ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಬೇಕು

ಲೋಕದರ್ಶನ ವರದಿ 

ಯರಗಟ್ಟಿ 28: ಗಿಡವಾಗಿ ಬಗ್ಗುದು ಮರವಾಗಿ ಬಗ್ಗಿತೇ ಎಂಬ ಗಾದೆಯಂತೆ ಪ್ರಾಥಮಿಕ ಹಂತದಲ್ಲಿ ಇರುವಾಗಲೇ ಶಿಕ್ಷಕರು ಮಕ್ಕಳಲ್ಲಿ ದೇಶಾಭಿಮಾನ ಬೆಳಿಸಬೇಕು ಎಂದು ಮಾಜಿ ಸೈನಿಕ ಕುಮಾರ ಹಿರೇಮಠ ಹೇಳಿದರು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 71ನೇ ಗಣರಾಜ್ಯೋತ್ಸವದ ಅಂಗವಾಗಿ ವೀರಶೈವ ಲಿಂಗಾಯತ ತಾಲೂಕಾ ಯುವ ಘಟಕದ ವತಿಯಿಂದ ಬುಂದೆ ಲಾಡು ಲಾಡು ಹಾಗೂ ಚಾಕಲೇಟ್ ವಿತರಿಸಿ ಮಾತನಾಡುತ್ತಾ ಇಂದಿನ ಯುವಕರು ಹೆಚ್ಚಾಗಿ ದುಶ್ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ವೀರಶೈವ ಲಿಂಗಾಯತ ಯುವ ಘಟಕಾಧ್ಯಕ್ಷ ಶಿವುಕುಮಾರ ಜಕಾತಿ, ಉಪಾಧ್ಯಕ್ಷ ಶಿವಾನಂದ ಬಳಿಗಾರ, ಕಾರ್ಯಾಧ್ಯಕ್ಷ ಈರಣ್ಣ ಹುಲ್ಲೂರ, ಎಸ್ಡಿಎಮ್ಸಿ ಉಪಾಧ್ಯಕ್ಷ ರಫೀಕ್.ಡಿ.ಕೆ, ಮುಖ್ಯ ಶಿಕ್ಷಕ ಪುಂಡಲೀಕ ತಳವಾರ, ಶಿಕ್ಷಕರಾದ ವಿಜಯ ಮರಡಿ, ಬಿ.ಎ.ದೇಸಾಯಿ, ಆರ್.ಎ.ಗಂಗೂರ, ಎಮ್.ಎಚ್.ಮಾಕನ್ನವರ, ಎ.ಕೆ.ನಧಾಫ, ಯು.ಕೆ.ಜೋಶಿ, ಎಸ್.ಬಿ.ಗೂರನವರ ಮುಂತಾದವರಿದ್ದರು.