ಪ.ಪೂ. ಕಾಲೇಜಿಗೆ ಹಣ ಬಿಡುಗಡೆ

ಲೋಕದರ್ಶನ ವರದಿ

ಮುಧೋಳ-ನಗರದ ಸರಕಾರಿ ಪ್ರಥಮ ದಜರ್ೆ ಕಾಲೇಜಿನ 145 ಲಕ್ಷ  ರೂ ವೆಚ್ಚದ ಹೆಚ್ಚುವರು ನಾಲ್ಕು ಕೊಠಡಿ, 1 ಮಹಿಳೆಯರ ವಿಶ್ರಾಂತಿ ಕೊಠಡಿ, 2 ಶೌಚಾಲಯ ಕಾಮಗಾರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಚಾಲನೆ ನೀಡಿದರು.ಅದೇ ರೀತಿ ಸರಕಾರಿ  ಪದವಿ ಪೂರ್ವ ಕಾಲೇಜಿಗೆ ರೂ 100 ಲಕ್ಷದ  ,ಹೆಚ್ಚುವರಿ ಕೊಠಡಿಗಳು, ಹಾಗೂ ಪ್ರಯೋಗಾಲಯವನ್ನು ಉದ್ಘಾಟಿಸಿದರು.ಈಂತಹ ಶಾಲೆಯಲ್ಲಿ ಬಡವರ ಮಕ್ಕಳು ಹೆಚ್ಚಾಗಿ ಓದುವುದರಿಂದ ಆ ಮಕ್ಕಳಿಗೆ ಕೂಡ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಇದಕ್ಕೆ ಉಪನ್ಯಾಸಕರು ಹಾಗೂ ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ಕಿವಿ ಮಾತು ಹೇಳಿದರು. 

ಎರಡು ಕಾಲೇಜಿಗೆ ಅವಶ್ಯವಿರುವ ಉಪನ್ಯಾಸಕರ ನಿಯೋಜನೆ, ಅತಿಥಿ ಉಪನ್ಯಾಸಕರ ಕಾಯಮಾತಿ,ಶುದ್ದ ನೀರಿನ ಘಟಕ, ಕ್ರೀಡಾಂಗಣ,ಹಾಗೂ ಇನ್ನಿತರ ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಇದಕ್ಕೆ ಯಾವುದೆ ಹಣಕಾಸಿನ ತೊಂದರೆ ಇಲ್ಲವೆಂದು, ಕಾರಜೋಳ ಸ್ಪಷ್ಠ ಪಡಿಸಿದರು.

ವೇದಿಕೆಯ ಮೇಲೆ ಬಿಜೆಪಿ.ಅಧ್ಯಕ್ಷರಾದ ಕೆ.ಆರ್.ಮಾಚಪ್ಪನವರ, ಗುರುರಾಜ ಕಟ್ಟಿ, ಆರ್.ಎಸ್.ತಳೇವಾಡ, ಬಿ.ಜಿ.ಪಾಟೀಲ, ಕಾಲೇಜ ಡಿಡಿಪಿಇ. ಶ್ರೀಧರ ಪೂಜಾರ, ಪ್ರಾ.ಎನ್.ಎಲ್.ತೇರದಾಳ ಪ್ರಾ. ಪಿ.ಐ.ಭಂಡಾರಿ, ತಹಶೀಲದಾರ ಸಂಜಯ ಇಂಗಳೆ, ಇ.ಓ. ಬಸವರಾಜ ಅಡವಿಮಠ, ಬಿಇಓ.ವಿಠ್ಠಲ ದೇವನಗಾಂವಿ, ಉಪಸ್ಥಿತರಿದ್ದರು, ಪಿ.ಐ.ಭಂಡಾರಿ ಸ್ವಾಗತಿಸಿದರು.ಪ್ರಾ.ಎನ್.ಎಲ್.ತೇರದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಎನ್.ಪಡಸಲಗಿ ನಿರೂಪಿಸಿ ವಂದಿಸಿದರು.