ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಪಾಲಕರ ಸಭೆ

ರಾಯಬಾಗ 12: ಪಾಲಕರು ಮಾಡುವಂತಹ ಕೆಲಸಗಳನ್ನು ಮಕ್ಕಳ ಮಾಡುವಂತೆ ಪಾಲಕರು ಒತ್ತಡ ಹಾಕಬಾರದು. ಮಕ್ಕಳ ಕೈಯಲ್ಲಿ ಮೊಬೈಲ್ ಸಿಗದಂತೆ ಮಾಡಿ, ವಿದ್ಯಾಭ್ಯಾಸದ ಕಡೆಗೆ ಮಕ್ಕಳು ಗಮನಕೊಡುವಂತೆ ನೋಡಿಕೊಳ್ಳಬೇಕೆಂದು ನಿಲಜಿ ಪ್ರೌಢ ಶಾಲೆ (ಆರ್ಎಮ್ಎಸ್ಎ) ಮುಖ್ಯೋಪಾಧ್ಯಾಯ ಎಮ್.ಬಿ.ಪಾಟೀಲ ಪಾಕರಿಗೆ ಕರೆ ನೀಡಿದರು. 

ಮಂಗಳವಾರ ತಾಲೂಕಿನ ನಿಲಜಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ (ಆರ್ಎಮ್ಎಸ್ಎ) ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ವಿದ್ಯಾಥರ್ಿಗಳ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು. 

ಸಭೆಯಲ್ಲಿ ಶಿಕ್ಷಕರಾದ ವಿ.ಬಿ.ಮಸಾಳೆ, ಆರತಿ ಮೊರೆ, ಎಮ್.ಎಸ್.ಮಗದುಮ್ಮ, ಸುರೇಶ ಬರಮಾದೆ, ಎಸ್.ಎಸ್.ಮಗದುಮ್ಮ, ಎಸ್ಡಿಎಮ್ಸಿ ಸದಸ್ಯ ಅಜೀತ ಕಾಂಬಳೆ, ತುಕಾರಾಮ ಹಸರೆ, ಸಹದೇವ ಕಾಂಬಳೆ, ನಿಲಪ್ಪಾ ಕಾಂಬಳೆ, ಮಾರತಿ ನಾಗರಾಳೆ ಸೇರಿದಂತೆ ವಿದ್ಯಾಥರ್ಿಗಳು ಮತ್ತು ಪಾಲಕರು ಇದ್ದರು.