ಬ್ಯಾಂಕೋಕ್ 14: ಒಲಂಪಿಕ್ ನಲ್ಲಿ ಬೆಳ್ಳಿ ಪದಕ ಪಡೆದಿದ್ದ ಪಿವಿ ಸಿಂಧು ಥಾಯ್ ಲ್ಯಾಂಡ್ ಓಪನ್ ವಿಶ್ವ ಟೂರ್ ಸೂಪರ್ 500 ಟೂರ್ನಮೆಂಟ್ ನಲ್ಲಿ ಫೈನಲ್ಸ್ ಪ್ರವೇಶಿಸಿದ್ದಾರೆ.
ಥಾಯ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ತಮ್ಮ ಅಜೇಯ ಆಟವನ್ನು ಮುಂದುವರೆಸಿರುವ ಪಿವಿ ಸಿಂಧು 23-21 16-21-21-9 ಅಂತರದಿಂದ ಇಂಡೋನೇಷ್ಯಾದ ಗ್ರೆಗೊರಿಯಾ ಮಾರಿಸ್ಕಾ ತುಂಜಂಗ್ ನ್ನು ಮಣಿಸಿದ್ದು ಫೈನಲ್ಸ್ ಪ್ರವೇಶಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಜಪಾನ್ ನ ನೋಜೊಮಿ ಒಕುಹರಾ ವಿರುದ್ಧ ಪಿವಿ ಸಿಂಧು ಸೆಣೆಸಲಿದ್ದಾರೆ.
ಕ್ವಾರ್ಟರ್ ಫೈನಲ್ಸ್ ನಲ್ಲಿ ಸಿಂಧು, ಮಲೇಷ್ಯಾದ ಸೊನಿಯಯಾ ಚೆಹಾ ಅವರನ್ನು ಮಣಿಸಿದ್ದರು.