ರೈತರ ಮನಸ್ಸು ಸಣ್ಣದಾಗಬಾರದು. ಸ್ವಾಭಿಮಾನದಿಂದ ರೈತರು ಬದುಕಬೇಕು
ಮುಂಡರಗಿ 27 : ರೈತ ಮಹಿಳೆಯರು ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕಾರ್ಯಕ್ಕೆ ಕೆಲಸ ಮಾಡುವದರಿಂದ ಗೌರವಿಸಬೇಕು. ರೈತರ ಮನಸ್ಸು ಸಣ್ಣದಾಗಬಾರದು. ಸ್ವಾಭಿಮಾನದಿಂದ ರೈತರು ಬದುಕಬೇಕು ಎಂದು ಶಾಸಕ, ಖನಿಜ ನಿಗಮದ ಅಧ್ಯಕ್ಷ ಜಿ.ಎಸ್.ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಅನುಭವಿ ಅನ್ನದಾತರಿಗೆ ಗೌರವ ಸಮರಾ್ಣ ಸಮಾರಂಭ ಮತ್ತು ಎಪಿಎಂಸಿ ಮುಂಭಾಗದಲ್ಲಿ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ವೃತ್ತ, ಎಪಿಎಂಸಿ ಆವರಣದಲ್ಲಿ ರೈತ ಚೇತನ ಕೆ.ಎಸ್.ಪುಟ್ಟಣ್ಣಯ್ಯ ವೃತ್ತ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತ ಸಂಘದವರು ತಮ್ಮ ಕರಪತ್ರದಲ್ಲಿ ರೈತರು ಸಾಲಗಾರರಲ್ಲ. ಸರಕಾರವೇ ಬಾಕಿದಾರ ಆಗಿದೆ. ರೈತರದು ಕೊಡುವ ಕೈಯ ಆಗಬೇಕು. ಬೇಡುವ ಕೈಯ ಆಗಬಾರದು. ತಂತ್ರಜ್ಞಾನವನ್ನು ಬಳಸಿಕೊಂಡು ರೈತರು ಸ್ವಾವಲಂಬಿ ಆಗಬೇಕು. ರೈತರ ಸಾಲ ಮನ್ನಾದಿಂದ ಸ್ವಾಭಿಮಾನವು ಕುಸಿಯಲಿದೆ.ರೈತರಿಗೆ ಅನಿವಾರ್ಯ ಎನಿಸಿದರೇ ಸಾಲ ಮನ್ನಾ ಮಾಡಲು ಸರಕಾರಕ್ಕೆ ಒತ್ತಾಯಿಸೋಣ. ಕೆ.ಎಸ್.ಪುಟ್ಟಣ್ಣಯ್ಯನವರು ಕಲ್ಯಾಣ ಕೆಲಸಗಳಿಂದ ಅಜರಾಮರವಾಗಿ ಉಳಿದಿದ್ದಾರೆ. ಒಂದು ವರ್ಷದೊಳಗೆ ವೀರ ಸಂಗೊಳ್ಳಿ ರಾಯಣ್ಣ ಮತ್ತು ಕೆ.ಎಸ್.ಪುಟ್ಟಣ್ಣಯ್ಯನವರ ಉತ್ಥಳಿಯನ್ನು ಅನಾವರಣಗೊಳಿಸುವ ಕೆಲಸ ಆಗಬೇಕಿದೆ ಎಂದು ಜಿ.ಎಸ್.ಪಾಟೀಲ ಹೇಳಿದರು.
ಈ ವೇಳೆ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಗೌರವಾಧ್ಯಕ್ಷರು ಚಾಮರಸ ಮಾಲೀಪಾಟೀಲ, ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ, ಮುತ್ತನಗೌಡ ಚೌಡರೆಡ್ಡಿ, ಡಿ.ಡಿ.ಮೋರನಾಳ, ಎಸ್.ಡಿ.ಮಕಾನದರ , ಶೋಭಾ ಮೇಟಿ, ರಾಘವೇಂದ್ರ ಕುರಿಯವರ, ಮಂಜುನಾಥ ಮುಂಡವಾಡ, ರಾಘು ಕುರಿ, ಮುದಿಯಪ್ಪ ಕುಂಬಾರ, ಅಶ್ವೀನಿ ಬೀಡನಾಳ, ಗೋಪಾಲ. ಶರಣಪ್ಪ ಕಂಬಳಿ, ಹುಸೇನಸಾಬ ಕುರಿ ಇತರರು ಇದ್ದರು.