ಮಂಡ್ಯ, ಜೂ 12ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಆರ್.ಶಂಕರ್ ಅವರಿಗೆ ಟಿಕೆಟ್ ನೀಡುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.ಇದರಿಂದ ಟಿಕೆಟ್ ಆಕಾಂಕ್ಷಿಗಳಾದ ವಿಶ್ವನಾಥ್, ಎಂಟಿಬಿ ನಾಗರಾಜ್ ಆಸೆಗೆ ತಣ್ಣೀರು ಎರಚಿದಂತಾಗಿದೆ. ಮಂಡ್ಯದಲ್ಲಿ ಮಾತನಾಡಿದ ಡಿಸಿಎಂ, ವಿಧಾನಸಭಾ ಚುನಾವಣೆಗೆ ನಿಲ್ಲದವರಿಗೆ ಪರಿಷತ್ ಟಿಕೆಟ್ ಕೊಡುವುದಾಗಿ ಹೇಳಲಾಗಿತ್ತು. ಆರ್.ಶಂಕರ್ ಚುನಾವಣೆಗೆ ನಿಂತಿರಲಿಲ್ಲ.
ಹೀಗಾಗಿ ಅವರಿಗೆ ಪರಿಷತ್ ಟಿಕೆಟ್ ಕೊಡ್ತೀವಿ ಎಂದರು.ಉಳಿದಂತೆ ಟಿಕೆಟ್ ಪಡೆಯಲು ಹೆಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಸಿ.ಪಿ.ಯೋಗೇಶ್ವರ್ ಸೇರಿ ಹಲವರ ಅಪೇಕ್ಷೆ ಇದೆ. ಈ ಕುರಿತು ಪಕ್ಷದ ವರಿಷ್ಟರೆಲ್ಲರೂ ಸೇರಿ ತೀರ್ಮಾನ ಮಾಡ್ತಾರೆ.ಪಕ್ಷಕ್ಕೆ ಕರೆತರುವಾಗ ಯಾರಿಗೂ ಪರಿಷತ್ ಟಿಕೆಟ್ ನೀಡುವ ಭರವಸೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಚುನಾಣೆಯಲ್ಲಿ ಸೋತಿರುವವರು ವಿಧಾನಪರಿಷತ್ ಸದಸ್ಯರಾಗಲು ಅವಕಾಶ ಕೋರುತ್ತಿದ್ದಾರೆ. ಅವರ ಒತ್ತಾಯದ ಕುರಿತು ಪಕ್ಷ ನಿರ್ಧರಿಸುತ್ತದೆ ಎಂದರು.ಯೋಗೇಶ್ವರ್ ಮುನಿಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಮುನಿಸು ಇಲ್ಲ. ಅವರು ಚನ್ನಪಟ್ಟಣದಲ್ಲಿ ಚುನಾವಣೆ ಕಳೆದುಕೊಂಡರು. ಬಳಿಕ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರದ್ದೂ ಕೂಡ ಪರಿಷತ್ ಸದಸ್ಯರಾಗುವ ಕೋರಿಕೆ ಇದೆ ಎಂದರು. ಹೆಚ್ಡಿಡಿಗೆ ನಮ್ಮ ಬೆಂಬಲವಿಲ್ಲವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಅವರಿಗೆ ನಮ್ಮ ಪಕ್ಷದ ಬೆಂಬಲ ಕೊಡುವ ಪ್ರಶ್ನೆ ಉದ್ಭವ ಆಗಲ್ಲ.ನಮ್ಮ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳಿದ್ದಾರೆ. ದೇವೇಗೌಡರು ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ.ಅವರಿಗೆ ನಮ್ಮ ಮತದ ಅವಶ್ಯಕತೆ ಇಲ್ಲ ಎಂದರು.