ಲೋಕದರ್ಶನ ವರದಿ
ಸಿರುಗುಪ್ಪ04 :- ಜಗತ್ತು ಬಲು ಸುಂದರವಾದುದು, ಪ್ರತಿ ಕ್ಷಣ ಸುಖ ದುಃಖದಲ್ಲಿ ಆನಂದದಿಂದ ಸವಿ ಯಾಗಿರಬೇಕು, ಎಂದು ಲೋಕ ಶಿಕ್ಷಣ ನಿದರ್ೆಶನಾಲಯ ಸಾಕ್ಷರತಾ ಭಾರತ್ ಪ್ರೇಮಿ, ಸಾಹಿತ್ಯ, ಸಮಾಜ, ಗಾಯಕರಾದ ಎ.ಅಬ್ದುಲ್ ನಬಿ ಅಭಿಪ್ರಾಯಪಟ್ಟರು. ಜಗತ್ತಿನ ಖ್ಯಾತ ಪ್ರಸಿದ್ಧ ಹಿನ್ನೆಲೆ ಗಾಯಕರಾದ "ಪದ್ಮಶ್ರೀ ಮೊಹಮ್ಮದ್ ರಫೀ" ಅವರ 39 ನೇ ಪುಣ್ಯಸ್ಮರಣೆ.
ಖ್ಯಾತ ಹಿನ್ನೆಲೆ ಗಾಯಕರು, ಸಂಗೀತ ನಿದರ್ೆಶಕರು, ಚಿತ್ರನಟರು, ನಿದರ್ೆಶಕರಾದ ಕಿಶೋರ್ ಕುಮಾರ್ ರವರ 90ನೇ ಜನ್ಮದಿನ ಈ ಮಹಾನೀಯರನ್ನು ನೆನಪಿಸಿ ಸ್ಮರಿಸಿ ಮೊಹಮ್ಮದ್ ರಫಿ ಹಾಗೂ ಕಿಶೋರ್ ಕುಮಾರ್ ಅವರು ನಾಲ್ಕು ದಶಕಗಳ ಕಾಲ ಬಹುಭಾಷೆಗಳಲ್ಲಿ ಜಗತ್ತಿನ ಚಿತ್ರರಂಗದಲ್ಲಿ ಹಾಡಿ ರಂಜಿಸಿ ಜಗತ್ ಪ್ರಸಿದ್ಧರಾಗಿ ದೇಶಕ್ಕೆ ನೀಡಿದ ಅವರ ಕೊಡುಗೆ ಅಪಾರ ಎಂದರು.
ಭಾರತ ಸಕರ್ಾರದ ಸೇನಾ ಮುಖ್ಯಸ್ಥರು, ಸಾಹಿತಿ ,ಸೇನಾ ತಂತ್ರಜ್ಞರು, ವಾಯುದಳದ ಮುಖ್ಯಸ್ಥರು, ಶಿಕ್ಷಣ ತಜ್ಞರು, ಹಾಗೂ ವೀರಚಕ್ರ ಪುರಸ್ಕೃತರಾದ ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ ಅವರ 6 ನೇ ಪುಣ್ಯತಿಥಿ ದೆಶಕ್ಕಾಗಿ ದುಡಿದ ಅವರ ಸೇವೆ ಅಪಾರ ಎಂದರು.ಕ್ಷೇತ್ರ ಸಾಕ್ಷರತಾ ಸಂಯೋಜಕರಾದ ಜೆ. ನಾಗೇಂದ್ರ ಗೌಡ, ತಾಲೂಕು ಪಂಚಾಯತ್ ಎಚ್. ಸುಧಾಕರ್, ಸಾಕ್ಷರತಾ ಕಾರ್ಯಕರ್ತರು ಎ. ಮೊಹಮ್ಮದ್ಇಬ್ರಾಹಿಮ್, ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ, ಇತರರು ಉಪಸ್ಥಿತರಿದ್ದರು.