ಹಾರೂಗೇರಿಯಲ್ಲಿ ಹಡಪದ ಸಮಾಜದ ಸಮುದಾಯ ಭವನ ಕಾಮಗಾರಿಗೆ ಚಾಲನೆ

ಹಾರೂಗೇರಿಯಲ್ಲಿ ಹಡಪದ ಸಮಾಜದ ಸಮುದಾಯ ಭವನ ಕಾಮಗಾರಿಗೆ ಚಾಲನೆ Work on the community hall of the Hadapada community in Harugeri has begun.

ಲೋಕದರ್ಶನ ವರದಿ 

ಹಾರೂಗೇರಿ 16: ಸಂಸತ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 9.98 ಲಕ್ಷರೂ. ಮೊತ್ತದ ಹಡಪದ ಸಮಾಜದ ಸಮುದಾಯ ಭವನ ಕಾಮಗಾರಿಗೆ ಶ್ರೀ ವಾಲ್ಮೀಕಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಮಣ್ಣ ಗಸ್ತಿ ಸೋಮವಾರ ಗುದ್ದಲಿ ಪೂಜೆ ನೇರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ರಾಮಣ್ಣ ಗಸ್ತಿ ಅವರು ಹಡಪದ ಸಮಾಜ ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಬೇಕೆಂದು ಹೇಳಿದರು. 

  ಗೋಕಾಕದ ಹಿರಿಯ ರಾಜಕೀಯ ಮುಖಂಡ ಮಹಾಲಿಂಗ ಸಾಯಣ್ಣವರ ಪೂಜೆ ಸಲ್ಲಿಸಿದರು. ಪುರಸಭೆ ಸದಸ್ಯ ಹಾಗೂ ಶ್ರೀ ವೃಷಭೇಂದ್ರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗೀರೀಶ ದರೂರ, ರೂಪಾ ಕರೋಶಿ, ಗಣ್ಯರಾದ ಪ್ರಧಾನಿ ದರೂರ, ಬಿ.ಬಿ.ಮುಗಳಿಹಾಳ, ಅಪ್ಪಾಸಾಬ ಸರಿಕರ, ಎ.ಬಿ.ಅರಕೇರಿ, ಅಜೀತ ಕೊತ್ತಲಗಿ, ಮಲ್ಲಪ್ಪ ಗಸ್ತಿ, ಪ್ರಕಾಶ ಕುರಿ, ಪ್ರಕಾಶ ಘೋರೆ​‍್ಡ, ಪ್ರಕಾಶ ಪಾಗೆ, ಮಹಮ್ಮದ ಜಮಾದಾರ, ಮಹಾದೇವ ನಾವಿ, ರವಿ ಕರೋಶಿ, ಶಿವಪ್ಪ ತೆಗ್ಗಿ, ಆಶಾಕುಮಾರಿ ನಾವಿ, ವಿಠ್ಠಲ ನಾವಿ, ಪ್ರಭು ನಾವಿ, ಕುಮಾರ ನಾವಿ, ಭೀಮಪ್ಪ ನಾವಿ, ಮುತ್ತಪ್ಪ ನಾವಿ, ಪುಂಡಲೀಕ ನಾವಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.