ಲೋಕದರ್ಶನ ವರದಿ
ಕಂಪ್ಲಿ: 12. ತಾಲೂಕಿನ ಪೊಲೀಸ್ ಠಾಣೆ ಆವರಣದಲ್ಲಿ ಬಳ್ಳಾರಿ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ವಗರ್ಾವಣೆಗೊಂಡ ಹಿನ್ನಲೆಯಲ್ಲಿ ಪಿಎಸ್ಐ ಬಿ.ನಿರಂಜನ್ಗೆ ಪೊಲೀಸ್ ಇಲಾಖೆಯಿಂದ ಗುರುವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
ಪಿಎಸ್ಐ ಬಿ.ನಿರಂಜನ್ ಮಾತನಾಡಿ, ಮುಖಂಡರ ಸಹಕಾರದಿಂದ 2 ವರ್ಷ ಕಂಪ್ಲಿಯಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಾಯಿತು. ಮುಖಂಡರು ಗ್ರಾಮದಲ್ಲಿ ಯುವಕರನ್ನು ದುಶ್ಚಟಕ್ಕೆ ಕೈಹಾಕದಂತೆ ನೋಡಿಕೊಂಡಾಗ ಅಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬಹುದು. ಗೋನಾಳ್ ಗ್ರಾಮದಲ್ಲಿ ಮುಖಂಡರ ಇಚ್ಚಾಶಕ್ತಿ ಕೊರತೆಯಿಂದ ಗಲಾಟೆಗಳು ನಡೆಯುತ್ತಿವೆ. ಜನರು ಕಾನೂನು ತಿಳುವಳಿಕೆ ಅರಿತಾಗ ಮಾತ್ರ ಉತ್ತಮ ಜೀವನ ನಡೆಸಲು ಸಧ್ಯವಾಗುತ್ತದೆ. ಈ ಭಾಗದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿರುವುದು ನನ್ನ ಭಾಗ್ಯ. ಇಲ್ಲಿನ ಪ್ರೀತಿ, ವಿಶ್ವಾಸ, ವಾತ್ಸಾಲ್ಯದ ಜನರಿದ್ದಾರೆ ಎಂದರು.
ನೂತನ ಪಿಎಸ್ಐ ಬಿ.ಕೆ.ವಾಸುಕುಮಾರ ಮಾತನಾಡಿ, ವೃತ್ತಿ ಜೀವನದಲ್ಲಿ ವಗರ್ಾವಣೆ ಅನ್ನುವುದು ಸಹಜ. ಆದರೆ, ವಗರ್ಾವಣೆ ಮುಂಚಿತವಾಗಿ ನಾವು ಎಷ್ಟರ ಮಟ್ಟಿಗೆ ಜನರ ಸೇವೆ ಮಾಡಿದ್ದೇವೆ ಅನ್ನುವುದು ಮುಖ್ಯವಾಗಿದೆ. ನೈತಿಕವಾಗಿ ಸಮಸ್ಯೆಗಳು ಇತ್ಯಾರ್ಥಗೊಳ್ಳದಿದ್ದರೆ, ಕಾನೂನು ಕೆಲಸ ಅನಿವಾರ್ಯ. ಕಂಪ್ಲಿ ತಾಲೂಕಿನ ಮುಖಂಡರ ಹಾಗೂ ಜನತೆಗೆ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡುವ ಭರಸವೆ ವ್ಯಕ್ತಪಡಿಸಿದರು.
ಸಿಪಿಐ ಡಿ.ಹುಲುಗಪ್ಪ ಅವರು ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಎಲ್ಲರ ಸಹಕಾರದಿಂದ ಕಂಪ್ಲಿ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿ ಮಾಡೋಣ ಎಂದರು. ನಂತರ ಮುಖಂಡರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದ ಬಂದ ಮುಖಂಡರು, ಯುವಕರು ವಗರ್ಾವಣೆಗೊಂಡ ಬಿ.ನಿರಂಜನ್ಗೆ ಸನ್ಮಾನದೊಂದಿಗೆ ಬೀಳ್ಕೊಟ್ಟರು. ಮತ್ತು ಬಿ.ಕೆ.ವಾಸುಕುಮಾರ್ ಅವರನ್ನು ಸ್ವಾಗತಿಸಲಾಯಿತು.
ಅಪರಾಧ ವಿಭಾಗದ ಪಿಎಸ್ಐ ರಾಮಣ್ಣ ನಾಯಕ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಪಿ.ಮೂಕಯ್ಯಸ್ವಾಮಿ, ಎಂ.ಸುಧೀರ್, ಭಟ್ಟ ಪ್ರಸಾದ್, ಡಿ.ವಿ.ಸುಬ್ಬಾರಾವ್, ಸಿ.ಆರ್.ಹನುಮಂತ, ರಾಜರಾವ್, ಪಿ.ಬ್ರಹ್ಮಯ್ಯ, ಬಿ.ನಾರಾಯಣಪ್ಪ, ಕೆ.ಎಸ್.ಚಾಂದ್ಬಾಷಾ, ಎಂ.ರಾಜೇಶ್, ಸುರೇಶ್, ಎಂ.ಮರೆಣ್ಣ, ಜಿ.ಸುಧಾಕರ್, ಆರ್.ಶಿವನಗೌಡ, ಮಾವಿನಹಳ್ಳಿ ಬಸವರಾಜ, ಡಿ.ಮೌನೇಶ್, ಮೆಟ್ರಿ ಗಿರೀಶ್, ವಾಲ್ಮೀಕಿ ಈರಣ್ಣ, ಹಬೀಬ್ ರೆಹಮಾನ್, ವೆಂಕೋಬ, ರೇಣುಕಗೌಡ,
ಮುಖಂಡರು, ಯುವಕರು ಸೇರಿ ಪೊಲೀಸ್ ಸಿಬ್ಬಂದಿಗಳು ಇದ್ದರು.