ಸಂಸ್ಕೃತಿಯನ್ನ ಉಳಿಸಲು ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೋಳ್ಳಿ : ಶಕುಂತಲಾ ದುಂಡಿಗೌಡ್ರ

Participate in Sharan Culture Festival to save culture: Shakuntala Dundigowdra

ಸಂಸ್ಕೃತಿಯನ್ನ ಉಳಿಸಲು ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೋಳ್ಳಿ : ಶಕುಂತಲಾ ದುಂಡಿಗೌಡ್ರ 

ಶಿಗ್ಗಾವಿ 11 : ನಮ್ಮ ಸಂಸ್ಕೃತಿಯನ್ನ ಮುಂದಿನ ಪೀಳಿಗೆಗೆ ಉಳಿಸಲು ಮಕ್ಕಳನ್ನ ಇಂತಹ ಶರಣ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೋಳ್ಳುವಂತೆ ಮಾಡಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗದ ನಿರ್ದೇಶಕಿ ಶಂಕುಂತಲಾ ದುಂಡಿಗೌಡ್ರ ಹೇಳಿದರು. 

   ಪಟ್ಟಣದ ವಿರಕ್ತಮಠದಲ್ಲಿ 32ನೇ ಶರಣ ಸಂಸ್ಕೃತಿ ಉತ್ಸವ-2025 ರ ಅಂಗವಾಗಿ ನಡೆದ ಧರ್ಮಸಭೆ ಹಾಗೂ ಮಹಿಳಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರುಇಂದಿನ ಮಕ್ಕಳಲ್ಲಿ ಸಂಸ್ಕಾರಯುತ ಶಿಕ್ಷಣ ಕಡಿಮೆ ಆಗುತ್ತಿದೆ ಹಾಗೂ ಹೆಣ್ಣಿಗೆ ಸಮಾನತೆ ಬೇಕು ಎಂಬುದು ಇಂದಿನ ಹೋರಾಟವಲ್ಲ 12 ನೇ ಶತಮಾನದಲ್ಲಿ ಬಸವಣ್ಣನವರು ಅಂದೇ ಮಹಿಳೆಯರಿಗೆ ಕಾಯಕದ ಜೊತೆಗೆ ಮಹಿಳೆಯರಿಗೆ ಸಮಾನತೆಯ ಕುರಿತು ಹೆಚ್ಚು ಪ್ರಾಧಾನ್ಯತೆ ನೀಡಿದ್ದರು, ನಮ್ಮ ನಮ್ಮ ಕಾಯಕವನ್ನ ನಾವು ಪೂಜಿಸಬೇಕು ಎಂಬುದು ಬಸವಣ್ಣನವರ ಹಾಗೂ ಶರಣರ ವಚನಗಳ ಮೂಲಕ ತಿಳಿಯಬಹುದಾಗಿದೆ ಎಂದರು. 

  ಜನಪ್ರೀಯ ತಜ್ಞ ವೈದ್ಯೆ ರಾಜೇಶ್ವರಿ ಚನ್ನಗೌಡ್ರ ಮಾತನಾಡಿ ಅಂದೇ 12 ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗೆ ಸಮಾನತೆಯನ್ನ ತಮ್ಮ ಅನುಭವ ಮಂಟಪದಲ್ಲಿ ನೀಡಿದ್ದರು, ಮಹಿಳೆಯರಿಗಾಗಿಯೇ ಮಹಿಳಾ ದಿನಾಚರಣೆಯ ಪ್ರಯುಕ್ತ ವೇದಿಕೆ ಕಲ್ಪಿಸಿಕೊಡುವ ಕಾರ್ಯವನ್ನ ನೀಡುತ್ತಿದ್ದಾರೆ ಇದು ಮಹಿಳೆಯರಿಗೆ ಸಮಾನತೆ ಕಲ್ಪಿಸಿರುವುದಕ್ಕೆ ಸಾಕ್ಷಿಯಾಗಿದೆ. ಮಹಿಳೆಯರಿಗೆ ಭಾರತ ದೇಶದಲ್ಲಿ ಪ್ರಧಾನ ಸ್ಥಾನ ನೀಡುವ ಮೂಲಕ ಪೂಜ್ಯನೀಯ ಸ್ಥಾನವನ್ನೂ ಸ್ತ್ರೀಗೆ ನೀಡಲಾಗಿದೆ, ಮಹಿಳೆಯರು ಸ್ಥಾನಮಾನ ಕೇಳುತ್ತಿದ್ದೇವೆ ಎಂದರೆ ಪುರುಷರನ್ನ ದೂಷಿಸುತ್ತಿದ್ದಾರೆ ಎಂದರ್ಥವಲ್ಲ. ಹೆಣ್ಣು ಮತ್ತು ಗಂಡಿಗೆ ಸಮಾನತೆ ಬೇಕು ಎಂದರ್ಥ ಎಂದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಭಾರತಿ ಅಕ್ಕನವರು ಮಾತನಾಡಿ ಮಹಿಳೆಯರಿಗೆ ಪ್ರಾಧಾನ್ಯತೆ ಹೆಚ್ಚಿದೆ, ಹೆಣ್ಣು ಹುಟ್ಟಿದರೆ ಹುಣ್ಣು ಎಂಬ ಕಾಲ ಒಂದಿತ್ತು, ಈಗ ಮಹಿಳೆಯರಿಗೆ ಡಿಮ್ಯಾಂಡೊ ಡಿಮ್ಯಾಂಡು ಬಂದು ಬಿಟ್ಟಿದೆ, ಮಹಿಳೆಯರಿಗೆ ಪ್ರಾಧಾನ್ಯತೆ ಹೆಚ್ಚಿದೆ ಎಂದು ಎಂದಿಗೂ ಬೀಗುವುದು ಬೇಡ, ಪ್ರಾಮಾಣಿಕವಾಗಿ ಇರೋಣ, ರೀಲ್ಸ್‌ ಗಳನ್ನ ಮಹಿಳೆಯರು ಮಾಡಬೇಡಿ ಎಂದು ಕಿವಿ ಮಾತು ಹೇಳಿದ ಅವರು, ಹೆಣ್ಣು ಎಂದಿಗೂ ತವರು ಮನೆಯನ್ನ ದೂರ ಮಾಡಿಕೊಳ್ಳಬೇಡಿ, ಆಸರಕೆ, ಬೇಸರಕೆ ತವರೇ ಸಂಪತ್ತು ಎಂಬುದನ್ನ ಮರೆಯಬೇಡಿ ಎಂದರು. 

   ಸೀತಾಗಿರಿ ಎ.ಸಿ.ವಾಲಿ ಮಹಾರಾಜರು ಪ್ರವಚನ ನೀಡಿದರು. ವಿರಕ್ತಮಠದ ಸಂಗನಬಸವ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಸಂಗೀತ ಸೇವೆ ಗದಿಗೆಯ್ಯ ಹಿರೇಮಠ, ತಬಲಾ ಬಸವರಾಜ ಹೂಗಾರ, ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ಮತ್ತು ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.  ಶ್ರೀಕಾಂತ ಪೂಜಾರ, ಬಸವಂತಪ್ಪ ಗಾಣಿಗೇರ, ಚನ್ನಬಸಪ್ಪ ಮತ್ತಿಗಟ್ಟಿ, ಲಲಿತಾ ಚವ್ಹಾಣ, ಚನ್ನಬಸಪ್ಪ ಯಲಿಗಾರ, ಶಿವಾನಂದ ಕುನ್ನೂರ, ಉಮಾ ಯಲಿಗಾರ ಸೇರಿದಂತೆ ದೇವಸ್ಥಾನದ ಸೇವಾ ಸಮಿತಿ ಸದಸ್ಯರು ಇದ್ದರು. ವಚನ ನಿಧಿ ವನಿತಾ ಸಂಘದ ಸದಸ್ಯರಿಂದ ವಚನ ರೂಪಕಗಳು ಎಲ್ಲರನ್ನು ಮನರಂಜಿಸಿದವು.