18 ರಿಂದ ಶ್ರೀ ಆಂಜನೇಯ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ

Prana pratishtapana program of Sri Anjaneya Murthy from 18

ಮುದ್ದೇಬಿಹಾಳ 16: ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿ ಇದೇ 18 ಶನಿವಾರದಿಂದ  20 ಸೋಮವಾರದವರೆ ಮೂರು ದಿನಗಳ ಕಾಲ ಶ್ರೀ ಶಿವ ಚಿದಂಬರೇಶ್ವರ, ಶ್ರೀ ಗಜಾನನ, ಶ್ರೀ ಆಂಜನೇಯ ದೇವ ಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಇದೇ 18 ಶನಿವಾರದಿಂದ  20 ಸೋಮವಾರದವರೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ ಬಿ ಪಿ ಕುಲಕರ್ಣಿ ಹೇಳಿದರು. 

ಪಟ್ಟಣದ ಮಾರುತಿ ನಗರ ಬಡಾವಣೆಯಲ್ಲಿನ ಶಿವ ಚಿದಂಬರೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೇದ ಹಲವು ವರ್ಷಗಳಿಂದ ಈ ದೇವಸ್ಥಾನ ಉದ್ಘಾಟನೆ ಮಾಡಬೇಕಾಗಿತ್ತು ಆದರೇ ಕಾರಣಾಂತರದಿಂದ ಸಾಧ್ಯವಾಗಿಲ್ಲ ಇದೀಗ ಸಮಾಜ ಬಾಂದವರು ಒಗ್ಗಟ್ಟಿನಿಂದ ಉದ್ಘಾಟನೆಗೊಳ್ಳುತ್ತಿದೆ ಎಂದರೆ ತುಂಬಾ ಸಂತಸವಾಗಿದೆ. ಈ ವೇಳೆ ಹುಣಸಿಹೊಳೆ  ಕಣ್ವಮಠದ ಪೀಠಾಧಿಪತಿ 1008 ಶ್ರೀ ವ ಇದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರು, ಮುರುಗೋಡದ ಶ್ರೀ ದೀವಾಕರ ದೀಕ್ಷೀತ, ಶಂಕರ ದೀಕ್ಷೀತ ಇನಾಮದಾರ, ಲೋಕಾಪುರದ ಜ್ಞಾನೇಶ್ವರ ಮಠದ ಶ್ರೀ ಬ್ರಹ್ಮಮಾನಂದ ಮಹಾಸ್ವಾಮಿಗಳು, ಅಗಡಿ ಆನಂದವನ ಕ್ಷೇತ್ರದ ಶ್ರೀ ಗುರುದತ್ತ ಮಹಾಸ್ವಾಮಿಗಳು,ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ), ಮಾಆಜಿ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸೇರಿದಂತೆ ಅನೇಕ ನಾಯಕರು ರಾಜಕೀಯ ಮುಖಂಡರು ಬಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ಈ ವೇಳೆ  ಮುಖಂಡರಾದ ಪಿ ಎನ್ ಕುಲಕರ್ಣಿ, ಬಾಪುರಾಯ ದೇಸಾಯಿ, ಗುಂಡಭಟ್ಟ  ಬೋಲಿ, ಡಿ ಜಿ ಕುಲಕರ್ಣಿ, ಸವರ್ವೋತ್ತಮ ದೇಶಪಾಂಡೆ, ಶೇಷಗೀರಿರಾವ ದೇಸಾಯಿ, ವಿನಾಯಯಕರಾಮ ಕುಲಕರ್ಣಿ, ಚಂದ್ರಕಾಂತ ಕುಲಕರ್ಣಿ, ಪ್ರಧೀಪ ಕುಲಕರ್ಣಿ, ಅನೀಲ ಕುಲಕರ್ಣಿ, ರಮಮೇಶ ಜೋಷಿ, ಎಲ್ ಎಸ್ ದೇಶಪಾಂಡೆ, ಪ್ರಮೋದರಾವ ಕುಲಕರ್ಣಿ,ಪುಟ್ಟು ಕುಲಕರ್ಣಿ, ಗುರುರಾಜ ಕುಲಕರ್ಣಿ, ಆನಂದ ಜಂಬ ಗಿ, ಶ್ರೀನಿವಾಸ ಸಾಲೋಟಗಿ ಸೇರಿದಂತೆ ಹಲವರು ಇದ್ದರು..