ಬೈಲಹೊಂಗಲ 15: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2024-25 ನೆಯ ಸಾಲಿನ ಕ್ರೀಡಾ ಹಬ್ಬ ಹಮ್ಮಿಕೊಳ್ಳಲಾಗಿತ್ತು.
ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಕ್ರೀಡೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು. ಗೆಲುವಿನ ಹಿಂದೆ ನಿರಂತರ ಪ್ರಯತ್ನ ಮತ್ತು ಪರಿಶ್ರಮ ಇರುತ್ತದೆ. ಕ್ರೀಡಾ ಸಾಧಕರ ಜೀವನ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಅವರು ಹೇಳಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪಿ.ಎಸ್.ಗುರುನಗೌಡರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ ಅಧ್ಯಯನದ ಜೊತೆಗೆ ಯೋಗ, ವ್ಯಾಯಾಮ, ಆಟಗಳಿಗೂ ಆದ್ಯತೆ ನೀಡಬೇಕು ಎಂದರು. ಸಮತೋಲನ ಅಹಾರ ಸೇವನೆ, ನಿಯಮಿತ ಅಭ್ಯಾಸದ ಜೊತೆಗೆ ತಾಳ್ಮೆ, ಶಿಸ್ತು ಉತ್ತಮ ಕ್ರೀಡಾಪಟುಗಳ ಲಕ್ಷಣ ಎಂದು ಅವರು ಹೇಳಿದರು.
ಶಶಿಕುಮಾರ ಸೊಗಲದ, ಮಲ್ಲಪ್ಪ ದಳವಾಯಿ, ಕಾರ್ತಿಕ ಕುರಿ, ಬಸವರಾಜ ಗರಗದ, ರುದ್ರ್ಪ ಕುರಿ ಕ್ರೀಡಾ ಜ್ಯೋತಿ ಬೆಳಗಿಸುವುದರ ಮೂಲಕ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡೆಗಳ ಮಹತ್ವದ ಕುರಿತು ವಿದ್ಯಾರ್ಥಿನಿ ವಿದ್ಯಾ ಗರಗದ ಮಾತನಾಡಿದಳು.
ಎಸ್. ಡಿ.ಎಂ.ಸಿ ಪದಾಧಿಕಾರಿಗಳಾದ ರಾಮು ಮೆಕ್ಕೇದ, ರವೀಂದ್ರ ಮನಗುತ್ತಿ, ಮಂಜುಳಾ ಕುಲಕರ್ಣಿ, ಶಿಕ್ಷಕರಾದ ಜೆ.ಆರ್. ನರಿ, ಎಚ್.ವಿ.ಪುರಾಣಿಕ, ಎಸ್.ವಿ. ಬಳಿಗಾರ, ಎಂ.ಎನ್.ಕಾಳಿ, ಕೆ.ವೈ.ಯರಗಂಬಳಿಮಠ, ಎಸ್.ಬಿ.ಸಾಳುಂಕೆ, ಕ್ರೀಡಾ ಮಂತ್ರಿ ಕಾವೇರಿ ಸೊಗಲದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೃಥ್ವಿ ಗರಗದ ನಿರೂಪಿಸಿದರು. ಸ್ಪೂರ್ತಿ ಕುಲಕರ್ಣಿ ಸ್ವಾಗತಿಸಿದರು. ಸುನಿತಾ ಚಿಲಮೂರ ವಂದಿಸಿದರು.