ಪಾಕಿಸ್ತಾನದ ಸಂಪರ್ಕ : ನೌಕಾಪಡೆಯ 7 ಸಿಬ್ಬಂದಿ ವಶಕ್ಕೆ

ವಿಜಯವಾಡ, ಡಿ 20 :        ಆಂಧ್ರಪ್ರದೇಶದ ಗುಪ್ತಚರ ಇಲಾಖೆಯು ಕೇಂದ್ರ ಗುಪ್ತಚರ ಸಂಸ್ಥೆಗಳು ಮತ್ತು ನೌಕಾ ಗುಪ್ತಚರ ಸಹಯೋಗದೊಂದಿಗೆ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನೌಕಾಪಡೆಯ ಏಳು ಸಿಬ್ಬಂದಿಯನ್ನು ವಿಶಾಖಪಟ್ಟಣಂನಲ್ಲಿ ಬಂಧಿಸಿದೆ. 

 ದೇಶದ ವಿವಿಧ ಭಾಗಗಳಿಂದ ಏಳು ನೌಕಾಪಡೆಯ ಸಿಬ್ಬಂದಿ ಮತ್ತು ಹವಾಲಾ ಆಪರೇಟರ್ನನ್ನು ಬಂಧಿಸಲಾಗಿದೆ ಎಂದು ಇಲ್ಲಿನ ಡಿಜಿಪಿ ಕಚೇರಿ ಶುಕ್ರವಾರದ ಹೇಳಿಕೆಯಲ್ಲಿ ತಿಳಿಸಿದೆ. 

 ನೌಕಾಸೇನೆಯ 7 ಸಿಬ್ಬಂದಿ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಇನ್ನೂ ಕೆಲವು ಶಂಕಿತರನ್ನು ಪ್ರಶ್ನಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.