ಲೋಕದರ್ಶನ ವರದಿ
ಶಿಗ್ಗಾವಿ : ಯಾವುದೇ ಸಂಘಟನೆಯು ನಿರಂತರ ಪರಿಶ್ರಮದಿಂದ ಗಟ್ಟಿಗೊಳಿಸುತ್ತಾ ಹೋದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಕರವೇ ಸ್ವಾಭಿಮಾನಿ ಬಣಕ್ಕೆ ನೂತನವಾಗಿ ಕಾನೂನು ಘಟಕಕ್ಕೆ ಸಲಹೆಗಾರರಾಗಿ ನೇಮಕಗೊಂಡ ನ್ಯಾಯವಾದಿ ಕೆ ಎಸ್ ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘಟನೆಯ ವಿವಿಧ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಬರುವ ತಿಂಗಳು ಅಗಷ್ಟ 24 ರಂದು ರಾಮನಗರದಲ್ಲಿ ನಡೆಯಲಿರುವ ಕನರ್ಾಟಕ ರಕ್ಷಣಾ ವೇದಿಕೆಯ (ಸ್ವಾಬಿಮಾನಿ ಬಣ)ದ 11 ನೇ ರಾಜ್ಯ ಸಮಾವೇಶ ನಡೆಸಲು ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು ಸಂಘಟನೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು ಜೇಡರ ಹುಳು ಗೂಡು ಕಟ್ಟಿ ಕೊಟ್ಟಲು ಯಾವ ರೀತಿ ಪರಿಶ್ರಮ ಪಟ್ಟು ಯಶಸ್ಸು ಕಾಣುತ್ತದೆಯೋ ಸಂಘಟನೆಯೂ ಸಹಿತ ಅಂತಹುದೆ ಪ್ರಯತ್ನದಿಂದ ಕೂಡಿದೆ ಎಂದರು.
ರಾಜ್ಯ ಉಪಾದ್ಯಕ್ಷ ರಾಮು ತಳವಾರ ಮಾತನಾಡಿ ಉತ್ತರ ಕನರ್ಾಟಕ ಭಾಗದಲ್ಲಿ ದಕ್ಷಿಣ ಭಾರತದಲ್ಲೆ ಅತಿ ದೊಡ್ಡದಾದ ಉನ್ನತ ತಂತ್ರಜ್ಞಾನದಿಂದ ಕೂಡಿರುವ ಸುಸಜ್ಜಿತ ಆಸ್ಪತ್ರೆ ನಮರ್ಾಣಕ್ಕಾಗಿ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಗಡಿ ಅಭಿವೃದ್ದಿ ಪ್ರಾಧಿಕಾರ ಕಛೇರಿ ಸದ್ಯ ರಾಜ್ಯಧಾನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಉತ್ತರ ಕನರ್ಾಟಕದ ಗಡಿ ಭಾಗದ ಜಿಲ್ಲೆಗಳಿಗೆ ಸ್ಥಳಾಂತರ ಮಾಡುವ ಬಗ್ಗೆ ಸಂಘಟನೆಯು ಹೋರಾಟ ಮಾಡುತ್ತ ಬಂದಿದ್ದು ರಾಮ ನಗರದಲ್ಲಿ ನಡೆಯುವ ಸಮಾವೇಶದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದರು.
ತಾಲೂಕಾ ಘಟಕದ ಅದ್ಯಕ್ಷ ಬಸಲಿಂಗಪ್ಪ ಮಲ್ಲೂರ ಮಾತನಾಡಿ ಸಂಗಟನೆಯು ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ರೀತಿಯಲ್ಲಿ ಒತ್ತು ಕೊಟ್ಟು ಜನತೆಗೆ ಸೂಕ್ತ ನ್ಯಾಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಜೊತೆಗೆ ಸಂಘಟನೆಗೆ ಜಿಲ್ಲಾ ಸಂಚಾಲಕರಾಗಿ ಹಾಗೂ ತಾಲೂಕಾ ಉಸ್ತುವಾರಿ ಅದ್ಯಕ್ಷರಾಗಿ ನೇಮಕಗೊಂಡ ಬಸಲಿಂಗಪ್ಪ ನರಗುಂದ ಸೇರಿದಂತೆ ಅನೇಕರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪರಸಭೆ ಸದಸ್ಯೆ ಹಾಗೂ ನ್ಯಾಯವಾದಿ ವಿ ಪಿ ಬಾಗೂರ (ನೆತರ್ಿ), ಜಿಲ್ಲಾ ಉಪಾದ್ಯಕ್ಷ ಸುರೇಶ ವನಹಳ್ಳಿ, ಜಿಲ್ಲಾ ಸಂಘಟನಾ ಕಾರ್ಯದಶರ್ಿ ಮಾಲತೇಶ ಕಾಳೆ, ಸುರೇಶ ಮುರಾರಿ, ಪವಿತ್ರಾ ಮೋಟಳ್ಳಿ, ಭರಮಪ್ಪ ದೊಡ್ಡಮನಿ, ಮಲ್ಲಮ್ಮ ಸೋಮನಕಟ್ಟಿ, ಸಂಜನಾ ರಾಯ್ಕರ್, ಫಕ್ಕೀರೇಶ ಕೋರಿಶೆಟ್ಟರ, ತೋಟಪ್ಪ ಕೋರಿವಾಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.