ನಮ್ಮ ಹುಬ್ಬಳ್ಳಿ-ಧಾರವಾಡ ನಮ್ಮ ಹೆಮ್ಮೆ: ಸ್ವಚ್ಛತಾ ಅಭಿಯಾನ

ಹುಬ್ಬಳ್ಳಿ_ಧಾರವಾಡ ಮಹಾನಗರ ಪಾಲಿಕೆ ವತಿಯಿಂದ "ನಮ್ಮ ಹುಬ್ಬಳ್ಳಿ-ಧಾರವಾಡ ನಮ್ಮ ಹೆಮ್ಮೆ ಧ್ಯೇಯದಡಿ ಅವಳಿ ನಗರವನ್ನು ಧೂಳು ಮುಕ್ತ ಹಾಗೂ ಸ್ವಚ್ಛ ನಗರಗಳನ್ನಾಗಿ ನಿಮರ್ಾಣ ಮಾಡುವ ಉದ್ದೇಶದಿಂದ ಹಮ್ಮಿಕೊಂಡ ವಿಶೇಷ ಸ್ವಚ್ಛತಾ ಅಭಿಯಾನಕ್ಕೆ ದಿ.03ರಂದು ಹುಬ್ಬಳ್ಳಿಯ ಸಿ.ಬಿ.ಟಿಯಿಂದ ಚಾಲನೆ ನೀಡಲಾಯಿತು. 

 ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧಿಕಾರಿಗಳು ಪ್ರಾಸ್ತಾವಿಕವಾಗಿ ಅಭಿಯಾನದ ಕುರಿತು ಮಾತನಾಡಿದರು. ಎಲ್ಲ ಉಪಸ್ಥಿತರು ಸ್ವತ: ಕಸ ಗುಡಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. 

ಅಭಿಯಾನ ಹುಬ್ಬಳ್ಳಿಯ ಸಿ.ಬಿ.ಟಿ ಯಿಂದ ಪ್ರಾರಂಭವಾಗಿ ಗೋಕುಲ ರಸ್ತೆಯ ವಿಮಾನ ನಿಲ್ದಾಣದ ದ್ವಾರ ಬಾಗಿಲಿನವರೆಗೆ ಎರಡು ಬದಿ ರಸ್ತೆಗಳಲ್ಲಿ ಚಾಲನೆ ನೀಡಿದ ತಕ್ಷಣದಿಂದ ಪ್ರತಿ 100 ಮೀ ರಸ್ತೆಗೆ ಇಬ್ಬರು ಕಾಮರ್ಿಕರಂತೆ ನಿಯೋಜಿಸಿ, ಎಲ್ಲ ಸ್ವಚ್ಛತಾ ಸಲಕರಣೆ, ಟ್ರಾಕ್ಟರ್, ಅವಶ್ಯಕ ಲೋಡರ್ಸ್, ತಳ್ಳುವ ಗಾಡಿಗಳು, ವ್ಹೀಲ್ ಬಾರೋ, ವ್ಹೀಲ್ ಬಿನ್ಸ್, ವ್ಹೀಡ್ ಕಟಿಂಗ್ ಯಂತ್ರ, ಸ್ವೀಪಿಂಗ್ ಯಂತ್ರಗಳ ಮೂಲಕ ಕಸಗುಡಿಸಿ ನಂತರ ಸೂಕ್ತ ಸ್ಥಳಗಳಲ್ಲಿ ಜೆಟ್ಟಿಂಗ್ ವಾಹನದ ಮೂಲಕ ನೀರು ಸಿಂಪಡಿಸಿ ರಸ್ತೆಗಳನ್ನು ಸ್ವಚ್ಚಗೊಳಿಸಲಾಯಿತು. 

ಅಭಿಯಾನಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪ್ರತಿ ವಾರ್ಡನಲ್ಲಿಯೂ ಒಂದು ರಸ್ತೆ ಆಯ್ಕೆ ಮಾಡಿ ವಾರ್ಡನ ಪಾಲಿಕೆ ಸದಸ್ಯರಿಂದ ಉದ್ಘಾಟಿಸಿ ಎಲ್ಲ 67 ವಾರ್ಡಗಳಲ್ಲಿ ಚಾಲನೆ ನೀಡಲಾಯಿತು. ಈ ಅಭಿಯಾನವು ದಿ:03.11.2018 ರಿಂದ ಪ್ರಾರಂಭವಾಗಿ ಮೂರು ತಿಂಗಳುಗಳ ಕಾಲ ನಿರಂತರವಾಗಿ ಜರುಗಲಿದೆ.

ಪ್ರತಿ ವಾಡರ್ಿನಲ್ಲಿ ಸಂಬಂಧಪಟ್ಟ ವಾಡರ್ಿನ ಆರೋಗ್ಯ ನಿರೀಕ್ಷಕರು, ಸಹಾಯಕ/ಕಿರಿಯ ಅಭಿಯಂತರರು ಮೇಲ್ವಿಚಾರಣೆ ಮಾಡುವರು ಹಾಗೂ ಉತ್ತಮ ಕಾರ್ಯನಿರ್ವಹಣೆಗೆ ಪಾಲಿಕೆಯಿಂದ ಚುರುಕುಮಾಡಲು ಪ್ರತಿ ವಲಯ ಕಚೇರಿಗೆ ಒಬ್ಬರಂತೆ ಹುಬ್ಬಳ್ಳಿ_ಧಾರವಾಡ ಮಹಾನಗರ ಪಾಲಿಕೆಯ ಎಲ್ಲ 12 ವಲಯ ಕಚೇರಿಗಳಿಗೆ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಹಾಗೂ ಜಿಲ್ಲಾಡಳಿತದಿಂದ ನಿಧರ್ಿಷ್ಟ ವ್ಯಾಪ್ತಿಗೆ ಒಬ್ಬೊಬ್ಬ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಜಾಗ್ರತೆ ಮೂಡಿಸಲು ಕಲಾ ತಂಡದ ಮೂಲಕ ಬೀದಿ ನಾಟಕ, ಜಾನಪದ ಗೀತೆಗಳನ್ನು ಪ್ರಸ್ತುತಪಡಿಸುವುದು ಹಾಗೂ ಜನಪ್ರತಿನಿಧಿಗಳನ್ನು, ಎನ್.ಎಸ್.ಎಸ್ ಘಟಕ, ಎಲ್ಲ ಸ್ವಯಂ ಸೇವಾ ಸಂಘಗಳನ್ನು ತೊಡಗಿಸಿಕೊಳ್ಳಲಾಗಿದೆ. ಬ್ರಹತ್ ತ್ಯಾಜ್ಯ ಉತ್ಪಾದಕರು ಹಾಗೂ ಅಂಗಡಿ ಮುಂಗಟ್ಟುಗಳು ಮೂಲದಲ್ಲಿಯೇ ಹಸಿ ಹಾಗೂ ಒಣ ಕಸ ವಿಂಗಡಣೆ ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ ರೋಟರಿ ಸಂಸ್ಥೆಯವರು ಪಾಲಿಕೆಗೆ 200 ಕಸದ ಡಬ್ಬಿಗಳನ್ನು (ಡಸ್ಟ್ ಬಿನ್) ಕೊಡುಗೆ ನೀಡಿದರು. 

ಕಾರ್ಯಕ್ರಮದಲ್ಲಿ ಪಾಲಿಕೆಯ ಮಹಾಪೌರ ಸುಧೀರ ಸರಾಫ, ಉಪಮಹಾಪೌರ ಮೇನಕಾ ಹುರಳಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಬಡಿಗೇರ, ಮಾಜಿ ಮಹಾಪೌರ ಡಿ.ಕೆ ಚವ್ಹಾಣ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಮಹೇಶ ಬುಲರ್ಿ, ಸ್ಮೀತಾ ಜಾಧವ, ಲೀನಾ ಮಿಸ್ಕೀನ್, ಬಸೀರ ಅಹ್ಮದ ಗುಡಮಾಲ್ ಮತ್ತು ಪಾಲಿಕೆಯ ಇತರೆ ಸದಸ್ಯರು, ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಜಂಟೀ ಆಯುಕ್ತ ಅಜೀಜ್ ದೇಸಾಯಿ, ಜಿಲ್ಲಾ ಯೋಜನಾ ನಿದರ್ೇಶಕ ವಿನಾಯಕ ಪಾಲನಕರ, ಪಾಲಿಕೆ ಅಧೀಕ್ಷಕ ಅಭಿಯಂತರ ಮಹೇಶ, ಎಸ್.ಡಬ್ಲೂ.ಎಮ್ ವಿಭಾಗದ ಕಾರ್ಯನಿವರ್ಾಹಕ ಅಭಿಯಂತರ ಗಿರೀಶ ತಳವಾರ, ಪಿ.ಆರ್.ಓ ಎಸ್.ಸಿ.ಬೇವೂರ, ಎಲ್ಲ ವಲಯ ಸಹಾಯಕ ಆಯುಕ್ತರು, ಪಾಲಿಕೆಯ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಇಂಜಿನಿಯರ್ಸ್, ಪಾಲಿಕೆ ಸಿಬ್ಬಂದಿ, ರೋಟರಿ ಕ್ಲಬ್, ಇನ್ನ್ರ್ ವ್ಹೀಲ್ ಕ್ಲಬ್, ಕ.ಸಾ.ಪ ಪಧಾದಿಕಾರಿಗಳು,  ಗ್ರೋ ಗ್ರೀನ್ ಪೆಡ್ಲರ್ಸ್, ಆಯ್.ಎಮ್.ಎ, ಹೊಟೇಲ್ ಅಸೋಸಿಯಶನ್ಸ್, ಸಾರ್ವಜನಿಕರು, ಎಸ್.ಎಚ್.ಜಿ, ವಿವಿಧ ವಸತಿ ನಿವಾಸಿಗಳ ಸಂಘ, ವಿವಿಧ ಸಂಘ ಸಂಸ್ಥೆಗಳು ಹಾಗೂ ಕಾಲೇಜ ವಿಧ್ಯಾಥರ್ಿಗಳು ಉಪಸ್ಥಿತರಿದ್ದರು.