ಪಿಒಪಿ ಮೂತರ್ಿ ತಯಾರಿಕೆ, ಮಾರಾಟಗಾರರ ಸಭೆ ಮಣ್ಣಿನ ಗಣೇಶ ಮೂತರ್ಿ ತಯಾರಿಕೆಗೆ ಅನುಮತಿ ಕಡ್ಡಾಯ


ಲೋಕದರ್ಶನ ವರದಿ

ಬಳ್ಳಾರಿ06: ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಬಣ್ಣಲೇಪಿತ ಗಣಪತಿ ಹಾಗೂ ಇತರೆ ವಿಗ್ರಹಗಳನ್ನು ತಯಾರಿಕೆ ಹಾಗೂ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಆದೇಶ ಉಲ್ಲಂಘಿಸಿ ತಯಾರಿಕೆಗೆ ಮುಂದಾದರೇ ದಂಡದ ಜತೆಗೆ ಜೈಲುವಾಸ ಕಟ್ಟಿಟ್ಟ ಬುತ್ತಿ ಎಂದು ಮಹಾನಗರ ಪಾಲಿಕೆ ಆಯುಕ್ತ ನಾರಾಯಣಪ್ಪ ಅವರು ಹೇಳಿದರು. ನಗರದ ಮಹಾನಗರ ಪಾಲಿಕೆಯ ಶ್ರಿಕೃಷ್ಣದೇವರಾಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಗಣಪತಿ ತಯಾರಿಕೆ ಮತ್ತು ಮಾರಾಟಗಾರರೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಣ್ಣಿನಿಂದ ವಿಗ್ರಹಗಳನ್ನು ತಯಾರಿಸಲು ಮಹಾನಗರ ಪಾಲಿಕೆಗೆ ಅಜರ್ಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ತಯಾರಿಸಲಾದ ವಿಗ್ರಹಗಳನ್ನು ಪಾಲಿಕೆಯು ನಿಗಧಿಪಡಿಸಿದ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು. 

ಪಿಒಪಿಯಿಂದ ತಯಾರಿಸಿದ ಗಣಪತಿ ವಿಗ್ರಹಗಳು ಬೇರೆ ಜಿಲ್ಲೆಗಳಿಂದ ಬಳ್ಳಾರಿಗೆ ಆಗಮಿಸುವ ಸಾಧ್ಯತೆ ಇದ್ದು, ಇದಕ್ಕಾಗಿ ಚೆಕ್ಪೋಸ್ಟ್ಗಳ ಬಳಿ ತಪಾಸಣೆ ಮಾಡಿ ತಡೆಯಲಾಗುತ್ತಿದೆ ಎಂದು ಅವರು ಹೇಳಿದರು. ಇತ್ತಿಚೆಗೆ   ಪರಿಸರ (ಸಂರಕ್ಷಣೆ)ಕಾಯ್ದೆ 1986ರ ಸೆಕ್ಷನ್ರನ್ವಯ ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮತ್ತು ಬಣ್ಣಲೇಪಿತ ಗಣಪತಿ ಹಾಗೂ ಇತರೆ ವಿಗ್ರಹಗಳನ್ನು ತಯಾರಿಕೆ ಹಾಗೂ ಮಾರಾಟ ಮಾಡುವುದನ್ನು ಮಾನ್ಯ ಉಚ್ಛನ್ಯಾಯಾಲಯ ಹಾಗೂ ಸಕರ್ಾರವು ಸಂಪೂರ್ಣವಾಗಿ ನಿಷೇಧಿಸಲಾಗಿದೆ. 

ಯಾವುದೇ ಕಾರಣಕ್ಕೂ ಸಕರ್ಾರದ ಆದೇಶವನ್ನು ಉಲ್ಲಂಘನೆ ಮಾಡದಂತೆ ಮಹಾನಗರ ಪಾಲಿಕೆ ಆಯುಕ್ತರು ಸಭೆಯಲ್ಲಿ ಉಪಸ್ಥಿತರಿದ್ದವರಿಗೆ ಮನವರಿಕೆ ಮಾಡಿದರು. ಒಂದು ವೇಳೆ ಸಕರ್ಾರ ಆದೇಶ ಹಾಗೂ ಕಾನೂನು ಉಲ್ಲಂಘಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಮತ್ತು ಬಣ್ಣಲೇಪಿತ ಗಣಪತಿ ಹಾಗೂ ಇತರೆ ವಿಗ್ರಹಗಳನ್ನು ತಯಾರಿಸಿದ್ದಲ್ಲಿ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ)ಕಾಯ್ದೆ 1974ರ ಕಲಂ45(ಎ)ರನ್ವಯ ದಂಡ ಹಾಗೂ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದರು. ಈ ಸಂದರ್ಭದಲ್ಲಿ ರಂಗಸ್ವಾಮಿ, ಕೆ.ವಿ.ಸತ್ಯನಾರಾಯಣ, ಗಿರಿಜಾ, ಉಮಾದೇವಿ ಮತ್ತು ಭಾಗ್ಯಮ್ಮ ಹಾಗೂ ಇತರರು ಇದ್ದರು.