ಕಾಗವಾಡ ಹೊಟೇಲ್‌ಗಳ ಮೇಲೆ ತಹಶೀಲ್ದಾರ ದಾಳಿ 22 ಗೃಹೋಪಯೋಗಿ ಸಿಲೆಂಡರ್ ವಶ

Tahsildar raided Kagwad hotels, seized 22 household cylinders

ಕಾಗವಾಡ ಹೊಟೇಲ್‌ಗಳ ಮೇಲೆ ತಹಶೀಲ್ದಾರ ದಾಳಿ 22 ಗೃಹೋಪಯೋಗಿ ಸಿಲೆಂಡರ್ ವಶಕ್ಕೆ 

ಕಾಗವಾಡ 16 : ಪಟ್ಟಣದಲ್ಲಿ ಕೆಲ ಹೋಟೇಲಗಳಲ್ಲಿ ಗೃಹ ಬಳಿಕೆಯ ಗ್ಯಾಸ್ ಸಿಲಿಂಡರಗಳನ್ನು ವಾಣಿಜ್ಯ ಉಪಯೋಗಕ್ಕಾಗಿ ಬಳಸುತ್ತಿದ್ದ ಕುರಿತು ಕಂಡುಬಂದ ಹಿನ್ನಲೆಯಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ ನೇತೃತ್ವದಲ್ಲಿ ಆಹಾರ ಇಲಾಖೆ ಅಧಿಕಾರಿ ಸಂಗಮೇಶ ಬಾಗೇವಾಡಿ ದಾಳಿ ನಡೆಸಿ, 22 ಸಿಲಿಂಡರಗಳನ್ನು ವಶಕ್ಕೆ ಪಡೆದುಕೊಂಡು ಕ್ರಮ ಜರಗಿಸಿದ್ದಾರೆ. ಗುರುವಾರ ದಿ. 16 ರಂದು ಪಟ್ಟಣದ ಮುಖ್ಯ ಮಾರ್ಗದಲ್ಲಿರುವ ಕೆಲ ಹೋಟೆಲಗಳಲ್ಲಿ ಗೃಹ ಉಪಯೋಗ ಸಿಲಿಂಡರಗಳು ಬಳಿಕೆಯಾಗುತ್ತಿರುವ ಕುರಿತು ತಹಶೀಲ್ದಾರ ಅವರ ಗಮನಕ್ಕೆ ಬಂದಾಗ ಆಹಾರ ಇಲಾಖೆಯ ಸಂಗಮೇಶ ಬಾಗೇವಾಡಿ, ಇವರ ನೇತೃತ್ವದಲ್ಲಿ ಹೋಟೆಲಗಳ ಮೇಲೆ ದಾಳಿ ನಡೆಸಿ, 22 ಸಿಲಿಂಡರಗಳು ವಶಕ್ಕೆ ಪಡೆದುಕೊಂಡಿದ್ದಾರೆ.  ಈ ವೇಳೆ ತಹಶೀಲ್ದಾರ ರಾಜೇಶ ಬುರ್ಲಿ ಮಾತನಾಡಿ, ಗೃಹ ಉಪಯೋಗಿ ಸಿಲಿಂಡರಗಳನ್ನು ವಾಣಿಜ್ಯ ಬಳಿಕೆಗೆ ಬಳಸಿದ್ದಲ್ಲಿ ಅಂತವರ ಮೇಲೆ ಸನ್ 2000ರ ಆದೇಶ ಪ್ರಕಾರ ಕಲಂ ನಂ. 3(1)(ಸಿ) ನಿಯಮಗಳು ಉಲ್ಲಂಘನೆಯ ಪ್ರಕಾರ ಕ್ರಮ ಜರುಗಿಸಿ, ಚಿಕ್ಕೋಡಿ ಉಪವಿಭಾಗಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತಿದೆ. ತಪ್ಪಿತ್ತಸ್ಥರಿಗೆ ಸುಮಾರು ಹತ್ತು ಸಾವಿರ ರೂಪಾಯಿಗಳ ಡಂದ ವಿಧಿಸಲಾಗುತ್ತಿದೆ ಎಂದು ತಿಳಿಸಿದ ಅವರು, ತಾಲೂಕಿನ ಉನ್ನುಳಿದ ಹಳ್ಳಿಗಳಲ್ಲಿ ಇದೇ ರೀತಿ ಗೃಹ ಉಪಯೋಗಿ ಸಿಲಿಂಡರಗಳು ಬಳಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದು, ಸ್ಥಳೀಯ ಗ್ರಾಮ ಆಡಳಿತಾಧಿಕಾರಿಗಳು ಇಂತವರ ಮೇಲೆ ಕ್ರಮ ಜರುಗಿಸಲು ಆದೇಶ ನೀಡಲಾಗಿದೆ ಎಂದರು.  ಈ ಸಮಯದಲ್ಲಿ ಆಹಾರ ಇಲಾಖೆಯ ಅಧಿಕಾರಿ ಸಂಗಮೇಶ ಬಾಗೇವಾಡಿ, ಗ್ರಾಮ ಆಡಳಿತಾಧಿಕಾರಿ ಕೆ.ಪಿ. ಬಡಿಗೇರ, ಇಂಡಿಯನ ಆಯಿಲ್ ಸಂಸ್ಥೆಯ ಸಿಬ್ಬಂದಿ ಸುನೀಲ ಮಾಂಜರೆ ಉಪಸ್ಥಿತರಿದ್ದರು.