ಪ್ರಯಾಗ್ ರಾಜ್, ಜ 10 : ಪೌಷ್ಯ ಪೂರ್ಣಿಮೆಯ ಶುಕ್ರವಾರದಂದು ಮಾಘ ಮೇಳ ಆರಂಭವಾಗಿದೆ. ಭಕ್ತರ ಅನುಕೂಲಕ್ಕಾಗಿ ವಿಶೇಷ ರೈಲು ಮತ್ತು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ವಾರ್ಷಿಕ ಒಂದು ತಿಂಗಳ ಅವಧಿಯ ಮಾಘ ಮೇಳಕ್ಕೆ 3,500 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಮಕರ ಸಂಕ್ರಾಂತಿಗೆ ಮುನ್ನ ಆರಂಭವಾಗುವ ಈ ಮೇಳದ ಮೊದಲ ದಿನದಂದು ಅನೇಕ ಭಕ್ತರು ಗಂಗಾ, ಯಮನಾ ಮತ್ತು ಸರಸ್ವತಿ ಸಂಗಮದಲ್ಲಿ ಮಿಂದೆದ್ದರು.
ಈ ಮೇಳದಲ್ಲಿ 40 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡುವ ನಿರೀಕ್ಷೆ ಇದೆ.
ಇಂದು ಶಾಕಾಂಬರಿ ಹುಣ್ಣಿಮೆ ಮತ್ತು ಚಂದ್ರಗ್ರಹಣದ ನಿಮಿತ್ತ ಕೂಡ ಅನೇಕ ಭಕ್ತರು ಪವಿತ್ರ ಸ್ನಾನ ಮಾಡಲಿದ್ದಾರೆ.
ಭಕ್ತರು ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುತ್ತಾ ಉಪವಾಸ ಸಹಿತ ಕಠಿಣ ಜೀವನ ನಡೆಸುತ್ತಾರೆ.
660 ಎಕರೆ ವಿಸ್ತೀರ್ಣದಲ್ಲಿ ನಡೆಯುವ ಮೇಳಕ್ಕೆ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.