ಪಿಎಸ್ಐ ವಿನಾಯಕಗೆ ಶ್ರೀಗಳಿಂದ ಹೃದಯಸ್ಪಶರ್ಿ ಸನ್ಮಾನ

ಲೋಕದರ್ಶನ ವರದಿ

ಯಲಬುಗರ್ಾ 11: ಪಟ್ಟಣದ ಜನತೆಗೆ ನೆಮ್ಮದಿಯನ್ನು ನೀಡುವದರ ಮುಖಾಂತರ ನಮ್ಮ ತಾಲೂಕಿನ ಜನತೆಯ ಮನಸ್ಸನ್ನು ಗೆದ್ದಿರುವ ವಿನಾಯಕ ಅವರು ಮುಂದಿನ ದಿನಗಳಲ್ಲಿ ಪೋಲಿಸ್ ಇಲಾಖೆಯ ಉನ್ನತ ಹುದ್ದೆಗೆ ಆಯ್ಕೆಯಾಗಲಿ ಎಂದು ಸ್ಥಳೀಯ ಷ,ಬ್ರ,ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಗಳು ಹೇಳಿದರು,

ನಗರದ ಶ್ರೀಧರ ಮುರಡಿ ಹಿರೇಮಠದಲ್ಲಿ ಅವರು ವಗರ್ಾವಣೆಗೊಂಡ ನಿಮಿತ್ಯ ಏರ್ಪಡಿದ್ದ ಸನ್ಮಾನ ಸಮಾರಂಭದಲ್ಲಿ ಸ್ವಶಮೀಜಿಗಳು ಆಶಿರ್ವಚನ ನೀಡಿದರು.

ಅಧಿಕಾರಿಗಳು ಸಾಕಷ್ಟು ಜನ ಬರುತ್ತಾರೆ ಹೋಗುತ್ತಾರೆ ಅದೆ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವವರು ತುಂಬಾ ಕಡಿಮೆ ಅಂತಹದ್ದರಲ್ಲಿ ವಿನಾಯಕರವರು ಜನತೆಯನ್ನು ಅತ್ಯಂತ ಆತ್ಮೀಯವಾಗಿ ಕಂಡವರು ಆದ್ದರಿಂದ ಜನತೆ ಅವರ ಮೇಲೆ ತುಂಬಾ ಪ್ರೀತಿಯನ್ನು ಇಟ್ಟಿದ್ದಾರೆ ಅದರಂತೆ ಅವರು ಮುಂದೆನು ಜನಸ್ನೇಹಿ ಪೋಲಿಸ್ ಆಗಿರಲಿ ಎಂದರು.

ಈ ಸಂದರ್ಭದಲ್ಲಿ ಜಿಗೇರಿ ಮಠದ ಒಪ್ಪತ್ತೇಶ್ವರ ಮಹಾಸ್ವಾಮೀಜಿಗಳು ಹಾಗೂ ಮುಖಂಡರಾದ ದೊಡ್ಡಯ್ಯ ಗುರುವಿನ, ಸೇರಿದಂತೆ ಅನೇಕ ಹಿರಿಯ ಮುಖಂಡರು ಹಾಜರಿದ್ದರು.