ಗಾಂಧಿನಗರ ಕಂಬಾರಗಟ್ಟಿ ಕೊಳಚೆ ಪ್ರದೇಶದ ನಿವಾಸಿಗಳಿಂದ ಪಪಂ ಮುಂದೆ ‘ಧರಣಿ ಸತ್ಯಾಗ್ರಹ’
ಮುಂಡಗೋಡ 12: ಪಟ್ಟಣದ ವ್ಯಾಪ್ತಿಯ ಗಾಂಧಿನಗರ ಹಾಗೂ ಕಂಬಾರಗಟ್ಟಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ನಮೂನೆ 3 ನೀಡಲು ವಿಳಂಬ ಮಾಡುತ್ತಿದ್ದಾರೆಂದು ಕೊಳಚೆ ಪ್ರದೇಶಗಳ ನಿವಾಸಿಗಳು ಬಡ ಜನರಿಗೆ ನೀಡಿರುವ ಸವಲತ್ತುಗಳನ್ನು ವಿರೋಧಿಸುತ್ತಿರುವ ಪಟ್ಟಣ ಪಂಚಾಯತಿ ಎದುರು ಅನಿರ್ದಿಷ್ಟಾವದಿಯ ಧರಣಿ ಸತ್ಯಗ್ರಹ ನಡೆಸಲು ಮುಂದಾಗಿ ಪ್ರತಿಭಟಿಸಿ ಅಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಗಾಂಧಿನಗದ ಕೊಳಚೆ ಪ್ರದೇಶ ಎಂದು ಘೋಷಿಸಿದೆ.
ಸರ್ಕಾರ ಬಡ ಜನರಿಗೆ ನೀಡಿರುವ ಸೌಲತ್ತುಗಳನ್ನು ವಿರೋಧಿಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ ಮೂಲಕ ಜಿಲ್ಲಾಕಾರಿಗಳಿಗೆ ಉಪತಹಶೀಲ್ದಾರರು ಮೂಲಕ ಮನವಿ ಸಲ್ಲಿಸಲಾಯಿತು.
ಕಳೆದ ಎರಡು ವರ್ಷಗಳ ಹಿಂದೆ, ಶಾಸಕ ಶಿವರಾಮ ಹೆಬ್ಬಾರ ಪ್ರಯತ್ನದಿಂದ ಪಟ್ಟಣ ವ್ಯಾಪ್ತಿಯ ನಿವಾಸಿಗಳಿಗೆ ಕೊಳಚೆ ಮಂಡಳಿಯಿಂದ ಹಕ್ಕು ಪತ್ರ ಅಭಿವೃದ್ಧಿ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದ ಎಲ್ಲಾ ಹಂತ ಮುಗಿಸಿ ಫಲಾನುಭವಿಗಳು, ಪಟ್ಟಣ ಪಂಚಾಯತ ಆಸ್ತಿ ಪುಸ್ತಕದಲ್ಲಿ ನಮೂದಿಸಿಕೊಂಡು ನಮೂನೆ-3 ನೀಡಲು ತಮಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆದಿದ್ದೇವೆ. ಆದರೆ ಇಂದಿನ ತನಕ ಕಂಬಾರಗಟ್ಟಿ ಕೊಳಚೆ ಪ್ರದೇಶಕ್ಕೆ ಒಬ್ಬರಿಗೂ ಸಹ ನಮೂನೆ-3 ನೀಡಿಲ್ಲ ಹಾಗೂ ಗಾಂಧಿನಗರದ ಕೊಳಚೆ ನಿವಾಸಿಗಳಿಗೆ ಸಂಪೂರ್ಣ ನಮೂನೆ-3 ನೀಡಿಲ್ಲ ಗಾಂಧಿನಗರದ ಘೋಷಿತ ಕೊಳಚೆ ಪ್ರದೇಶಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಆದೇಶದಂತೆ 530 ಫಲಾನುಭವಿಗಳಿಗೆ ಮತ್ತು ಕಂಬಾರಗಟ್ಟಿ ಪ್ಲಾಟ್ ನಿವಾಸಿಗಳಿಗೆ ಏಪ್ರಿಲ್ 30 ರೊಳಗೆ ನಮೂನೆ-3 ನೀಡಲಾಗುವುದು ಎಂದು ಹೇಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಸುಧಾ ಭೋವಿ ಹಾಗೂ ಪ ಪಂ ಮುಖ್ಯಾಧಿಕಾರಿ ಚಂದ್ರಶೇಖರ ಬಿ.ಲಿಖಿತ ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ ಚಲವಾದಿ ವಿಶ್ವನಾಥ ಪವಾಡಶೆಟ್ಟರ, ರವಿ ಹಾವೇರಿ ರೇಣುಕಾ ಹಾವೇರಿ, ಶಕುಂತಲಾ ನಾಯಕ,ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಚಿದಾನಂದ್ ರವಿ ಬಾಳಂಬೀಡ, ರಾಜು ಬಾಬರ್, ರಾಮು ಕೊರವರ, ಖಂಡೋಬಾ ರಾಶಿನಕರ ಬಸುವರಾಜ್ ಹಳ್ಳಮ್ಮನವರ ಹಾಗೂ ಉಪಸ್ಥಿತರಿದ್ದರು.