ನವದೆಹಲಿ, ಡಿ 20: ಜನರು ಮಾಡುವ ಕಾರ್ಯ ಚಟುವಟಿಕೆಗಳು ರಾಷ್ಟ್ರದ ಹಿತಾಸಕ್ತಿಯ ಗುರಿ ಹೊಂದಿರಬೇಕೇ ಹೊರತು, ಹಿಂಸಾಚಾರಕ್ಕೆ ಇಂಬು ನೀಡಬಾರದರು ಎಂದು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸಲಹೆ ನೀಡಿದ್ದಾರೆ
ಭಿನ್ನಾಭಿಪ್ರಾಯವು ಪ್ರಜಾಪ್ರಭುತ್ವದ ಮೂಲ ಗುಣವಾಗಿದ್ದರೂ, "ಜನರು ಶಾಂತಿಯುತ, ಪ್ರಜಾಪ್ರಭುತ್ವ ವಿಧಾನಗಳನ್ನು ಅನುಸರಿಸಬೇಕು ಮತ್ತು ಸಂವಿಧಾನದ ಮನೋಭಾವಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು" ಎಂದು ಅವರು ಹೇಳಿದರು.
ರಾಕ್ಷುಲ್ ಅಗವರ್ಾಲ್ ಮತ್ತು ಭಾರತಿ ಎಸ್ ಪ್ರಧಾನ್ ಅವರ "ಪ್ರಕ್ಷುಬ್ಧತೆ ಮತ್ತು ವಿಜಯೋತ್ಸವ - ಮೋದಿ ಇಯರ್ಸ" ಪುಸ್ತಕವನ್ನು ಬಿಡುಗಡೆ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ವೆಂಕಯ್ಯನಾಯ್ಡು, ದೇಶದ ಚಿತ್ರಣಕ್ಕೆ ಹಾನಿಕಾರಕವಾದ ಯಾವುದನ್ನೂ ಮಾಡಬಾರದು ಎಂದು ಆಗ್ರಹಿಸಿದರು.
ರಾಷ್ಟ್ರದ ಸುರಕ್ಷತೆ, ಸಮಗ್ರತೆ ಮತ್ತು ಸಾರ್ವಭೌಮತ್ವವು ಅತ್ಯಂತ ಮಹತ್ವದ್ದಾಗಿದ್ದು,
ಸಾರ್ವಜನಿಕ ಪ್ರತಿನಿಧಿಗಳು ಜನರ ನಿರೀಕ್ಷೆಗೆ ತಕ್ಕಂತೆ ಬದುಕಬೇಕು ಮತ್ತು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಂತಹ ವೇದಿಕೆಗಳನ್ನು ಸಮಸ್ಯೆಗಳನ್ನು ಎತ್ತಿ ಹಿಡಿಯಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಮೋದಿಯವರ "ಸುಧಾರಣೆ, ನಿರ್ವಹಣೆ ಮತ್ತು ಬದಲಾವಣೆ" ಎಂಬ ಮಂತ್ರದಿಂದ ಅವರು ಪ್ರಭಾವಿತರಾಗಿದ್ದಾರೆ ಮತ್ತು "ರಾಷ್ಟ್ರದ ಪರಿವರ್ತನೆಯು ಸಮಯದ ಅವಶ್ಯಕತೆಯಾಗಿದ್ದು, ಈಗ ಕಾಲ ಕೂಡಿಬಂದಿದೆ" ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಕರ್ಾರ ಜಾರಿಗೊಳಿಸಿರುವ
ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ಬೇಟಿ ಬಚಾವೊ, ಬೇಟಿ ಪಡಾವೊ ಮತ್ತು ಹವಾಮಾನ ಬದಲಾವಣೆಯ ಹಾನಿಕಾರಕ ಪರಿಣಾಮಗಳನ್ನು ಎದುರಿಸುವ ಪರಿಸರ ಸಂರಕ್ಷಣೆಯ ಉಪಕ್ರಮಗಳ ಮೂಲಕ ಮಹಾತ್ಮ ಗಾಂಧಿಯವರ ದೃಷ್ಟಿಕೋನವನ್ನು ಕಾರ್ಯರೂಪಕ್ಕೆ ತಂದಿದೆ ಎಂದು ಹೇಳಿದರು.
ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು 2022 ರ ವೇಳೆಗೆ ಹೆಚ್ಚಿಸಲು ಪ್ರಧಾನಿ ಪ್ರಾರಂಭಿಸಿದ ಉಪಕ್ರಮಗಳನ್ನು ಶ್ಲಾಘಿಸಿದ ಅವರು, ಕಡಿಮೆ ಅವಧಿಯಲ್ಲಿ ಗಮನಾರ್ಹ ಸಂಖ್ಯೆಯ ಮೈಲಿಗಲ್ಲುಗಳನ್ನು ಸಾಧಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.