ಲೋಕದರ್ಶನ ವರದಿ
ಯಲಬುರ್ಗಾ 19: ನಮ್ಮ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು ಎಂದು ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಹೇಳಿದರು.
ಪಟ್ಟಣದ ತಾಪಂ ಸಭಾ ಭವನದಲ್ಲಿ ನಡೆದ ಕುಡಿಯುವ ನೀರು ಮತ್ತು 14ನೇ ಹಣಕಾಸಿನ ಖಚರ್ು ವೆಚ್ಚಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯಾವ ಪಂಚಾಯತಿಯಲ್ಲಿಯೂ 14ನೇ ಹಣಕಾಸು ಯೋಜನೆಯು ಸಮರ್ಪಕವಾಗಿ ಬಳಕೆಯಾಗಿರುವದಿಲ್ಲಾ ಅಭಿವೃದ್ಧಿಗಾಗಿ ಬಂದಂತಹ ಹಣವನ್ನು ತಮ್ಮ ಮನ ಬಂದಂತೆ ಖರ್ಚು ಮಾಡಿರುವದು ಕಂಡು ಬರುತ್ತಿದೆ ಯಾವ ಪಿಡಿಒಗಳ ಹತ್ತಿರನು ಸಹಿತ ಸರಿಯಾದ ಮಾಹಿತಿ ಇಲ್ಲ ಎನ್ನುವದು ಗೊತ್ತಾಗಿದೆ ಇಗೇ ಆದರೆ ತಾಲೂಕಿನ ಅಭಿವೃದ್ಧಿಯ ಗತಿಯೇನು, ಹಲವಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿದ್ದರು ಸಹಿತ ಮತ್ತು ಹಣವು ಇದ್ದು ಸಮಸ್ಯೆಯನ್ನು ಬಗೆಹರಿಸಲು ಏಕೆ ಸಾದ್ಯವಾಗುತ್ತಿಲ್ಲಾ ಎನ್ನುವದು ಗೊತ್ತಾಗುತ್ತಿಲ್ಲಾ ತಾಪಂ ಇಒ ಅವರು ಪ್ರತಿ ಗ್ರಾಪಂಗೆ ಬೇಟಿ ನೀಡಿ 14ನೇ ಹಣಕಾಸಿನಲ್ಲಾದ ಅವ್ಯವಹಾರವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ತಾಪಂ ಇಒ ಡಾ. ಮೋಹನ್ ಮಾತನಾಡಿ ಪ್ರತಿಯೊಬ್ಬ ಅಧಿಕಾರಿಗಳು ನಿಮ್ಮ ಕೆಲಸದ ಕಡೆಗೆ ಹೆಚ್ಚು ಗಮನ ನೀಡಬೇಕು ನಮ್ಮ ತಾಲೂನಲ್ಲಿ ಹೊಸದಾಗಿ ಜಲಶಕ್ತಿ ಯೋಜನೆ ಜಾರಿಯಾಗಿದೆ ಆದ್ದರಿಂದ ಕೆರೆಗಳು, ಇಂಗು ಗುಂಡಿ, ಕೃಷಿ ಹೊಂಡಗಳ ನಿರ್ಮಾಣ ಮಾಡಬೇಕು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನತೆಗೆ ಕೆಲಸ ನೀಡಿ ನಿಮ್ಮ ಪ್ರಗತಿಯನ್ನು ಪರಿಶಿಲಿಸಲಾಗುವದು ಅದರಲ್ಲಿ ನಿಮ್ಮ ಕರ್ತವ್ಯ ಲೋಪ ಕಂಡು ಬಂದರೆ ನಿಮ್ಮ ವಿರುದ್ಧ ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವದು ಎಂದರು.