ಉದ್ಯೋಗ ಖಾತ್ರಿಯ ಹಣ ಪಾವತಿಸಿ, ಗುಳೆ ಹೋಗುವುದನ್ನು ತಪ್ಪಿಸಿ: ಅನ್ನಪೂರ್ಣಮ್ಮ
ಉದ್ಯೋಗ ಖಾತ್ರಿಯ ಹಣ ಪಾವತಿಸಿ, ಗುಳೆ ಹೋಗುವುದನ್ನು ತಪ್ಪಿಸಿ: ಅನ್ನಪೂರ್ಣಮ್ಮPay the job guaranteed and avoid going: Annapurnamma
Lokadrshan Daily
1/25/25, 6:44 PM ಪ್ರಕಟಿಸಲಾಗಿದೆ
ಲೋಕದರ್ಶನ ವರದಿ
ಹರಪನಹಳ್ಳಿ: ರೈತರು ವರ್ಷಗಟ್ಟಲೆ ಬೆಳೆದ ಫಸಲನ್ನು ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದು ಇದು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದಲ್ಲದೆ, ಅಪಘಾತಕ್ಕಿಡು ಮಾಡುತ್ತಿದ್ದು ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಈ ಬಗ್ಗೆ ಕೃಷಿ ಇಲಾಖೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ತಾಪಂ ಅಧ್ಯಕ್ಷ ಅನ್ನಪೂರ್ಣಮ್ಮಸಂತೋಷಕುಮಾರ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯಿತಿ ರಾಜೀವಗಾಂಧೀ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೊಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ರೈತರಿಗೆ ಒಕ್ಕಣಿಗೆ ಮಾಡಲು ಸ್ಥಳಾವಕಾಶವನ್ನು ಕಲ್ಪಿಸಿಕೊಡಲು ಇಓ ಅವರು ಸೂಚಿಸಬೇಕು ಎಂದರು.
ತಾಲ್ಲೂಕಿನ ಸಕರ್ಾರಿ ಶಾಲೆಗಳಲ್ಲಿ ಬಿಸಿಯೂಟದ ಸಾಮಾಗ್ರಿಗಳ ಕೊರತೆ ಇದ್ದು, ಇದನ್ನು ಸರಿಪಡಿಸಲು ಎಸ್ಡಿಎಂಸಿ ಮೂಲಕ ಖರೀದಿಸಿ ಸರಿದೂಗಿಸಲು ತಾಪಂ ಸಭೆಯಲ್ಲಿ ಅಧಿಕಾರಿ ಜಯರಾಜ್ಗೆ ತಿಳಿಸಿದರು.
ಪಶು ಸಂಗೋಪನಾ ಇಲಾಕೆಯ ತಲ್ಲೂಕಿನಲ್ಲಿ 350 ಕುರಿಗಳಿಗೆ ಮಾತ್ರ ಪರಿಹಾರ ಧನ ಒದಗಿಸಿದ್ದು ಇದೀಗಾ ದಾವಣಗೆರೆಯಿಂದ ಬೇರ್ಪಟ್ಟು ಬಳ್ಳಾರಿಗೆ ಸೇರಿದ ಪರಿಣಾಮ ಇಲ್ಲಿಯವರೆಗೂ ಯಾವುದೇ ಪರಿಹಾರ ಅನುದಾನ ಬಂದಿರುವುದಿಲ್ಲ ಎಂದು ತಾಪಂ ಗಮನಕ್ಕೆ ತಂದರು. ತಾ ಪಂ ಉಪಾದ್ಯಕ್ಷ ಮಂಜ್ಯನಾಯ್ಕ ದ್ವನಿಗೂಡಿಸಿ ಮಾತನಾಡಿದ ಅವರು ದಾವಣಗೆರೆ ಜಿಲ್ಲೆಯಿಂದ ಬಳ್ಳಾರಿಗೆ ಸೇರಿರುವುದು ಯಾವ ಪುರುಷಾರ್ಥಕ್ಕೆ ಎಲ್ಲಾ ವಿಷಯಗಳಲ್ಲಿತಾಲ್ಲೂಕನ್ನುಕಡೆಗಣಿಸಲಾಗುತ್ತಿದ್ದು ಬಳ್ಳಾರಿ ಜಿಲ್ಲೆಯ ಅಧಿಕಾರಿಗಳು ನಮ್ಮ ತಾಲ್ಲೂಕುನ್ನು ಮಲತಾಯಿ ಧೋರಣೆಯಂತೆ ಕಾಣಲಾಗುತ್ತಿದೆ. ಬಡ
ಜನತೆಗೆ ಗುಳೆ ಹೋಗುವುದಕ್ಕೆ ಬಳ್ಳಾರಿ ಜಿಲ್ಲಾ ಮುಖ್ಯಕಾರ್ಯದಶರ್ಿ ನೇರವಾಗಿ ಹೊಣೆಗಾರರಾಗುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಶಿಸ್ತ ಕ್ರಮ ಜರುಗಿಸಿ ಬೇರೆಡೆ ವಗರ್ಾವಣೆ ಮಾಡಬೇಕು ಇಲ್ಲದಿದ್ದರೆ ಜಿಲ್ಲಾ ಪಂಚಾಯ್ತಿ ಹಾಗೂಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಅಸಮಾಧನ ವ್ಯಕ್ತಪಡಿಸಿದರು. ಅಧ್ಯಕ್ಷೆ ಅನ್ನಪೂರ್ಣಮ್ಮ ಸಂತೋಷಕುಮಾರ ಮಾತನಾಡಿ, ಕೆಡಿಪಿ ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಬರದೇ ಅವರ ಸಿಬ್ಬಂದಿಗಳನ್ನು ಕಳಿಸುತ್ತಿದ್ದಾರೆ ಇಲ್ಲವೇ ಪ್ರಭಾರಿ ಅಧಿಕಾರಿಗಳು ಸಭೆಗೆ ಮಾಹಿತಿ ಇಲ್ಲದೇ ಹಾಜರಾಗುತ್ತಾರೆ. ಇದರಿಂದ ಪ್ರಗತಿ ಪರಿಶೀಲನೆ ಹೇಗೆ ಅರಿಯಬೇಕು. ಇಲ್ಲವಾದರೆ ಅಧಿಕಾರಿಗಳೇ ತಾವು ಹಾಜರಾಗುವ ದಿನಾಂಕ ಸಮಯವನ್ನು ನಿರ್ಣಯಿಸಿದರೆ ತಾವು ಅಂದಿನ ಸಭೆಗೆ ಬಿಡುವು ಮಾಡಿಕೊಂಡು ಹಾಜರಾಗುತ್ತೇವೆ ಎಂದರು.
ಕೃಷಿ ಸಹಾಯಕ ನಿದರ್ೆಶಕ ಗೋದಿ ಮಂಜುನಾಥ ಮಾತನಾಢಿ, ತಾಲ್ಲೂಕಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚಾಗಿದೆ. ಇದರಿಂದ 8115 ಹೆಕ್ಟರ್ ಪ್ರದೇಶದಲ್ಲಿ ಹಿಂಗಾರು ಹಂಗಾಮ ಬಿತ್ತನೆಯಾಗಿದೆ. ರೈತರಿಗೆ ಅವಶ್ಯವಾಗಿರುವ ತಾಡಪಲುಗಳನ್ನು ಹೆಚ್ಚಾಗಿ ನೀಡಲು ಮುಂಬರುವ ಅನುದಾನದಲ್ಲಿ ಹೆಚ್ಚು ಮೀಸಲು ಮಾಡುವುದಾಗಿ ಸಭೆಗೆ ಭರವಸೆ ನೀಡಿದರು. ತಾಲ್ಲೂಕಿನ ಕನ್ನನಾಯಕನಹಳ್ಳಿಯ ಮುರಾಜರ್ಿ ವಸತಿ ಶಾಲೆಯ ಸಿಬ್ಬಂದಿಗಳನ್ನು ಸಭೆಗೆ ಕರೆಸಿಕೊಂಡು ಕೂಡಲೇ ವಸತಿ ಶಾಲೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚಿಸಿದರು.ವಸತಿ ಶಾಲೆಯ ಪರಿಸ್ಥಿತಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ಹಾಕಿ ಸೂಕ್ತ ಕ್ರಮ ಜರುಗಿಸುವಂತೆ ಶಿಪಾರಸು ಮಾಡುತ್ತೇವೆ ಎಂದು ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಎಚ್ಚರಿಸಿದರು. ಇಓ ಆನಂತರಾಜ .ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ, ಬೆಸ್ಕಾಂ ಅಭಿಯಂತರಾದ ಎಸ್.ಭೀಮಪ್ಪ, ಜಯಪ್ಪ ಇತರರು
ಭಾಗವಹಿಸಿದ್ದರು.