ಸಂಘಟನೆಯಿಂದ ಊರಿನ ಅಭಿವೃದ್ಧಿ ಸಾಧ್ಯ: ಸುನೀಲ್ ನಾಯ್ಕ

ಲೋಕದಶ್ನ ವರದಿ

ಹೊನ್ನಾವರ: `ಯುವಕರು ಸಾಮಾಜಿಕ ಕಳಕಳಿಯನ್ನು ಹೊಂದಬೇಕು, ಸಂಘಟನೆಯಿಂದ ಊರಿನ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಸುನೀಲ್ ನಾಯ್ಕ ಹೇಳಿದರು. ತಾಲೂಕಿನ ಬಳ್ಕೂರನಲ್ಲಿ  ಕನರ್ಾಟಕ ಕ್ರಾಂತಿರಂಗದ ನೂತನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಬಳ್ಕೂರು ಹೆಚ್ಚು ಯುವ ಪಡೆಯನ್ನು ಹೊಂದಿದ್ದು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಅವಿರತ ಪ್ರಯತ್ನ ಮಾಡುತ್ತಿದೆ. ಇಂತಹ ಸಂಘಟನೆಯಿಂದ ಗ್ರಾಮದ ಅಭಿವೃಧಿ ಮಾಡಲು ಸಾಧ್ಯವಾಗುವುದು ಎಂದರು,

ಅಧ್ಯಕ್ಷತೆ ವಹಿಸಿದ ಬಳ್ಕೂರ ಗ್ರಾ ಪಂ ಅಧ್ಯಕ್ಷ ಕೇಶವ ನಾಯ್ಕ ಮಾತನಾಡಿ ಕ್ರಾಂತಿರಂಗದ ಉದ್ದೇಶ ನಮ್ಮಲಿನ ಯುವಕರನ್ನು ಜಾಗ್ರತಿ ಮಾಡಬೇಕು ಆಮೂಲಕ ನಮ್ಮೂರಿನ ಅಭಿವೃದ್ದಿಯಾಗಬೇಕು. ಜನರ ಮೂಢನಂಬಿಕೆಯನ್ನು ಹೋಗಲಾಡಿಸುವ ಕೇಲಸವನ್ನು ಮಾಡಬೇಕು. ಅವರಿಗೆ ಶಿಕ್ಷಣವನ್ನು ಕೋಡಿಸುವ ಕೆಲಸ ಮಾಡಬೇಕು ಆಮೂಲಕ ಅಭಿವೃದ್ದಿ ಕಾಣಬೇಕು ಎಂದರು. ನಿವೃತ್ತ ಸೈನಿಕ ಮಹೇಶ ದಾಮೋದರ ಭಟ್ಟ ಹಾಗೂ ಅಶೋಕ ನಾರಾಯಣ ನಾಯ್ಕ, ಶಾಸಕ ಸುನೀಲ್ ನಾಯ್ಕ ಮತ್ತು ತಾಲೂಕಾ ದಂಡಾಧಿಕಾರಿ ವಿ ಆರ್ ಗೌಡ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವಿಕರಿಸಿದ ನಿವೃತ್ತ ಸೈನಿಕ ಮಹೇಶ ದಾಮೋದರ ಭಟ್ಟ ಮಾತನಾಡಿ ನನ್ನ ಉರಿನ ಯುವ ಸಮುದಾಯವು ಸಂಘಟಿತವಾಗುತ್ತಿರುವುದು ಶೈಕ್ಷಣಿ ಮಟ್ಟವನ್ನು ಸುಧಾರಿಸಿ ಪ್ರಜ್ಞಾವಂತರಾಗಿರುವುದರ ಸಂಕೇತ. ನಮ್ಮ ಉರಿನ ಯುವ ಪ್ರತಿಭೆ ಸೈನ್ಯಕ್ಕೆ ಸೇರಿ ದೇಶಕ್ಕೆ ಸೇವೆ ಸಲ್ಲಿಸುವಂತಾಗಲಿ ಎಂದರು. ಕ್ರಾಂತಿರಂಗದ ಜಿಲ್ಲಾ ಅಧ್ಯಕ್ಷ ಮಂಗಲದಾಸ ನಾಯ್ಕ, ತಾಲೂಕಾ ಅಧ್ಯಕ್ಷ ಎಸ್ ಡಿ ಹೆಗಡೆ ಹಾಗೂ ಸದಸ್ಯರು ನೂತನ ಬಳ್ಕೂರ ಘಟಕದ ಅದ್ಯಕ್ಷ ದೇವೆಂದ್ರ ನಾಯ್ಕ ಹಾಗೂ ಸದಸ್ಯರಿಗೆ ಸಂಘದ ಬಾವುಟ ನೀಡಿ ಸ್ವಾಗತಿಸಿಕೊಂಡರು, ಅಧ್ಯಕ್ಷರಾಗಿ ಅದ್ದಿಕಾರ ಪಡೆದುಕೋಂಡ ದೇವೆಂದ್ರ ನಾಯ್ಕ ಇವರಿಗೆ ಕೇಳಗಿನಕೇರಿ ಯುವಕರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬಳ್ಕೂರ ಆರೋಗ್ಯ ಕೇಂದ್ರವನ್ನು ಮೇಲದಜರ್ೆಗೆರಿಸಿ 24 ಘಂಟೆ ಸೇವೆ ನೀಡುವಂತೆ ಮಾಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಬಳ್ಕೂರ ವಿ ಎಸ್ ಎಸ್ ಬ್ಯಾಂಕ್ ಉಪಾದ್ಯಕ್ಷ ಗಣಪತಿ ನಾಯ್ಕ ಬಿ ಟಿ, ಕೃಷ್ಣ ನಾಯ್ಕ ಆಸ್ರಕೇರಿ, ಉರಿನ ಹಿರಿಯ ಮುಖಂಡರಾದ ಸುಬ್ರಾಯ ನಾಯ್ಕ, ಸೈಮನ್ ರೋಡ್ರಗಿಸ್, ಕೃಷ್ಣ ಕರಿಮಣಿ, ಕ್ರಾಂತರಂಗದ ಮಂಗಲದಾಸ ನಾಯ್ಕ, ಎಸ್ ಡಿ ಹೆಗಡೆ, ಜ್ಞಾನೇಶ್ವರ ನಾಯ್ಕ, ದೇವೆಂದ್ರ ನಾಯ್ಕ ಮುಂತಾದವರು ಇದ್ದರು. ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ನವಿನ್ಕುಮಾರ ಸುಗಾವಿ ಶಿಶರ್ಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.