ವನ್ಯ ಮೃಗಗಳ ಸಂರಕ್ಷಣಾ ಸಮಾವೇಶ

ಅಹಮದಾಬಾದ್, ಫೆ ೧೭,ಗುಜರಾತ್ನ  ಗಾಂಧಿನಗರದಲ್ಲಿ ವಲಸೆ ವನ್ಯ ಮೃಗಗಳ ಸಂರಕ್ಷಣೆ ಕುರಿತ  ೧೩ನೇ ಸಮಾವೇಶವನ್ನು  ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಲಿದ್ದಾರೆ.ಈ ತಿಂಗಳ ೨೨ ರವರೆಗೆ  ನಡೆಯಲಿರುವ ಈ ಸಮಾವೇಶದಲ್ಲಿ ೧೩೦ ದೇಶಗಳ ಪ್ರತಿನಿಧಿಗಳು ಖ್ಯಾತ ಸಂರಕ್ಷಣಾಕಾರರು ಹಾಗೂ  ವನ್ಯ ಮೃಗಗಳ ಸಂರಕ್ಷಣಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅಂತಾರಾಷ್ಟ್ರೀಯ ಎನ್ಜಿಓ ಗಳು  ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ  ಸಂಘಟನೆಗಳು, ವನ್ಯ ಮೃಗ ಸಂರಕ್ಷಣೆಯ ಅತ್ಯುತ್ತಮ ವಿಧಾನಗಳನ್ನು ಪ್ರದರ್ಶಿಸಲಿದ್ದಾರೆ.ಆತಿಥೇಯ  ರಾಷ್ಟ್ರ ಭಾರತ, ಮುಂದಿನ ಮೂರು ವರ್ಷಗಳ ಕಾಲ ಅಧ್ಯಕ್ಷ ಸ್ಥಾನಕ್ಕೆ ನಿಯೋಜನೆಯಾಗಲಿದೆ.  ಭಾರತ ೧೯೮೩ ರಿಂದಲೂ ವಲಸೆ ವನ್ಯ ಮೃಗ ಸಂರಕ್ಷಣಾ ಸಮಾವೇಶಗಳಲ್ಲಿ ಭಾಗಿಯಾಗಿದೆ. ವಲಸೆ  ಸಾಗರ ಜೀವಿಗಳ ಸಂರಕ್ಷಣೆಗಾಗಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.