ಶಿವರಾತ್ರಿಯಿಂದ ಶಾಂತಿ, ನೆಮ್ಮದಿ ಪ್ರಾಪ್ತಿ: ರೇಖಾ ಅಕ್ಕ

Peace and tranquility from Shivaratri: Rekha Akka

ಮೂಡಲಗಿ 27: ಶಿವಧ್ಯಾನದ ಮೂಲಕ ಮನುಷ್ಯನಲ್ಲಿಯ ಅಂಧಕಾರ, ಅಹಂಕಾರ ಮತ್ತು ವಿಕಾರಾದಿಗಳನ್ನು ದೂರು ಮಾಡುವ ಮೂಲಕ ಶಿವರಾತ್ರಿಯು ಶಾಂತಿ, ನೆಮ್ಮದಿಯನ್ನು ಪ್ರಾಪ್ತಿಗೊಳಿಸುತ್ತದೆ ಎಂದು ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಮೂಡಲಗಿ ಕೇಂದ್ರದ ಸಂಚಾಲಕಿ ರೇಖಾ ಅಕ್ಕನವರು ಹೇಳಿದರು.  

ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರದಲ್ಲಿ ಬುಧವಾರ ಆಚರಿಸಿದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿವರಾತ್ರಿ ದಿನ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಗಳಿಂದ ಶಿವನ ಅನುಗ್ರಹ ದೊರೆಯುವುದು ಎಂದರು. ಕಲ್ಯಾಣಕಾರಿ, ಮಂಗಳಕಾರಿ ಮತ್ತು ಶುಭಕಾರಿಯಾಗಿರುವ ಶಿವನು ನಿರಾಕಾರನಾಗಿದ್ದಾನೆ. ಶಿವನು ಚೈತನ್ಯ ಸ್ವರೂಪಿಯಾಗಿದ್ದರಿಂದ ಜಗತ್ತು ಸೃಷ್ಠಿಯಾಗಿದೆ. ವಿಕರ್ಮಗಳಿಗೆ ಬಲಿಯಾಗದೆ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು ಎಂದರು.   

ಸವಿತಾ ಅಕ್ಕನವರು, ವೈ.ಬಿ. ಕುಲಿಗೋಡ, ಈರ​‍್ಪ ಹಂದಿಗುಂದ, ಮಲ್ಲಿಕಾರ್ಜನ ಎಮ್ಮಿಶೆಟ್ಟರು, ಗುರುಲಿಂಗಪ್ಪ ಶೀಲವಂತ, ಶಿವಬಸು ಗುರುವ, ಬಾಲಶೇಖರ ಬಂದಿ,  ಗೋಪಾಲ ಗಂಗರಡ್ಡಿ, ತುಪ್ಪದ, ತುಂಗಾ ಸೋನವಾಲ್ಕರ್, ಬಸವ್ವ ಮದಗನ್ನವರ, ಕಮಲಾ ಶೀಲವಂತ, ಸುಮಿತ್ರಾ ಸೋನವಾಲಕರ, ಬೋರವ್ವ ನೇಮಗೌಡರ, ಮಹಾದೇವಿ ತಾಂವಶಿ, ರಜನಿ ಬಂದಿ, ಸರೋಜಾ ಹೊಸೂರ, ಕವಿತಾ ಸೋನವಾಲಕರ, ತಾರಾ ಸೋನವಾಲಕರ, ಯಲ್ಲವ್ವ ನೇಮಗೌಡರ, ಅನ್ನಪೂರ್ಣ ತುಪ್ಪದ ಇದ್ದರು. ಶಿವನ ನಾಮಸ್ಮರಣೆಯೊಂದಿಗೆ ಧ್ವಜಾರೋಹನ ಜರುಗಿತು. ಸೇರಿದ ಭಕ್ತರೆಲ್ಲರು ಸಾತ್ವಿಕ ಆಹಾರ ಸೇವಿಸಿದರು.