ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ01 : ಹಗರಿಬೊಮ್ಮನಹಳ್ಳಿಯಲ್ಲಿ ಸ್ನಾತಕೋತ್ತರ ಪದವಿ ಕೇಂದ್ರವನ್ನು ತೆರೆಯಲು ಈ ಹಿಂದೆಯೇ ಮನವಿ ಮಾಡಲಾಗಿತ್ತು ಎಂದು ಎಸ್.ಎಫ್.ಐ ತಾಲೂಕು ಅಧ್ಯಕ್ಷ ಜಯಸೂರ್ಯ ಹೇಳಿದರು.
ಪಟ್ಟಣದ ಜಿವಿಪಿಪಿ ಪ್ರಥಮ ದಜರ್ೆ ಕಾಲೇಜುಬಳಿ ಪ್ರತಿಭಟನೆ ನಡೆಸಿ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿ ಈ ಭಾಗದ ವಿದ್ಯಾಥರ್ಿಗಳು ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಹೋಗಲು ತೊಂದರೆಯಾಗುತ್ತದೆ ಅಲ್ಲದೇ ಹೊಸಪೇಟೆ, ಸಂಡೂರು, ಕೊಟ್ಟೂರು, ಹೂವಿನ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ ಸೇರಿದಂತೆ ಈ ಭಾಗದಲ್ಲಿ ಒಟ್ಟು 10 ಸಾವಿರ ವಿದ್ಯಾಥರ್ಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ ಪ್ರತಿವರ್ಷ ಈ ಭಾಗದಿಂದ 6 ಸಾವಿರ ವಿದ್ಯಾಥರ್ಿಗಳು ಬಳ್ಳಾರಿ ಮತ್ತು ಕೊಪ್ಪಳಕ್ಕೆ ಸ್ನಾತಕೊತ್ತರ ಪದವಿ ಅಭ್ಯಾಸಕ್ಕೆ ಹೋಗುತ್ತಿದ್ದಾರೆ. ಪ್ರತಿದಿನ ಹಗರಿಬೊಮ್ಮನಹಳ್ಳಿ ಹಾಗೂ ಹಡಗಲಿ ಇತರೆ ತಾಲೂಕುಗಳಿಂದ ವಿದ್ಯಾಥರ್ಿಗಳು ಬರಲು ಸಾಧ್ಯವಾಗುತ್ತಿಲ್ಲ ಸುಮಾರು 110 ಕಿ.ಮೀ ದೂರವಿರುವುದರಿಂದ ವಿದ್ಯಾಥರ್ಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ವಿ.ಎಸ್.ಕೆ.ವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ಕೇಂದ್ರವನ್ನು ಹಗರಿಬೊಮ್ಮನಹಳ್ಳಿಯಲ್ಲೇ ತೆರೆಯಬೇಕೆಂದು ಎಸ್.ಎಫ್.ಐ ಒತ್ತಾಯಿಸತ್ತದೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಫ್.ಐ ಉಪಾಧ್ಯಕ್ಷ ತುಕಾರಾಮ್, ಶಶಿಕುಮಾರ್, ಕಾರ್ಯದಶರ್ಿ ಚಿರಂಜೀವಿ ಬೆಳ್ಳಕ್ಕಿ, ಸಹಕಾಯರ್ಾದಶರ್ಿ ಅಬ್ದುಲ್ ಸುಬಾನ್, ಕೃಷ್ಣ, ಸಣ್ಣ ವೀರಣ್ಣ, ಜಯಶ್ರೀ ಹಾಗೂ ನೂರಾರು ವಿದ್ಯಾಥರ್ಿ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.