65ನೇ ಹುಟ್ಟು ಹಬ್ಬ ಆಚರಿಸಿಕೊಂಡ ಆನಂದ ಮಹಾರಾಜ ಗೋಸಾವಿ
ಯಮಕನಮರಡಿ : ಸಮೀಪದ ಹತ್ತರಗಿ ಹರಿಮಂದಿರದ ಪೂಜ್ಯರಾದ ಡಾ. ಆನಂದ ಮಹಾರಾಜ ಗೋಸಾವಿರವರ 65ನೇ ಹುಟ್ಟು ಹಬ್ಬವನ್ನು ದಿ.10 ರಂದು ಶ್ರೀಮಠದಲ್ಲಿ ಸ್ಥಳಿಯ ಶೂನ್ಯಸಂಪಾದನಾ ಹುಣಸಿಕೊಳ್ಳಮಠದ ಪೂಜ್ಯರಾದ ಸಿದ್ದಬಸವ ದೇವರು ಯಮಕನಮರಡಿ ಇವರು ಆಗಮಿಸಿ ಆನಂದ ಮಹಾರಾಜ ಗೋಸಾವಿ ಅವರಿಗೆ ಶಾಲು ಹೊದಿಸಿ ಗೌರವಿಸಿ ಬಸವೇಶ್ವರ ಅಲ್ಲಮಪ್ರಭು, ಭಾವಚಿತ್ರದ ನೆನಪಿನ ಕಾಣಿಕೆಯನ್ನು ಸಲ್ಲಿಸಿ ತಮ್ಮ ತಮ್ಮ ಶುಭಕುಶಲೋಪರಿಯನ್ನು ಹಂಚಿಕೊಂಡರು. ಈ ಸಂದರ್ಬದಲ್ಲಿ ರೋಹಿತ ತೇಲಿ ಮತ್ತು ಮಿತ್ರರು ಹಾಗೂ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.