ಪರಭಾಷೆಯೆದುರು ಕನ್ನಡ ಚಿತ್ರವೇನೂ ಕಮ್ಮಿಯಿಲ್ಲ: ಮುನಿರತ್ನ

ಬೆಂಗಳೂರು, ಆ 05  ಮಹಾಭಾರತ ನಮ್ಮ ದೇಶದ ಮಹಾಕಾವ್ಯಗಳಲ್ಲೊಂದು ಇದರಲ್ಲಿ ಬರುವ ಪ್ರತಿಯೊಂದು ಪಾತ್ರವೂ ಒಂದು ಬೃಹತ್ ಕಥೆಯಾಗುವಷ್ಟು ಗಟ್ಟಿ ವಸ್ತುವಿಷಯಗಳನ್ನು ಒಳಗೊಂಡಿದೆ  ಈಗಾಗಲೆ ವಿವಿಧ ಬಗೆಯ ದೃಷ್ಟಿಕೋನದಲ್ಲಿ ಅನೇಕ ಭಾಷೆಗಳಲ್ಲಿ, ಹಲವು ಚಿತ್ರಗಳು ತೆರೆಕಂಡಿವೆ  ಆದರೆ 'ಕುರುಕ್ಷೇತ್ರ' ದಂತಹ ಚಿತ್ರ ನಿರ್ಮಾಣ ಸುಲಭದ ಮಾತಲ್ಲ  ಕೋಟಿಗಟ್ಟಲೆ ಖಚರ್ಾದರೂ ಧೃತಿಗೆಡದೆ ಚಿತ್ರ ನಿರ್ಮಿಸಿ ಆಗಸ್ಟ 9ರಂದು ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧರಾಗಿದ್ದಾರೆ ರಾಜಕಾರಣಿ, ನಿರ್ಮಾಪಕ ಮುನಿರತ್ನ 

 ನಾಗಣ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'ಕುರುಕ್ಷೇತ್ರ' ಕೆಲ ಕಾರಣಗಳಿಂದ  ಈ ಹಿಂದೆ ಪ್ರಕಟಿಸಿದ್ದ ದಿನಾಂಕದಂದು ತೆರೆಕಾಣಲಿಲ್ಲ  ಇದೀಗ ಕೊನೆಗೂ ಬಿಡುಗಡೆಗೆ ಸಿದ್ಧವಾಗಿದೆ   ಪರಭಾಷಾ ಚಿತ್ರಗಳೆದು ಕನ್ನಡ ಚಿತ್ರರಂಗವೇನೂ ಕಡಿಮೆಯಿಲ್ಲ ಹಾಗೂ ನಾವು ಅಳಿದರೂ ನಮ್ಮ ಹೆಜ್ಜೆ ಗುರುತು ಅಳಿಯಬಾರದು ಎಂಬ ಉದ್ದೇಶದಿಂದ ಎಷ್ಟೇ ಖರ್ಚಾದರೂ ಹಿಂದೆ ಮುಂದೆ ಯೋಚಿಸದೆ ಚಿತ್ರ ನಿರ್ಮಾಸಿದ್ದೇನೆ ಎಂದು ಮುನಿರತ್ನ ತಿಳಿಸಿದರು 

ಸಾಮಾಜಿಕ ಚಿತ್ರಗಳಿಗೂ, ಪೌರಾಣಿಕ ಚಿತ್ರಗಳಿಗೂ ಸಾಕಷ್ಟು ವ್ಯತ್ಯಾಸವಿದೆ  'ಕುರುಕ್ಷೇತ್ರ' 2 ಡಿ ಹಾಗೂ 3ಡಿ ಆಗಿರುವುದರಿಂದ ಒಬ್ಬೊಬ್ಬ ಕಲಾವಿದೂರ ಎರಡೆರಡು ಸಲ ಅಭಿನಯಿಸಿದ್ದಾರೆ ಹಾಗೂ ವಾಯ್ಸ್ ಡಬ್ಬಿಂಗ್ ಮಾಡಿದ್ದಾರೆ  ರೆಬೆಲ್ ಸ್ಟಾರ್ ಅಂಬರೀಷ್ ಅವರ ಕೊನೆಯ ಚಿತ್ರ ಎಂಬ ಕಾರಣಕ್ಕೂ ಇದಕ್ಕೆ ಭಾರಿ ಮಹತ್ವವಿದೆ   ಅನಾರೋಗ್ಯದ ನಡುವೆಯೂ ಅವರು ಭೀಷ್ಮನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು 

ಕುಂತಿಯಾಗಿ ಭಾರತಿ ವಿಷ್ಣುವರ್ಧನ್, ಕೃಷ್ಣನಾಗಿ ರವಿಚಂದ್ರನ್ ಸೇರಿದಂತೆ ಪಾತ್ರಗಳ ಆಯ್ಕೆ ವಿಷಯದಲ್ಲಿಯೂ ಸಾಕಷ್ಟು ಚರ್ಚಿಸಿ, ಸೂಕ್ತವಾದವರನ್ನೇ ಆಯ್ಕೆ ಮಾಡಲಾಗಿದೆ ಅಂತೆಯೇ ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದರು.