ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು: ಪಾಟೀಲ

ಲೋಕದರ್ಶನ ವರದಿ

ಧಾರವಾಡ 19: ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಸಾರ್ವತ್ರಿಕವಾಗಿ ನಡೆಯಬೇಕಿದೆ ಎಂದು ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಹೇಳಿದರು.

      ಗುರುವಾರ ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಜಂಬೂ ಸವಾರಿ ಮೆರವಣಿಗೆ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಾಬಾಗೌಡ ಅವರು ನಾವು ಇಂದು   ಭಾಷೆ, ಸಂಸ್ಕೃತಿಪರಂಪರೆಯನ್ನು ಮರೆತು ಸಾಗುತ್ತಿದ್ದೇವೆ ಎಂಬುದರ ಅರಿವು ನಮಗಿಲ್ಲದಂತಾಗಿದೆ. ಸಂಸ್ಕೃತಿ ಎಂಬುದು ಭಾಷೆ, ಸಾಧನೆ, ಭಾವ ಮತ್ತಿತರ ಜೀವನದ ಸೊಬಗು ಹೆಚ್ಚಿಸುವ ಎಲ್ಲವನ್ನೂ ಒಳಗೊಂಡಿದೆ. ಸಂಸ್ಕೃತಿಯನ್ನು ವಿವಿಧ ಹಬ್ಬ-ಹರಿದಿನಗಳಂದು ಎಲ್ಲರೂ ಸೇರಿ ಆಚರಿಸುವ ಮೂಲಕ ತಲೆತಲಾಂತರಗಳಿಂದ ಮುಂದುವರೆಸಿಕೊಂಡ ಹಿರಿಮೆ ನಮ್ಮದು. ನಾಡಿನ ಸಂಗೀತ, ಸಾಹಿತ್ಯ, ನೃತ್ಯ ಇನ್ನಿತರ ಕಲೆಗಳನ್ನು ಉಳಿಸಿಕೊಂಡು ಹೋಗಬೇಕಿದೆ. ಮೂಲಕ ನಮ್ಮ ಸಂಸ್ಕೃತಿಯನ್ನು ಗತವೈಭವಕ್ಕೆ ಒಯ್ಯುವ ಕಾರ್ಯ ಎಲ್ಲೆಡೆ ನಡೆಯಬೇಕಿದೆ ಎಂದು ಹೇಳಿದರು.

   ಸಾನಿಧ್ಯವಹಿಸಿದ್ದ ಬೆಳಗಾವಿ ಮುಕ್ತಿಮಠದ ಷಟಸ್ಥಳ ಬೃಹ್ಮ ಶಿವಾಚಾರ್ಯ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು, ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆ, ನಾಡು-ನುಡಿಯ ಹಿರಿಮೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುವ ಅವಶ್ಯವಿದೆ ಎಂದು ಆಶೀರ್ವಚನ ನೀಡಿದರು.

   ಸಮ್ಮುಖವಹಿಸಿದ್ದ ಉಪ್ಪಿನ ಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಮಹಾಸ್ವಾಮೀಜಿ ಮಾತನಾಡಿ, ವಿಶ್ವದಲ್ಲಿ ಭಾರತಕ್ಕೆ ಬೆಲೆ ಇರುವುದೇ ಸಂಸ್ಕೃತಿಯಿಂದ. ಆದರೆ ಇಂತಹ ಗೌರವವನ್ನು ಉಳಿಸಿಕೊಳ್ಳಲು ಹರಸಾಹಸ ಪಡುವ ಸ್ಥಿತಿ ನಿಮರ್ಾಣವಾಗಿದೆ.ಯುವ ಸಮುದಾಯ ಬಗ್ಗೆ ಇನ್ನೂ ಹೆಚ್ಚು ಕಾಳಜಿವಹಿಸಬೇಕಿದೆ. 10 ಸಾವಿರ ವರ್ಷಗಳಿಂದ ಆದಿಶಕ್ತಿಯ ಆರಾಧನೆ ನಡೆದುಕೊಂಡು ಬಂದಿದೆ. ಪ್ರಯತ್ನದ ಭಾಗವಾಗಿ ಕಳೆದ 15 ವರ್ಷಗಳಿಂದ ಧಾರವಾಡದಲ್ಲಿ ದಸರಾ ಜಂಬೂ ಸವಾರಿ ಆಯೋಜಿಸುತ್ತಿರುವುದು ನಗರಕ್ಕೆ ಹೊಸ ಮೆರಗು ನೀಡಿದೆ. ಕಾರ್ಯ ನಿರಂತರ ಮತ್ತು ನಿವರ್ಿಘ್ನವಾಗಿ ಸಾಗಿ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದು ಹಾರೈಸಿದರು.

        ಹಿರೇ ಮುನವಳ್ಳಿಯ ಶಂಭೂಲಿಂಗಸ್ವಾಮೀಜಿ, .ನಿ.ಪ್ರ ಶಿವಯೋಗಿ ಮಹಾಸ್ವಾಮಿಗಳು, ಫಂಡರಪುರ ಅಜರೇಕರ ಮಾವುಲಿಯ ಗುರುವರ್ಯ ಹರಿದಾಸ ರಾಮಬಾವು ಬೋರಾಠೆ, ಆನಂದಿ ಗುರುಗಳು ಸಮ್ಮುಖವಹಿಸಿದ್ದರು.

    ಇದೇ ಸಂದರ್ಭದಲ್ಲಿ ಏಶಿಯನ್ ಕ್ರೀಡಾಕೂಟದಲ್ಲಿ ಪದಕ ಪಡೆದು ಭಾರತದ ಗೌರವ ಹೆಚ್ಷಿಸಿದ ಕ್ರೀಡಾಪಟು ಮಲಪ್ರಭಾ ಜಾಧವಗೆ 10 ಸಾವಿರ ರೂಪಾಯಿ ನಗದು ಸಹಿತ ದಸರಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

        ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಶಿಮರದ ಅಧ್ಯಕ್ಷತೆವಹಿಸಿದ್ದರು. ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಗಣಪತರಾವ ಮುಂಜಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ನಾರಾಯಣ ಕೋಪಡರ್ೆ, ರಾಜೇಂದ್ರ ಕಪಲಿ, ಯಶವಂತರಾವ ಕದಂ, ಮಲಪ್ರಭಾ ಜಾಧವಳ ತರಬೇತುದಾರರಾದ ಎಂ.ಎನ್.ತ್ರಿವೇಣಿ ವೇದಿಕೆಯಲ್ಲಿದ್ದರು.

          ಸಮಿತಿಯ ಉಪಾಧ್ಯಕ್ಷ ಪುರುಷೋತ್ತಮ ಪಟೇಲ್, ಸದಾಶಿವ ದೊಡ್ಡಮನಿಕಾಯರ್ಾಧ್ಯಕ್ಷ ಪಿ.ಎಚ್.ಕಿರೇಸೂರ, ಖಜಾಂಚಿ ವಿಲಾಸ ತಿಬೇಲಿ, ಕರೆಪ್ಪ ಸುಣಗಾರ, ಎಸ್.ಎನ್.ದೇಶಪಾಂಡೆ, ಮನೋಜ ಸಂಗೊಳ್ಳಿ, ಹೇಮಾಕ್ಷಿ ಕಿರೇಸೂರ, ಫರೀದಾ ರೋಣದ, ಅನುರಾಧ ಆಕಳವಾಡಿ, ಸಿದ್ದು ಕಂಬಾರ, ಮಲ್ಲನಗೌಡ ಪಾಟೀಲ, ಎಂ.ಎಫ್.ಹಿರೇಮಠ,ಭೀಮಪ್ಪ ಕಾಸಾಯಿ ಮತ್ತಿತರರು ಉತ್ಸವದ ಯಶಸ್ವಿಗೆ ಶ್ರಮಿಸಿದರು.

        ಆಕರ್ಷಕ ಮೆರವಣಿಗೆ: ಈಶ್ವರ ದೇವಸ್ಥಾನದಿಂದ ಆರಂಭವಾದ ಜಂಬೂ ಸವಾರಿ ಮೆರವಣಿಗೆಯು ಕಲಘಟಗಿ ರಸ್ತೆ, ಟೋಲನಾಕಾ, ಬಾಗಲಕೋಟ ಪೆಟ್ರೋಲ್ ಪಂಪ್, ಹೊಸಯಲ್ಲಾಪೂರ, ಗಾಂಧಿ ಚೌಕ, ಸುಭಾಸ ರಸ್ತೆ ಮಾರ್ಗವಾಗಿ ಸಂಚರಿಸಿ ನಂತರ ಕಡಪಾ ಮೈದಾನ ತಲುಪಿ ಮುಕ್ತಾಯಗೊಂಡಿತು.

  ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆ, ಕುದುರೆ  ಸಾರೋಟಗಳು, ಜಾಂಝ್ ಮೇಳ, ಚಂಡಿ,ಭೂತ ಕುಣಿತ, ಹೆಜ್ಜೆ ಮೇಳ, ಭಜನೆ, ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಜನರ ಗಮನಸೆಳೆದವು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೆರವಣಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.