ಜೋಳ ಖರೀದಿ ಕೇಂದ್ರ ಆರಂಭ: ಜೆಟಿಪಿ

Corn purchasing center opens: JTP

ಜೋಳ ಖರೀದಿ ಕೇಂದ್ರ ಆರಂಭ: ಜೆಟಿಪಿ 

ಬೀಳಗಿ, 11;  ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರಗಳನ್ನು ತ್ವರಿತಗತಿಯಲ್ಲಿ ತೆರೆದು ರೈತರಿಗೆ ಅನುಕೂಲ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರಿಗೆ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು, ಶಾಸಕ ಜೆ. ಟಿ. ಪಾಟೀಲ ಸೂಚಿಸಿರುವರು. ಮಾರುಕಟ್ಟೆಯಲ್ಲಿ ರೈತರು ಬೆಳೆದ ಜೋಳಕ್ಕೆ ಸರಿಯಾದ ಬೆಲೆ ದೊರೆಯುತ್ತಿಲ್ಲ. ಕೂಡಲೇ ಖರೀದಿ ಕೇಂದ್ರ ತೆರೆಯಬೇಕು ಶಾಸಕರು ತಿಳಿಸಿದಾಗ, ಬರುವ ಮೂರ್ನಾಲ್ಕು ದಿನಗಳಲ್ಲಿ ಬಿಳಿ ಜೋಳ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ಜಿಲ್ಲಾಧಿಕಾರಿ ಜಾನಕಿ ಕೆ. ಎಂ. ಭರವಸೆ ನೀಡಿದ್ದಾರೆಂದು ಶಾಸಕರು ತಿಳಿಸಿದ್ದಾರೆ.