ಮುಸ್ಲಿಮರನ್ನು ಅವಮಾನಿಸಿದ ಆರೋಪ: ದಳಪತಿ ವಿಜಯ್ ವಿರುದ್ಧ ದೂರು

Complaint filed against Dalapathy Vijay for insulting Muslims

ಚೆನ್ನೈ 11:  ಇತ್ತೀಚೆಗೆ ದಳಪತಿ ವಿಜಯ್ ರಾಯಪೆಟ್ಟಾ ವೈಎಂಸಿಎ ಕ್ರೀಡಾಂಗಣದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು. ಇಫ್ತಾರ್‌ ಕೂಟದಲ್ಲಿ ವಿಜಯ್ ಮುಸ್ಲಿಮರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಸುನ್ನತ್ ಜಮಾತ್ ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದೆ.

ವಿಜಯ್ ತಮಿಳಗ ವೆಟ್ರಿ ಕಳಗಂ (TVK) ಪಕ್ಷವನ್ನು ಕಟ್ಟಿಕೊಂಡು ಮುಂದಿನ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ಟೆಂಪಲ್‌, ಚರ್ಚ್‌, ಮಸೀದಿ ಹೀಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.

ಇತ್ತೀಚೆಗಷ್ಟೇ ವಿಜಯ್‌ ಚೆನ್ನೈನಲ್ಲಿ ಆಯೋಜಿಸಿದ್ದರು. ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ವಿಜಯ್‌ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ, ಮುಸ್ಲಿಮರ ಜತೆ ಕಾಣಿಸಿಕೊಂಡಿದ್ದರು. ಅವರೊಂದಿಗೆ ನಮಾಜ್‌ ಕೂಡ ಮಾಡಿದ್ದರು. 

ವಿಜಯ್ ಆಯೋಜಿಸಿದ್ದ ಇಫ್ತಾರ್ ಕಾರ್ಯಕ್ರಮದಲ್ಲಿ ಮುಸ್ಲಿಮರನ್ನು ಅವಮಾನಿಸಲಾಯಿತು. ಉಪವಾಸ ಅಥವಾ ಇಫ್ತಾರ್‌ಗೆ ಯಾವುದೇ ಸಂಬಂಧವಿಲ್ಲದ ಕುಡುಕರು ಮತ್ತು ರೌಡಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಇದು ಮುಸ್ಲಿಮರನ್ನು ಅವಮಾನಿಸಿದಂತಿದೆ. ವ್ಯವಸ್ಥೆ ಸರಿಯಾಗಿ ಮಾಡಿಲ್ಲ. ವಿಜಯ್ ಅವರ ವಿದೇಶಿ ಗಾರ್ಡ್ಸ್ ಜನರನ್ನು ಅಗೌರವಿಸಿದರು. ಅವರನ್ನು ಹಸುಗಳಂತೆ ನಡೆಸಿಕೊಂಡರು. ಇದು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ವಿಜಯ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಾವು ಪ್ರಚಾರಕ್ಕಾಗಿ ದೂರು ದಾಖಲಿಸಿಲ್ಲ ಎಂದು ತಮಿಳುನಾಡು ಸುನ್ನತ್ ಜಮಾತ್ ಕೋಶಾಧಿಕಾರಿ ಸೈಯದ್ ಕೌಸ್ ಹೇಳಿದ್ದಾರೆ.