ ನೀಡುತ್ತಾ ಅವರಿಗೆ ಅನುಕೂಲ ಮಾಡಿಕೊಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಅಧ್ಯಕ್ಷತೆ
ವಹಿಸಿದ್ದ ಕ.ವಿ.ವ.ಸಂಘದ ಕೋಶಾಧ್ಯಕ್ಷ ಕೃಷ್ಣ
ಜೋಶಿ ಅವರು ಮಾತನಾಡಿ, ಹಿಂದಿನ
ಕಾಲದಲ್ಲಿ ಕಲೆ, ಕಲಾವಿದರಿಗೆ ರಾಜಾಶ್ರಯ
ಇತ್ತು. ಈಗ ಪ್ರಜೆಗಳೆ ರಾಜರು.
ನಾವೆಲ್ಲ ಪ್ರೋತ್ಸಾಹ ನೀಡಿದಾಗ ಕಲೆಗಳು ಉಳಿದು, ಬೆಳೆಯಲು ಸಾಧ್ಯ. ಸಂಗೀತ ಒಂದು ತಪಸ್ಸು ಇದ್ದಂತೆ.
ಸಂಗೀತಕ್ಕೆ ಅಪಾರ ಶಕ್ತಿ ಇದ್ದು,
ಇದರಿಂದ ಮನಸಿಗೆ ಉಲ್ಲಾಸ, ಉತ್ಸಾಹ, ನೆಮ್ಮದಿ, ಏಕಾಗ್ರತೆ ಮೂಡುತ್ತದೆ. ಕಲೆ ದೊಡ್ಡದು, ಕಲೆಗೆ
ಬೆಲೆ ಕಟ್ಟಲು ಸಾಧ್ಯವಿಲ್ಲ, ಈ
ದಿಶೆಯಲ್ಲಿ ಕನರ್ಾಟಕ ವಿದ್ಯಾವರ್ಧಕ ಸಂಘವು ಎಲ್ಲ ಕಲೆ, ಕಲಾವಿದರಿಗೆ
ಸದಾ ತನ್ನ ಬಾಗಿಲು ತೆರೆದಿರುತ್ತದೆ
ಎಂದ ಅವರು ರಾಘವೇಂದ್ರ ಕುಂದಗೋಳ
ಛಲವಾದಿ, ಉತ್ಸಾಹಿ. ತಮ್ಮ ದೇಹಕ್ಕೆ ಅನಾರೋಗ್ಯ
ಇದ್ದರೂ ಸಾಧಿಸುವ ಛಲ ಹೊಂದಿರುವ ಇವರ
ಪ್ರಯತ್ನದಿಂದ ಇಂದು ಜರುಗಿದ ಈ
ಕಾರ್ಯಕ್ರಮಕ್ಕೆ, ದೇಶ ವಿದೇಶಗಳಲ್ಲಿ ಸಾವಿರಾರು
ಕಾರ್ಯಕ್ರಮಗಳನ್ನು ನೀಡಿ, ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ
ಭಾಜನರಾದ ಪಂ. ಶೇಷಗಿರಿದಾಸ ರಾಯಚೂರ
ಅವರು ಆಗಮಿಸಿ ಕಾರ್ಯಕ್ರಮ ನೀಡುವಂತೆ ಮಾಡಿದೆ ಎಂದರು.
ವೇದಿಕೆಯಲ್ಲಿ
ಸುದಿಶಾ ಇವೇಂಟ್ಸ್ನ ರಾಘವೇಂದ್ರ ಕುಂದಗೋಳ ಉಪಸ್ಥಿತರಿದ್ದರು. ಕಲಾ ಸಂಗಮ ಅಧ್ಯಕ್ಷ
ಪ್ರಭು ಹಂಚಿನಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಿರಜಾ ಹೊಸೂರ ಹಾಗೂ ವೀಣಾ ಕುಲಕಣರ್ಿ
ಪ್ರಾರ್ಥನೆ ನಡೆಸಿಕೊಟ್ಟರು.
ನಂತರ
ಪಂಡಿತ್ ಶೇಷಗಿರಿದಾಸ ರಾಯಚೂರ ಅವರು ತಮ್ಮ ಕಂಚಿನ
ಕಂಠದಿಂದ ಸೊಗಸಾಗಿ ಸಂಗೀತ ಸಂಜೆ ``ದೀಪ ಸ್ವರಾಮೃತ'' ಕಾರ್ಯಕ್ರಮ
ನಡೆಸಿಕೊಟ್ಟು ಸಂಗೀತಾಸಕ್ತರ ಮನತಣಿಸಿದರು. ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್.
ಬಿ. ಗುತ್ತಲ, ಶಾಂತೇಶ ಗಾಮನಗಟ್ಟಿ, ಮಲ್ಲಯ್ಯಸ್ವಾಮಿ ಅಡಗಿಮಠ, ನಾರಾಯಣರಾವ ಕುಲಕಣರ್ಿ, ಮೋಹನದಾಸ ಬಾಳಂಬಿಡ, ರವೀಂದ್ರ ಹೊಸೂರ ಸೇರಿದಂತೆ ಅನೇಕ ಸಂಗೀತಾಸಕ್ತರು ಭಾಗವಹಿಸಿದ್ದರು.